/newsfirstlive-kannada/media/post_attachments/wp-content/uploads/2024/04/KOHLI-7.jpg)
2024ರ ಐಪಿಎಲ್​​ನಲ್ಲೂ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡ ಆರಂಭ ಚೆನ್ನಾಗಿಲ್ಲ. ಆಡಿರುವ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಸೋಲನ್ನು ಕಂಡಿದೆ. ಭಾರೀ ನಿರೀಕ್ಷೆಯನ್ನು ಇಟ್ಟುಕೊಂಡಿದ್ದ ಅಭಿಮಾನಿಗಳಿಗೆ ಸಹಜವಾಗಿಯೇ ನಿರಾಸೆಯಾಗಿದೆ. ಸತತ ಸೋಲುಗಳಿಂದ ಪುಟಿದೇಳುವ ಕನಸನ್ನು ಕಾಣ್ತಿದ್ದಾರೆ ಅಭಿಮಾನಿಗಳು. ಅಭಿಮಾನಿಗಳ ಮಾತ್ರ ಬೇಸರಗೊಂಡಿದ್ದಲ್ಲ. ಇಡೀ ತಂಡ, ಆರ್​ಸಿಬಿ ಮ್ಯಾನೇಜ್ಮೆಂಟ್ ಕೂಡ ಅಪ್​ಸೆಟ್​ ಆಗಿದೆ.
/newsfirstlive-kannada/media/post_attachments/wp-content/uploads/2024/04/KOHLI-6.jpg)
ಈ ಸಂದರ್ಭದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ದೃಶ್ಯವು ತುಂಬಾ ಭಾವನಾತ್ಮಕವಾಗಿದ್ದು, ಆರ್​ಸಿಬಿಯ ಅಪ್ಪಟ ಅಭಿಮಾನಿಗಳು ಕಣ್ಣೀರು ಇಡುವಂತೆ ಮಾಡ್ತಿದೆ. ಐಪಿಎಲ್​​ನಲ್ಲಿ ಆಗಿರುವ ಎಮೋಷನಲ್ ದೃಶ್ಯಗಳನ್ನು ವಿಡಿಯೋ ಒಳಗೊಂಡಿದ್ದು, ಕೊನೆಯಲ್ಲಿ ಆರ್​​ಸಿಬಿ ದಂತಕತೆ ಎ.ಬಿ.ಡಿವಿಲಿಯರ್ಸ್​ ಅವರ ಮೈಝುಮ್ ಎನಿಸಿ ದೃಶ್ಯ ಸಂಯೋಜಿಸಲಾಗಿದೆ. ಈ ವಿಡಿಯೋ ನೋಡಿದ ಅಭಿಮಾನಿಗಳ ಕಣ್ಣಾಲೆಗಳು ತೇವಗೊಳ್ತಿವೆ.
ಒಂದು ಕ್ಷಣ ಮೈ ಜುಮ್ ಅಂತು 🥹💥
Please Come back Boss @ABdeVilliers17 😭🙏 #ABdeVilliers#RCBvLSG#DCvKKR
pic.twitter.com/aewFlj28kV— ಪರಮಾತ್ಮ..!! (@Bujju_ABD17) April 3, 2024
ಇದನ್ನೂ ಓದಿ: RCB ಹುಡುಗರ ಅತೀ ದೊಡ್ಡ ದಾಖಲೆ ಧೂಳಿಪಟ ಮಾಡಿದ ಕೆಕೆಆರ್​; ಏನದು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us