/newsfirstlive-kannada/media/post_attachments/wp-content/uploads/2025/02/TEAM-INDIA-1.jpg)
ಬಹುನಿರೀಕ್ಷಿತ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್​​ ಕದನಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಟೀಮ್​ ಇಂಡಿಯಾ ಮತ್ತು ನ್ಯೂಜಿಲೆಂಡ್​ ತಂಡಗಳು ಸೆಮಿಫೈನಲ್​ಗೆ ತಲುಪಿವೆ. ಇದಕ್ಕೂ ಮುನ್ನ ನಡೆಯುತ್ತಿರೋ ನ್ಯೂಜಿಲೆಂಡ್​, ಭಾರತ ನಡುವಿನ ಇಂದಿನ ಪಂದ್ಯ ರಿಹರ್ಸ್​ನಂತೆ ಇದೆ.
ಇಂದು ನ್ಯೂಜಿಲೆಂಡ್​ ವಿರುದ್ಧ ಭಾರತ ತಂಡ ಗೆದ್ದರೆ ಸೆಮಿಫೈನಲ್​ನಲ್ಲಿ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಒಂದು ವೇಳೆ ಸೋತಲ್ಲಿ ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಆಡಲಿದೆ. ಇದರ ಮಧ್ಯೆ ಟೀಮ್​ ಇಂಡಿಯಾ ಸೆಮಿಫೈನಲ್​​ ಯಾರ ವಿರುದ್ಧ ಆಡಿದರೆ ಒಳ್ಳೆಯದು ಎಂದು ಮಾಜಿ ಕ್ಯಾಪ್ಟನ್​ ಸುನೀಲ್​ ಗವಾಸ್ಕರ್​​​ ಹೇಳಿದ್ದಾರೆ.
ಗವಾಸ್ಕರ್​ ಏನಂದ್ರು?
ಇನ್ನು, ಭಾರತ ಮತ್ತು ನ್ಯೂಜಿಲೆಂಡ್ ತುಂಬಾ ಬಲಿಷ್ಠ ತಂಡಗಳು. ಅದರಲ್ಲಿ ಯಾವುದೇ ಸಂದೇಹವಿಲ್ಲ. ಭಾರತ ನಾಕೌಟ್ ಹಂತದಲ್ಲಿದೆ. ಯಾರು ಗೆಲ್ಲುತ್ತಾರೆ ಎಂದು ಭವಿಷ್ಯ ನುಡಿಯೋದು ಕಷ್ಟ. ನ್ಯೂಜಿಲೆಂಡ್​ ವಿರುದ್ಧ ಭಾರತದ ಗೆಲುವಿನ ಮೇಲೆ ಎಲ್ಲವೂ ನಿರ್ಧಾರ ಆಗಲಿದೆ. ಆಸ್ಟ್ರೇಲಿಯಾ ವಿರುದ್ಧ ಆಡಲು ಭಾರತ ಆದ್ಯತೆ ನೀಡಬೇಕು ಎಂದರು ಗವಾಸ್ಕರ್​​.
ಭಾರತ ತಂಡಕ್ಕೆ ದಕ್ಷಿಣ ಆಫ್ರಿಕಾಕ್ಕಿಂತ ಆಸ್ಟ್ರೇಲಿಯಾ ಬಗ್ಗೆ ಚೆನ್ನಾಗಿ ಗೊತ್ತು. ಆದ್ದರಿಂದ ಭಾರತ ಆಸ್ಟ್ರೇಲಿಯಾ ವಿರುದ್ಧ ಆಡಲು ಆದ್ಯತೆ ನೀಡಬಹುದು. ಆಸ್ಟ್ರೇಲಿಯಾ ತನ್ನ ಸ್ಟಾರ್ ಬೌಲರ್‌ಗಳಿಲ್ಲದೆ ಆಡುತ್ತಿದೆ. ಮಿಚೆಲ್ ಸ್ಟಾರ್ಕ್, ಪ್ಯಾಟ್ ಕಮ್ಮಿನ್ಸ್ ಮತ್ತು ಜೋಶ್ ಹ್ಯಾಜಲ್‌ವುಡ್ ಯಾರು ಇಲ್ಲ. ಹೀಗಾಗಿ ಭಾರತ ಗೆಲ್ಲಲು ಅವಕಾಶ ಇದೆ ಎಂದರು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us