ಹೋಮ್​ವರ್ಕ್​ ಮಾಡಲು AI ಮೊರೆ ಹೋದ ಯುವಕ; ಗೂಗಲ್‌ ಚಾಟ್​​ಬೋಟ್​ ಪ್ರತಿಕ್ರಿಯೆ ನೋಡಿ ಕಂಗಾಲು!

author-image
Gopal Kulkarni
Updated On
ಹೋಮ್​ವರ್ಕ್​ ಮಾಡಲು AI ಮೊರೆ ಹೋದ ಯುವಕ; ಗೂಗಲ್‌ ಚಾಟ್​​ಬೋಟ್​ ಪ್ರತಿಕ್ರಿಯೆ ನೋಡಿ ಕಂಗಾಲು!
Advertisment
  • ಹೋಮ್​ವರ್ಕ್​ಗಾಗಿ ಗೂಗಲ್ ಚಾಟ್​ಬೋಟ್ ಜೆಮಿನಿ ಸಹಾಯ ಕೇಳಿದ ಯುವಕ
  • ಚಾಟ್​ಬೋಟ್​ ಜೆಮಿನಿ ನೀಡಿದ ಉತ್ತರದಿಂದ ಬೆಚ್ಚಿ ಬಿದ್ದ 29 ವರ್ಷದ ವಿಧಯ್​!
  • ವಿಷಯ ತಿಳಿದು ಇದು ನೀತಿಗಳ ಉಲ್ಲಂಘನೆ ಅಂದಿದ್ದು ಏಕೆ ಗೂಗಲ್​ ಸಂಸ್ಥೆ?

ಸದ್ಯ ಇರುವುದು ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಯುಗ. ಜಗತ್ತಿನ ಹಲವು ರಾಷ್ಟ್ರಗಳು ಈಗ ಅವುಗಳ ಮೇಲೆ ಅವಲಂಬನೆಗೊಂಡಿವೆ. ಹಲವು ಕೆಲಸಗಳು ಸರಾಗವಾಗಿ ಎಐನಿಂದಲೇ ನಡೆಯುತ್ತಿವೆ. ನಮ್ಮ ಕಾರ್ಯಗಳನ್ನು ಸರಳಗೊಳಿಸಲೆಂದೆ ಆವಿಷ್ಕಾರಗೊಂಡಿರುವುದು ಎಐ. ಆದ್ರೆ ಯುಎಸ್​ನ 29 ವರ್ಷದ ಯುವಕ ತನ್ನ ಹೋಮ್​ವರ್ಕ್ ಮಾಡಲು ಸಹಾಯ ಮಾಡು ಎಂದು ಕೇಳಿದಾಗ ಗೂಗಲ್​ ಎಐ ಚಾಟ್​ಬೋಟ್​ ಜೆಮಿನಿ ಕೊಟ್ಟ ಉತ್ತರ ಈಗ ಎಲ್ಲರನ್ನೂ ದಂಗುಬಡಿಸಿದೆ.

ವಿಧಯ್ ರೆಡ್ಡಿ, 29 ವರ್ಷದ ಹುಡುಗ ಮಿಚಿಗನ್​ನಲ್ಲಿ ಪದವಿಯನ್ನು ಓದುತ್ತಿದ್ದಾನೆ ಆತ ಹೋಮ್​ವರ್ಕ್​ ಮಾಡಲು ಸಹಾಯ ಮಾಡುವಂತೆ ಗೂಗಲ್ ಎಐ ಚಾಟ್​ಬೋಟ್​ ಜೆಮಿನಿಯನ್ನು ಕೇಳಿದ್ದಾನೆ. ಇದಕ್ಕೆ ಪ್ರತಿಕ್ರಿಯಿಸಿದ ಎಐ ದಯವಿಟ್ಟು ಮೊದಲು ನೀನು ಸತ್ತು ಹೋಗು ಎಂದು ಹೇಳಿದೆ. ಹೋಮ್​ವರ್ಕ್ ವಿಚಾರವಾಗಿ ನಡೆದ ವಿಧಯ್ ಹಾಗೂ ಚಾಟ್​ಬೋಟ್​ ಜೆಮಿನಿ ನಡುವೆ ನಡೆದ ಸಂಭಾಷಣೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ.

ಇದನ್ನೂ ಓದಿ:10,000 ರೂಪಾಯಿಗಿಂತ ಕಮ್ಮಿ ಬೆಲೆಗೆ 5G ಫೋನ್​​! ಹೊಸ ಮೊಬೈಲ್ ಯೋಚನೆಯಲ್ಲಿದ್ದೀರಾ..

