newsfirstkannada.com

ಇನ್​ಸ್ಟಾ ಬಳಸೋ ಯುವತಿಯರೇ ಎಚ್ಚರ! ವಿಡಿಯೋ, ಫೋಟೋ ಶೇರ್ ಮಾಡಿದ್ರೆ ಅಪಾಯ ಗ್ಯಾರಂಟಿ!

Share :

Published April 29, 2024 at 6:46am

  ಇನ್​ಸ್ಟಾದಲ್ಲಿ ಫೋಟೋ ಶೇರ್​ ಮಾಡಿ ಕಿರಾತಕನ ಕೈಗೆ ಸಿಕ್ಕಿಬಿದ್ದ ಯುವತಿ

  ಇನ್​ಸ್ಟಾಗ್ರಾಮ್​ನಲ್ಲಿ ಪರಿಚಯ ವ್ಯಕ್ತಿಯಿಂದಲೇ ಯುವತಿಗೆ ಬದುಕೇ ನರಕ

  ಆ ಒಬ್ಬ ದುಷ್ಕರ್ಮಿಗಳ ದುಷ್ಕೃತ್ಯಕ್ಕೆ ಕುಟುಂಬದ ಮಾನಸಿಕ ನೆಮ್ಮದಿ ಹಾಳು

ಈಗಂತೂ ಚೆಂದದ ಫೋಟೋ ಕ್ಲಿಕ್ಕಿಸಿಕೊಂಡ ತಕ್ಷಣ ಥಟ್ ಅಂತ ಇನ್​​ಸ್ಟಾ ಸ್ಟೋರಿ ಹಾಕೋದು ಕಾಮನ್. ಹೀಗೆ ಫೋಟೋ ಹಾಕಿದ್ರೆ, ನರಕಯಾತನೆ ಅನುಭವಿಸಬೇಕಾಗತ್ತೆ. ಲೈಕ್ಸ್​​, ಕಮೆಂಟ್ ​ಅಲ್ಲ, ನಿಮ್ಮ ಬಾಳಿಗೆ ಬ್ಲಾಕ್ ​ಮೇಲ್​ ಅನ್ನೋ ಭೂತ ವಕ್ಕರಿಸಿಬಿಡತ್ತೆ. ಇದಕ್ಕೆ ನೇರ ನಿದರ್ಶನ ತಾಯಿ ಮಗಳ ಈ ರಿಯಲ್​ ಕಹಾನಿ.  ಈಗಿನ ಯಂಗ್ ಜನರೇಷನ್​ ಹುಡುಗರು ಸೋಷಿಯಲ್ ಮೀಡಿಯಾ ಗೀಳಿಗೆ ದಾಸರಾಗಿದ್ದಾರೆ. ಅದರಲ್ಲೂ ಈ ಇನ್​ಸ್ಟಾಗ್ರಾಮ್​ ಬಂದ ಮೇಲಂತೂ ರೀಲ್ಸ್​ಗಳ ಬಗ್ಗೆ ಕೇಳಬೇಕಾ. ದಿನಕ್ಕೊಂದು ಹೊಸ ಟ್ರೆಂಡ್. ಹೊಸ ವಿಡಿಯೋ. ಯಾವುದೋ ಮೂಲೆಯಲ್ಲಿ ಕುರಿ ಕಾಯೋ ಹುಡುಗ ಕೂಡ ಖಡಕ್ ಡೈಲಾಗ್ ಹೊಡೆದು ರೀಲ್ಸ್ ಮಾಡಿರೋದನ್ನ ನೀವು ನೋಡಿಯೇ ಇರುತ್ತಾರೆ.

