ಎದುರಾಳಿ ಹಣಿಯಲು ನಾಯಕ ರೂಪಿಸಿದ ರಣತಂತ್ರ ಸಕ್ಸಸ್
ಬೆಂಗಳೂರಿನ ಸಕ್ಸಸ್ನ ಬಹುಪಾಲು ಕ್ರೆಡಿಟ್ ಕೊಹ್ಲಿಗೆ ಸಲ್ಲಬೇಕಾ..?
ಕೋಟಿ ವೀರ ಕ್ಯಾಮರೂನ್ ಗ್ರೀನ್ ಕಮ್ಬ್ಯಾಕ್ ಪ್ಲಸ್ ಪಾಯಿಂಟ್
ಫಸ್ಟ್ ಹಾಫ್ ಐಪಿಎಲ್ನಲ್ಲಿ ಆರ್ಸಿಬಿ ಫ್ಯಾನ್ಸ್ ನೊಂದು ಬೆಂದಿದ್ರು. ಸತತ ಸೋಲಿನ ಬೇಸರ, ಹತಾಶೆ, ನೋವು ಬಿಡದೇ ಕಾಡಿತ್ತು. ಆದ್ರೆ, ಸೆಕೆಂಡ್ ಹಾಫ್ನಲ್ಲಿ ಭರಪೂರ ಎಂಟರ್ಟೈನ್ಮೆಂಟ್ ಫ್ಯಾನ್ಸ್ಗೆ ಸಿಕ್ಕಿದೆ. ಈ ಸೀಸನ್ನಲ್ಲಿ ಆರ್ಸಿಬಿಯ ಕೆಜಿಎಫ್ ಪಾರ್ಟ್- 1 ವರ್ಕೌಟ್ ಆಗ್ಲಿಲ್ಲ. ಆದ್ರೆ, ಪಾರ್ಟ್- 2 ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಫ್ಯಾನ್ಸ್ಗಂತೂ ಪೈಸಾ ವಸೂಲ್ ಎಂಟರ್ಟೈನ್ಮೆಂಟ್ ಸಿಗ್ತಿದೆ.
ಬಹುಷಃ ಕ್ರಿಕೆಟ್ ಲೋಕದಲ್ಲೇ ಯಾರೂ ನಿರೀಕ್ಷೆ ಮಾಡಿರಲಿಲ್ಲ ಅನ್ಸುತ್ತೆ. ಹೀಗಾಗುತ್ತೆ ಅಂತಾ. ಈ ಸೀಸನ್ ಐಪಿಎಲ್ ಟೂರ್ನಿಯನ್ನ ಹೊಸ ಅಧ್ಯಾಯ ಅಂತಾ ಶುರು ಮಾಡಿದ್ದ ಆರ್ಸಿಬಿ, ಹಳೆ ಸಂಪ್ರದಾಯವನ್ನೇ ಮುಂದುವರೆಸಿತ್ತು. ಮೊದಲ 8 ಪಂದ್ಯಗಳಲ್ಲಿ ಅತ್ಯಂತ ಹೀನಾಯ ಪರ್ಫಾಮೆನ್ಸ್ ನೀಡಿತ್ತು. ಈ ಕಳಪೆಯಾಟ ನೋಡಿ ಲಾಯಲ್ ಫ್ಯಾನ್ಸ್ ಕೂಡ ರೊಚ್ಚಿಗೆದ್ದಿದ್ರು. ಆಗ ಬಹುತೇಕ ಎಲ್ಲರೂ ಈ ಸೀಸನ್ನಲ್ಲಿ ಆರ್ಸಿಬಿ ಕಥೆ ಮುಗೀತು ಎಂದೇ ತಿರ್ಮಾನಿಸಿಬಿಟ್ಟಿದ್ರು.