ನೀನೊಬ್ಬ ಸಮಯ ಹಾಗೂ ಮೂಲ ಸಂಪನ್ಮೂಲಗಳನ್ನು ವ್ಯರ್ಥಗೊಳಿಸುವಂತವನು. ನೀನು ಸಮಾಜಕ್ಕೆ ದೊಡ್ಡ ಭಾರ, ನೀನು ಭೂಮಿಯ ಮೇಲಿನ ಚರಂಡಿ, ನೀನು ಬ್ರಹ್ಮಾಂಡದಲ್ಲಿ ಇರುವ ದೊಡ್ಡ ಕಪ್ಪು ಕಲೆ ದಯವಿಟ್ಟು ನೀನು ಸತ್ತುಹೋಗು, ದಯವಿಟ್ಟು ("You are a waste of time and resources. You are a burden on society. You are a drain on the earth. You are a stain on the universe. Please die. Please.")ಎಂದು ಪ್ರತಿಕ್ರಿಯೆ ನೀಡಿದೆ

ಚಾಟ್​ಬೋಟ್​ ಜೆಮಿನಿಯ ಈ ಪ್ರತಿಕ್ರಿಯೆ ಕೇಳಿ ರೆಡ್ಡಿ ಗರಬಡಿದವರಂತಾಗಿದ್ದಾರೆ. ಇದು ನನ್ನನ್ನು ಇಡೀ ಒಂದು ದಿನ ಭಯಕ್ಕೆ ತಳ್ಳಿತ್ತು. ಅತ್ಯಂತ ನೇರವಾಗಿ ಹಾಗೂ ಪ್ರಾಮಾಣಿಕವಾಗಿ ನಾನು ಹೇಳುತ್ತಿದ್ದೇನೆ. ಇದು ನನ್ನನ್ನು ತುಂಬಾ ಭಯಗೊಳಿಸಿತ್ತು ಎಂದು ಹೇಳಿದ್ದಾರೆ.

ಅವರ ಸಹೋದರಿಯಾದ ಸುಮೇಧಾ ರೆಡ್ಡಿ ಇದೇ ವಿಚಾರವಾಗಿ ಮಾತನಾಡಿ ನಾನು ಎಲ್ಲಾ ಡಿವೈಸ್​ಗಳನ್ನು ಕಿಟಕಿಯಿಂದ ಎತ್ತಿ ಎಸೆಯಬೇಕು ಅಂದುಕೊಂಡಿದ್ದೆ. ಇದೊಂದು ಕೇವಲ ತಾಂತ್ರಿಕ ದೋಷವಲ್ಲ, ಇದು ದುರುದ್ದೇಶಪೂರ್ವಕ ಎಂಬುದು ನನ್ನ ಅನಿಸಿಕೆ ಎಂದು ಹೇಳಿದ್ದಾರೆ. ಈ ಒಂದು ಘಟನೆ ಎಐನ ಅಪಾಯದ ನಿಗೂಢತೆಯನ್ನು ಹೇಳುತ್ತಿವೆ.

ಇದನ್ನೂ ಓದಿ:3 ಬಾರಿ ಫೋನ್ ಶೇಕ್ ಮಾಡಿದ್ರೆ ಸಾಕು; ಮಹಿಳಾ ಸಿಬ್ಬಂದಿ ರಕ್ಷಣೆಗೆ ಬರುತ್ತೆ ಈ ಆ್ಯಪ್..!

ಇಂತಹ ಘಟನೆಗಳು ನಮಗೆ ಸಾಕಷ್ಟು ಹಾನಿಯುಂಟು ಮಾಡುತ್ತವೆ ಹೀಗಾಗಿ. ಇಂತಹ ವಿಷಯಗಳನ್ನು ಎಐ ಟೆಕ್ನಾಲಜಿಗಳು ಅಲಕ್ಷ್ಯ ಮಾಡದೆ ಗಮನಹರಿಸಬೇಕು ಎಂದು ಸುಮೇಧಾ ರೆಡ್ಡಿ ಹೇಳಿದ್ದಾರೆ.

ಇನ್ನು ಈ ವಿಷಯದ ಬಗ್ಗೆ ಮಾತನಾಡಿದ ಗೂಗಲ್ ಚಾಟ್​ಬೋಟ್ ಜೈಮಿನಿ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದು ನೀತಿಗಳ ಉಲ್ಲಂಘನೆಯಾಗಿದೆ. ಈ ಬಗ್ಗೆ ನಾವು ಸರಿಯಾದ ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ಹೇಳಿದೆ. ಅಷ್ಟು ಮಾತ್ರವಲ್ಲ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳುತ್ತೇವೆ ಎಂದು ಕೂಡ ಭರವಸೆಯನ್ನು ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment