/newsfirstlive-kannada/media/post_attachments/wp-content/uploads/2025/04/KKR_PBKS.jpg)
ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ನಡೆಯುತ್ತಿರುವ 44ನೇ ಐಪಿಎಲ್ ಪಂದ್ಯದ ವೇಳೆ ಮಳೆ ಬಂದ ಕಾರಣ ಮ್ಯಾಚ್ ಅನ್ನು ನಿಲ್ಲಿಸಲಾಗಿದೆ.
ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಕೆಕೆಆರ್ ತಂಡಗಳು ಇಂದು ಸಂಜೆ 7:30ಕ್ಕೆ ಕಣಕ್ಕೆ ಇಳಿದಿವೆ. ಪಂಜಾಬ್ ಕಿಂಗ್ಸ್ ತಂಡದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ತೆಗೆದುಕೊಂಡಿದ್ದರು. ಅದರಂತೆ ಪಂಜಾಬ್ ಈಗಾಗಲೇ ಮೊದಲ ಬ್ಯಾಟಿಂಗ್ ಪೂರ್ಣಗೊಳಿಸಿದ್ದಾರೆ. ಆರಂಭಿಕ ಬ್ಯಾಟ್ಸ್ಮನ್ಳಾದ ಪ್ರಿಯಾಂಶ್ ಆರ್ಯ ಮತ್ತು ಪ್ರಭಾಸಿಮ್ರನ್ ಅವರ ಸಿಡಿಲಬ್ಬರದ ಅರ್ಧಶತಕದಿಂದ ಕೋಲ್ಕತ್ತಾ ನೈಟ್ ರೈಡರ್ಸ್ಗೆ 202 ರನ್ಗಳ ಬೃಹತ್ ಮೊತ್ತದ ಟಾರ್ಗೆಟ್ ಅನ್ನು ಪಂಜಾಬ್ ಕಿಂಗ್ಸ್ ನೀಡಿದೆ.
ಇದನ್ನೂ ಓದಿ: 6, 6, 6, 6, 6, 6; ಓಪನರ್ಸ್ ಆರ್ಯ, ಪ್ರಭಾಸಿಮ್ರನ್ ಘರ್ಜನೆ.. ಬೃಹತ್ ರನ್ಗಳ ಟಾರ್ಗೆಟ್
ಆದರೆ ಕೆಕೆಆರ್ನ ಎರಡನೇ ಇನ್ನಿಂಗ್ಸ್ ಆರಂಭವಾಗಿ ಓಪನರ್ ಬ್ಯಾಟರ್ಗಳಾದ ಸುನಿಲ್ ನೈರ್ ಹಾಗೂ ರಹಮಾನುಲ್ಲಾ ಗುರ್ಬಾಜ್ ಸರಿಯಾಗಿ ಒಂದು ಓವರ್ ಆಡಿ 7 ರನ್ಗಳನ್ನು ಗಳಿಸಿದ್ದರು. ಇನ್ನೊಂದು ಓವರ್ ಆರಂಭಿಸಬೇಕು ಎನ್ನುವಷ್ಟರಲ್ಲಿ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮಳೆ ಜೋರಾಗಿ ಬಂದಿದ್ದರಿಂದ ಕೆಕೆಆರ್ ಮತ್ತು ಪಂಜಾಬ್ ನಡುವಿನ ಪಂದ್ಯವನ್ನು ಸದ್ಯಕ್ಕೆ ಸ್ಟಾಪ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಪಂದ್ಯದ ವೇಳೆ ಮಳೆ ಬಂದಿದ್ದರಿಂದ ಮೈದಾನದಿಂದ ಅಂಪೈರ್ ಸೇರಿದಂತೆ ಎಲ್ಲ ಆಟಗಾರರು ಡ್ರೆಸ್ಸಿಂಗ್ ರೂಮ್ನತ್ತ ಓಡಿದ್ದಾರೆ. ಸದ್ಯಕ್ಕೆ ಬ್ಯಾಟಿಂಗ್ ಅನ್ನು ಕೆಕೆಆರ್ ಸ್ಟಾಪ್ ಮಾಡಿದೆ. ಪಂದ್ಯದಲ್ಲಿ ಒಂದು ಓವರ್ ಮಾತ್ರ ಬೌಲಿಂಗ್ ಮಾಡಿದ್ದರಿಂದ ಇನ್ನು 19 ಓವರ್ಗಳಲ್ಲಿ ಕೋಲ್ಕತ್ತಾ 195 ರನ್ಗಳನ್ನು ಟಾರ್ಗೆಟ್ ಮಾಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