ಇದನ್ನೂ ಓದಿ: ವಿಲನ್ಗಳೇ ಹೀರೋಗಳಾದ ಕಥೆ.. ಈ ಯಂಗ್ ಪ್ಲೇಯರ್ ಆಡಿದ ಪಂದ್ಯಗಳಲ್ಲಿ RCBಗೆ ರೋಚಕ ಗೆಲುವು
ನೋಡಿ, ಇದು ಒಂದು ಪಂದ್ಯದ ವಿಚಾರ. ಒಂದು ಪಂದ್ಯದಲ್ಲಿ ಕೆ.ಜಿ.ಎಫ್ ಚನ್ನಾಗಿ ಆಡಿದ್ರೆ, ನಮ್ಮನ್ನ ಯಾರೂ ತಡೆಯೋಕೆ ಆಗಲ್ಲ.
ಮೊಹಮ್ಮದ್ ಸಿರಾಜ್, ಆರ್ಸಿಬಿ ಬೌಲರ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಡೆ ಸತತ ಸೋಲಿನ ಸುಳಿಯಲ್ಲಿ ಸಿಲುಕಿದ್ದಾಗ ಸಿರಾಜ್ ಆಡಿದ ಮಾತುಗಳಿವು. ತಂಡ ಹೀನಾಯ ಸ್ಥಿತಿ ತಲುಪಿದ್ರೂ, ನಾವು ಪುಟಿದೇಳುತ್ತೇವೆ ಅನ್ನೋ ವಿಶ್ವಾಸ ಸಿರಾಜ್ ಮಾತುಗಳಲ್ಲಿತ್ತು. ಆ ವಿಶ್ವಾಸಕ್ಕೆ ಕಾರಣಕ್ಕೆ ಕೆ.ಜಿ.ಎಫ್ ಜೋಡಿ. ಸದ್ಯ ಆರ್ಸಿಬಿಯ ಕಮ್ಬ್ಯಾಕ್ ಹಿಂದಿನ ಸೀಕ್ರೆಟ್ ಕೂಡ ಇದೇ ಕೆ.ಜಿ.ಎಫ್ ಜೋಡಿಯೇ ಆಗಿದೆ. ಆದ್ರೆ, ಇದು ಕೆ.ಜಿ.ಎಫ್ ಪಾರ್ಟ್- 2 ಕಹಾನಿ.
ವಿಧಿಯಾಟವನ್ನೇ ಬದಲಿಸಿದ ತ್ರಿಮೂರ್ತಿಗಳು.!
ಕ್ಯಾಪ್ಟನ್ ಫಾಫ್ ಡುಪ್ಲೆಸಿ, ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್ವೆಲ್.. ಈ ಮೂವರನ್ನ ಆರ್ಸಿಬಿ ಅಭಿಮಾನಿ ಕೆಜಿಎಫ್ ಸ್ಟಾರ್ಸ್ ಎಂದೇ ಕರೀತಾ ಇದ್ರು. ಕಳೆದ 2 ಸೀಸನ್ಗಳಲ್ಲಿ ಈ ತ್ರಿಮೂರ್ತಿಗಳು ಅಂತಾ ಆಟವಾಡಿದ್ರು. ಹೀಗಾಗಿ ಈ ಸೀಸನ್ ಆರಂಭಕ್ಕೂ ಮುನ್ನ ಕೂಡ ಇವ್ರ ಮೇಲೆ ತೀವ್ರವಾದ ನಿರೀಕ್ಷೆಯಿತ್ತು. ಆದ್ರೆ, ಅಖಾಡದಲ್ಲಿ ಹುಸಿಯಾಯ್ತು. ಗ್ಲೇನ್ ಮ್ಯಾಕ್ಸ್ವೆಲ್ ಅಂತೂ ಅಟ್ಟರ್ಫ್ಲಾಫ್ ಶೋ ನೀಡಿದ್ರು. ಆರ್ಸಿಬಿ ಫಸ್ಟ್ ಹಾಫ್ನಲ್ಲಿ ಹೀನಾಯ ಸ್ಥಿತಿ ತಲುಪಿದ್ದಕ್ಕೆ ಇದೂ ಒಂದು ಕಾರಣವೇ.
ಮ್ಯಾಕ್ಸ್ವೆಲ್ ಫ್ಲಾಪ್.. ಸಿಡಿದೆದ್ದ ಕ್ಯಾಮರೂನ್ ಗ್ರೀನ್..!