ಇದನ್ನೂ ಓದಿ: ಹಾಸನ ಅಶ್ಲೀಲ ವಿಡಿಯೋ ಕೇಸ್​​; ಅಜ್ಜಿಯನ್ನು ಬಿಡದ ರಾಕ್ಷಸನಿಗೆ ಶಿಕ್ಷೆಯಾಗಲಿ ಎಂದ ಭವ್ಯ ನರಸಿಂಹಮೂರ್ತಿ

ಇನ್​ಸ್ಟಾದಲ್ಲಿ ಪೋಸ್ಟ್​ ಮಾಡಿದ ಅದೊಂದು ಫೋಟೋ ತಾಯಿ ಮಗಳ ನೆಮ್ಮದಿಗೆ ಕೊಳ್ಳಿ ಇಟ್ಟಿದೆ. ಯಲಹಂಕ ಸರ್ಕಾರಿ ಕಾಲೇಜಿನಲ್ಲಿ ದ್ವೀತಿಯ ಪಿಯುಸಿ ಓದುತ್ತಿರೋ ಯುವತಿ ಬದುಕಲ್ಲಿ ಇನ್​ಸ್ಟಾದಲ್ಲಿ ಹಾಕಿದ್ದ ಪೋಸ್ಟ್​ ಉರುಳಾಗಿದೆ. ಸಂತ್ರಸ್ತೆ ಕಳೆದ ಮೇ 2023ರಲ್ಲಿ ಇನ್​​ಸ್ಟಾ ಅಕೌಂಟ್ ಕ್ರಿಯೇಟ್​ ಮಾಡಿ ರೀಲ್ಸ್, ಫೋಟೋ ಅಂತ ಹಾಕ್ತಿರ್ತಾಳೆ. ಈ ವೇಳೆ ಅಕೌಂಟ್​ಗೆ ಸಂತಸ್ತ್ರ ತಾಯಿಯ ನಗ್ನ ಪೋಟೋವನ್ನು ಕಿಡಿಗೇಡಿಯೊಬ್ಬ ಕಳಿಸಿರ್ತಾನೆ. ಜೊತೆಗೆ ನಿನ್ನ ಬೆತ್ತಲೆ ಫೋಟೋ ಕಳಿಸು ಇಲ್ಲದಿದ್ದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ತಾಯಿಯ ಫೋಟೋ ಹಾಕೋದಾಗಿ ಬೆದರಿಸಿದ್ದಾನೆ. ಹೆದರಿದ ಯುವತಿ ತನ್ನ ನಗ್ನ ಫೋಟೊವನ್ನು ಕಳಿಸಿದ್ದಾಳೆ. ವಿಪರ್ಯಾಸ ಅಂದ್ರೆ ಇಷ್ಟಕ್ಕೆ ಸುಮ್ಮನಾಗದ ಆ ಕಿಡಿಗೇಡಿ ಹುಡುಗಿಯ ಫೋಟೊವನ್ನ ಶೇರ್ ಮಾಡಿದ್ದಾನೆ. ಕಿರಾತಕನ ಕಾಟಕ್ಕೆ ಬೇಸತ್ತ ಹುಡುಗಿ ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಯುವತಿ ಕೊಟ್ಟ ದೂರಿನಲ್ಲೇನಿದೆ?

