/newsfirstlive-kannada/media/post_attachments/wp-content/uploads/2025/01/Plan-1.jpg)
ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ (California) ಭಾರೀ ವಿಮಾನ ಅಪಘಾತ ಸಂಭವಿಸಿದೆ. ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಇದುವರೆಗೆ ಅಪಘಾತದಲ್ಲಿ ಇಬ್ಬರು ಪ್ರಯಾಣಿಕರು ಜೀವ ಕಳೆದುಕೊಂಡಿದ್ದು, 18 ಮಂದಿ ಗಾಯಗೊಂಡಿದ್ದಾರೆ.
ಗುರುವಾರ ಮಧ್ಯಾಹ್ನ ದಕ್ಷಿಣ ಕ್ಯಾಲಿಫೋರ್ನಿಯಾದ ವಾಣಿಜ್ಯ ಕಟ್ಟಡವೊಂದಕ್ಕೆ ಸಿಂಗಲ್ ಇಂಜಿನ್ ವಿಮಾನ ಡಿಕ್ಕಿ ಹೊಡೆದು ಪತನಗೊಂಡಿದೆ. ವಿಮಾನ ಹಾರಾಟ ನಡೆಸುತ್ತಿದ್ದಾಗ ಏಕಾಏಕಿ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ. ಪತನ ಆಗುತ್ತಿದ್ದಂತೆಯೇ ಕಪ್ಪು ಹೊಗೆ ದಟ್ಟವಾಗಿ ಆವರಿಸಿದೆ. ರಕ್ಷಣಾ ಕಾರ್ಯಾಚರಣೆ ಶುರುವಾಗಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ:ಹೆಂಡತಿಗೆ ಫ್ರೀ, ಗಂಡನಿಗೆ ಡಬಲ್ ರೇಟ್.. ಬಸ್ ದರ ಹೆಚ್ಚಳಕ್ಕೆ ಭಾರೀ ಆಕ್ರೋಶ
ಕಳೆದ ಭಾನುವಾರ ದಕ್ಷಿಣ ಕೋರಿಯಾದಲ್ಲಿ ವಿಮಾನ ಪತನಗೊಂಡಿತ್ತು. ತುರ್ತು ಲ್ಯಾಂಡಿಂಗ್ ವೇಳೆ ಸ್ಕಿಡ್ ಆಗಿ ವಿಮಾನ ದುರ್ಘಟನೆಗೆ ಒಳಗಾಗಿತ್ತು. ಈ ದುರಂತದಲ್ಲಿ ಬರೋಬ್ಬರಿ 179 ಮಂದಿ ಪ್ರಾಣ ಕಳೆದುಕೊಂಡಿದ್ದರು. ಬೆನ್ನಲ್ಲೇ ಅಮೆರಿಕದಲ್ಲಿ ವಿಮಾನ ದುರಂತ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