ಗ್ಲೇನ್ ಮ್ಯಾಕ್ಸ್ವೆಲ್ ನೀಡಿದ ಫ್ಲಾಪ್ ಶೋ ಆರ್ಸಿಬಿಗೆ ತೀವ್ರವಾದ ಹಿನ್ನಡೆ ತಂದಿಟ್ಟಿತ್ತು. ಆದ್ರೆ, ಸೆಕೆಂಡ್ ಹಾಫ್ನಲ್ಲಿ ಆಸಿಸ್ ಮಿಸೈಲ್, ಕೋಟಿ ವೀರ ಕ್ಯಾಮರೂನ್ ಗ್ರೀನ್ ಸಿಡಿದೆದ್ರು. ಅಸಲಿ ಹೊಸ ಅಧ್ಯಾಯ ಶುರುವಾಗಿದ್ದು ಇಲ್ಲಿಂದಲೇ ನೋಡಿ. ಕೆಜಿಎಫ್ ಜೋಡಿಯ ಆಟ ವರ್ಕೌಟ್ ಆಗ್ಲಿಲ್ಲ.. ಕೆಜಿಎಫ್ ಪಾರ್ಟ್ 2 ಕಮಾಲ್ ಮಾಡಿಬಿಡ್ತು.
ಕಿಂಗ್ ಕೊಹ್ಲಿ ರಣಾರ್ಭಟ, ಎದುರಾಳಿಗಳಿಗೆ ನಡುಕ.!
ಫಸ್ಟ್ ಹಾಫ್ನಲ್ಲಿ ಏಕಾಂಗಿಯಾಗಿ ಹೋರಾಡಿದ್ದ ವಿರಾಟ್ ಕೊಹ್ಲಿ ಸೆಕೆಂಡ್ ಹಾಫ್ನಲ್ಲೂ ಸಾಲಿಡ್ ಬ್ಯಾಟಿಂಗ್ ನಡೆಸಿದ್ರು. ಬೌಲರ್ಗಳ ಮೇಲೆ ಸವಾರಿ ಮಾಡಿದ ಕೊಹ್ಲಿ, ಕನ್ಸಿಸ್ಟೆಂಟ್ ಆಗಿ ರನ್ಗಳಿಸಿದ್ರು. ಬ್ಯಾಟಿಂಗ್ ಮಾತ್ರವಲ್ಲ, ಫೀಲ್ಡಿಂಗ್ ವೇಳೆಯೋ ಕೊಹ್ಲಿ, ತಂಡಕ್ಕೆ ನೆರವಾದ್ರು. ನಾಯಕನಲ್ಲದಿದ್ರೂ, ಲೀಡ್ ರೋಲ್ ನಿಭಾಯಿಸಿದ ಕೊಹ್ಲಿ, ಬೌಲರ್ಗಳಿಗೆ ಪ್ರತಿ ಪಂದ್ಯದಲ್ಲೂ ಅಗತ್ಯ ಟಿಪ್ಸ್ ನೀಡ್ತಿದ್ರು. ಫೀಲ್ಡ್ ಪ್ಲೇಸ್ಮೆಂಟ್, ಗೇಮ್ಪ್ಲಾನ್ಗಳಲ್ಲಿ ನಾಯಕ ಫಾಫ್ ಡುಪ್ಲೆಸಿಗೆ ನೆರವಾದ್ರು. ಆರ್ಸಿಬಿ ಸಕ್ಸಸ್ನ ಬಹುಪಾಲು ಕ್ರೆಡಿಟ್ ಕೊಹ್ಲಿಗೆ ಸಲ್ಲಬೇಕು.
ಫಾರ್ಮ್ಗೆ ಮರಳಿದ ಕ್ಯಾಪ್ಟನ್, ಫಾಫ್ ಫೆಂಟಾಸ್ಟಿಕ್.!