2023ರ ಮೇ ತಿಂಗಳಲ್ಲಿ ನಾನು ಇನ್​ಸ್ಟಾ ಅಕೌಂಟ್ ಕ್ರೀಯೇಟ್ ಮಾಡಿದ್ದೆ. ಸೆಪ್ಟೆಂಬರ್ 2023ರಲ್ಲಿ bhoomikaChinnu974 ಎಂಬ ಖಾತೆಯಿಂದ ನನ್ನ ಕುಟುಂಬದ ಮತ್ತು ತಾಯಿಯ ನಗ್ನ ಫೋಟೋ ಬಂದಿದೆ. ಅಷ್ಟೇ ಅಲ್ಲ, bhoomikaChinnu974 ಐಡಿಯಿಂದ ನನಗೆ ಮೆಸೇಜ್ ಮಾಡಿ ನಿನ್ನ ಪೋಟೋವನ್ನ ಕಳುಹಿಸು ಇಲ್ಲವಾದರೆ ನಿನ್ನ ತಾಯಿಯ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡೋದಾಗಿ ಬೆದರಿಸಿದ್ದರು. ನಂತರ ನಾನು ಹೆದರಿಕೊಂಡು ನನ್ನ ನಗ್ನ ಫೋಟೋಗಳನ್ನ bhoomikaChinnu974 ಐಡಿಗೆ ಶೇರ್ ಮಾಡಿದ್ದೆ. ಬಳಿಕ ಏಪ್ರಿಲ್​ 9 ರಂದು bhoomikaChinnu974 ಐಡಿಯಿಂದ ನನ್ನ ಫೋಟೋಗಳನ್ನ ನನ್ನ ಸ್ನೇಹಿತರಿಗೆ ಮತ್ತು ನನ್ನ ಮಾವನಿಗೆ ಶೇರ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ನನ್ನ ನಗ್ನ ಫೋಟೋಗಳನ್ನ ಹರಿಬಿಟ್ಟಿರುವ ಅನಾಮಿಕ ವ್ಯಕ್ತಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕಾಗಿ ವಿನಂತಿ.

– ಸಂತ್ರಸ್ತ ಯುವತಿ

ಅದ್ಯಾವಾಗ ದುಷ್ಕರ್ಮಿ ಕಾಟ ಹೆಚ್ಚಾಯ್ತೋ. ಬೇಸತ್ತ ಹುಡುಗಿ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಪ್ರಕರಣದ ತನಿಖೆ ಕೈಗೊಂಡಿರುವ ಪೊಲೀಸರು ಆಕೆ ಸ್ನೇಹಿತರನ್ನ ಕರೆಸಿ ವಿಚಾರಣೆ ನಡೆಸಿದ್ದು, ಪರಿಚಯವಿರುವ ವ್ಯಕ್ತಿಗಳಿಂದಲೇ ಈ ಕೃತ್ಯ ನಡೆದಿರೋ ಶಂಕೆ ವ್ಯಕ್ತವಾಗಿದೆ. ಅಸಲಿಗೆ ಸಂತ್ರಸ್ತೆಯ ತಾಯಿ ಹೌಸ್ ಕೀಪಿಂಗ್ ಕೆಲಸ ಮಾಡ್ಕೊಂಡು ಜೀವನ ಸಾಗಿಸ್ತಿದ್ರು. ಅಪ್ಪ 16 ವರ್ಷಗಳ ಹಿಂದೆ ಅಪಘಾತದಲ್ಲಿ ಮೃತಪಟ್ಟಿದ್ದು, ತಮ್ಮ ಹತ್ತನೇ ತರಗತಿಯಲ್ಲಿ ಓದ್ತಿದ್ದಾನೆ. ಇರೋದ್ರಲ್ಲಿ ಅದೇಗೋ ಜೀವನ ಸಾಗ್ತಿಸ್ತಿತ್ತು ಈ ಕುಟುಂಬ. ಆದ್ರೀಗ ದುಷ್ಕರ್ಮಿಗಳ ದುಷ್ಕೃತ್ಯಕ್ಕೆ ಕುಟುಂಬದ ಮಾನಸಿಕ ನೆಮ್ಮದಿ ಹಾಳಾಗಿದ್ದು, ಆತಂಕದಲ್ಲಿ ಜೀವನ ಕಳೆಯುವಂತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇನ್​ಸ್ಟಾ ಬಳಸೋ ಯುವತಿಯರೇ ಎಚ್ಚರ! ವಿಡಿಯೋ, ಫೋಟೋ ಶೇರ್ ಮಾಡಿದ್ರೆ ಅಪಾಯ ಗ್ಯಾರಂಟಿ!

https://newsfirstlive.com/wp-content/uploads/2024/04/insta1.jpg

Load More