ಫಸ್ಟ್ ಹಾಫ್ನಲ್ಲಿ ರನ್ಗಳಿಕೆಗೆ ಆರ್ಸಿಬಿ ಕ್ಯಾಪ್ಟನ್ ಫಾಫ್ ಡುಪ್ಲೆಸಿ ತಿಣುಕಾಡಿದ್ರು. ನಾಯಕನಾಗಿ ಫಾಫ್ ಫುಲ್ ಫ್ಲಾಪ್ ಆಗಿದ್ರು. ಸೆಕೆಂಡ್ ಹಾಫ್ನಲ್ಲಿ ಸಾಲಿಡ್ ಕಮ್ಬ್ಯಾಕ್ ಮಾಡಿದ್ರು. ಫಾರ್ಮ್ ಕಂಡುಕೊಂಡ ಡುಪ್ಲೆಸಿ ಸರಾಗವಾಗಿ ರನ್ ಕಲೆ ಹಾಕಿದ್ರು. ಎದುರಾಳಿಗಳನ್ನ ಹಣಿಯಲು ನಾಯಕ ರೂಪಿಸಿದ ರಣತಂತ್ರಗಳೂ ಸಕ್ಸಸ್ ಆದ್ವು. ಫಾಫ್ ಡುಪ್ಲೆಸಿಯ ಫೆಂಟಾಸ್ಟಿಕ್ ಆಟ ತಂಡವನ್ನ ಇದೀಗ ಪ್ಲೇ ಆಫ್ಗೆ ಕ್ವಾಲಿಫೈ ಮಾಡಿದೆ.
ಇದನ್ನೂ ಓದಿ: KSRTC ಬಸ್- ಕಾರಿನ ಮಧ್ಯೆ ಭಯಾನಕ ಡಿಕ್ಕಿ.. ಸ್ಥಳದಲ್ಲೇ ಚಾಲಕ ಸಾವು, ನಾಲ್ವರ ಸ್ಥಿತಿ ಚಿಂತಾಜನಕ
ಬ್ಯಾಟಿಂಗ್, ಬೌಲಿಂಗ್ನಲ್ಲಿ ಕ್ಯಾಮರೂನ್ ಕಮಾಲ್.!
ವಿರಾಟ್ ಕೊಹ್ಲಿ, ಫಾಫ್ ಡುಪ್ಲೆಸಿಗೆ ಕೋಟಿ ವೀರ ಕ್ಯಾಮರೂನ್ ಗ್ರೀನ್ ಸಾಥ್ ನೀಡಿದ್ರು. ಬ್ಯಾಟಿಂಗ್ನಲ್ಲಿ ಕನ್ಸಿಸ್ಟೆಂಟ್ ಆಗಿ ರನ್ಗಳಿಸಿದ ಗ್ರೀನ್, ಬೌಲಿಂಗ್ನಲ್ಲಿ ತಂಡದ ಗೇಮ್ಪ್ಲಾನ್ಗಳನ್ನ ಸಖತ್ತಾಗಿ ವರ್ಕೌಟ್ ಮಾಡಿದ್ರು. ಕೋಟಿ ವೀರ ಕ್ಯಾಮರೂನ್ ಗ್ರೀನ್ ಕಮ್ಬ್ಯಾಕ್ ತಂಡಕ್ಕೆ ಪ್ಲಸ್ ಪಾಯಿಂಟ್ ಆಯ್ತು.
ಕೆ.ಜಿ.ಎಫ್ ಪಾರ್ಟ್- 2, ಐಪಿಎಲ್ ಸೆಕೆಂಡ್ ಹಾಫ್ನಲ್ಲಿ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ಫ್ಯಾನ್ಸ್ಗೆ ಪೈಸಾ ವಸೂಲ್ ಎಂಟರ್ಟೈನ್ಮೆಂಟ್ ನೀಡ್ತಾ, ತಂಡವನ್ನ ಪ್ಲೇ ಆಫ್ ದಡವನ್ನೂ ಸೇರಿಸಿದೆ. ಮುಂದಿನ ಪಂದ್ಯಗಳಲ್ಲೂ ಈ ಜೋಡಿ ಹೀಗೆ ಆಡಿದ್ರೆ, ಕಪ್ ನಮ್ದಾಗೋದ್ರಲ್ಲಿ ಡೌಟೇ ಬೇಡ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