/newsfirstlive-kannada/media/post_attachments/wp-content/uploads/2024/09/Narendra-modi.jpg)
ಅದು ಕೋವಿಡ್ ಸಂಕಷ್ಟ ಕಾಲ.. ಇಡೀ ವಿಶ್ವವೇ ದೊಡ್ಡ ಮಹಾಮಾರಿಗೆ ಸಿಲುಕಿ ವಿಲವಿಲ ಎಂದು ಹೋಗಿತ್ತು. ಬೆಂಕಿಗೆ ಸಿಲುಕಿದ ಪತಂಗದಂತಾಗಿತ್ತು ಜನರ ಬದುಕು. ಹಿಂದೆಂದೂ ಕೇಳರಿಯದ ಪದಗಳನ್ನು ಪರಿಚಯ ಮಾಡಿಸಿಕೊಟ್ಟಿತ್ತು ಈ ಮಹಾಮಾರಿ. ಇಡೀ ವಿಶ್ವವೇ ಲಾಕ್ಡೌನ್, ಕ್ವಾರೆಂಟೈನ್ ಸೇರಿದಂತೆ ಹೊಸ ಹೊಸ ಪದಗಳನ್ನು ಕಲಿತುಕೊಂಡಿತ್ತು. ಆಗ ಪ್ರಧಾನಿ ಮೋದಿ ಸರ್ಕಾರ ಜನರ ಜೀವವನ್ನು ಜೀವನವನ್ನು ಎಷ್ಟು ಸಾಧ್ಯವೋ ಅಷ್ಟು ಉಳಿಸಲು ಹರಸಾಹಸಪಟ್ಟಿತ್ತು. ಇಡೀ ವಿಶ್ವವೇ ಔಷಧಿ ಕೊರತೆಯಿಂದ ನರಳುವಾಗ ಭಾರತ ಆಶಾಭಾವವಾಗಿ, ಭರವಸೆಯಾಗಿ ವಿಶ್ವಕ್ಕೆ ಕಂಡಿತ್ತು. ಯಾವೆಲ್ಲಾ ದೇಶಗಳಿಗೆ ಔಷಧಿಯ ಅವಶಕತೆಯಿದೆಯೋ ಆ ಎಲ್ಲಾ ದೇಶಗಳಿಗೆ ಔಷಧಿಯನ್ನು ನೀಡುವ ಕೆಲಸ ಮಾಡಿತ್ತು.
ಇದೇ ಸಮಯದಲ್ಲಿ ಪ್ರಧಾನ ಮಂತ್ರಿ ಮೋದಿಯವರು ಆಗ ಜನರ ಜೀವ ಹಾಗೂ ಜೀವನ ಕಾಪಾಡುವುದಕ್ಕಾಗಿ ಸಾರ್ವಜನಿಕರಿಂದ ದೇಣಿಗೆಯನ್ನು ಬಯಸಿ, ಪಿಎಂ ಕೇರ್ಸ್ ನಿಧಿಯನ್ನು ತೆರೆದಿದ್ದರು. ಸದ್ಯ ಕೋವಿಡ್ ಎಂಬ ಮಹಾಮಾರಿ ವಿಶ್ವದಿಂದಲೇ ಕಾಲ್ಕಿತ್ತಿದೆ. ಹುಡುಕಿದರೆ ಎಲ್ಲಿಯೂ ಅದರ ನಾಮವಶೇಷ ಸಹಿತ ಸಿಗದು. ಆದ್ರೆ ಪಿಎಂ ಕೇರ್ಸ್ಗೆ ಹಣ ಹರಿದು ಬರುತ್ತಿರುವುದಂತೂ ನಿಂತಿಲ್ಲ.
ಇದನ್ನೂ ಓದಿ:181 ಮಂದಿಯಲ್ಲಿ ಬದುಕಿದ್ದು ಇಬ್ಬರು ಮಾತ್ರ.. ಹಕ್ಕಿ ಡಿಕ್ಕಿ ಹೊಡೆದ ಕ್ಷಣಾರ್ಧದಲ್ಲಿ ವಿಮಾನದಲ್ಲಿ ಏನೆಲ್ಲ ಆಯ್ತು..
ಹೆಚ್ಚು ಕಡಿಮೆ ಕೋವಿಡ್ ಕರಾಳ ಕಾಲಘಟ್ಟ ಮುಗಿದು ಎರಡು ಮೂರು ವರ್ಷಗಳೇ ಆಗಲು ಬಂದಿದೆ. ದೇಶದ ಜನರಿಂದ ಈಗಳು ಪಿಎಂ ಕೇರ್ಸ್ ನಿಧಿಗೆ ನೂರಾರು ಕೋಟಿ ರೂಪಾಯಿಗಳು ಹರಿದು ಬರುತ್ತಿದೆ. ದೇಶದಾದ್ಯಂತ ಲಾಕ್ಡೌನ್ ಬಿಗಿಬಂದೋಬಸ್ತ್ ಹೇರಿದ ಮೂರು ದಿನಕ್ಕೆ ಈ ಒಂದು ಪಿಎಂ ಕೇರ್ಸ್ ನಿಧಿಯನ್ನು ಸ್ಥಾಪಿಸಲಾಯ್ತು. ಹೆಲ್ತ್ ಎಮರ್ಜೆನ್ಸಿಗಳಿಗಾಗಿ ಹಣಕಾಸಿನ ಸಂಗ್ರಹಕ್ಕೆ ಸರ್ಕಾರ ಮುಂದಾಗಿತ್ತು. ಇವೆಲ್ಲಾ ನಡೆದು ಈಗ 4 ವರ್ಷಗಳೇ ಆಗಲು ಬಂದಿವೆ. ಆದ್ರೆ ಈ ದೇಶದ ಜನರು ತಮ್ಮ ಔದಾರ್ಯವನ್ನು ಇಂದಿಗೂ ಕೂಡ ಮುಂದುವರಿಸುತ್ತಲೇ ಬಂದಿದ್ದಾರೆ.
2022-23ರ ಸಾಲಿನ ವರ್ಷದಲ್ಲಿ ಪಿಎಂ ಕೇರ್ಸ್ ನಿಧಿಯಲ್ಲಿ ಸುಮಾರು 909.64 ಕೋಟಿ ರೂಪಾಯಿ ಹಣ ಇತ್ತು. ಹೆಚ್ಚುವರಿಯಾಗಿ ವಿದೇಶದಿಂದಲೇ ಸುಮಾರು 2.57 ಕೋಟಿ ರೂಪಾಯಿ ಬಂದಿದೆ. ಅದು ಅಲ್ಲದೇ ನಿಧಿಯಲ್ಲಿ ಇಷ್ಟೊಂದು ಹಣ ಸೇರಲು ಅದರ ಬಡ್ಡಿಯೂ ಕೂಡ ಕಾರಣವಾಗಿದೆ. ಈ ವರ್ಷದ ಸಾಲಿನಲ್ಲಿ ಸುಮಾರು 170.38 ಕೋಟಿ ರೂಪಾಯಿ ನಿಧಿಯ ಬಡ್ಡಿಯಿಂದಲೇ ಬಂದಿದೆ. ಜೊತೆಗೆ 225 ಕೋಟಿ ರೂಪಾಯಿ ರಿಫಂಡ್ ಕೂಡ ಅದರಲ್ಲಿ ಕೂಡಿಕೊಂಡಿದೆ.
ಇದನ್ನೂ ಓದಿ:ಜಪಾನ್ನಲ್ಲಿ ಕನಸು ಕಂಡು ಭಾರತಕ್ಕೆ ಬಂದರು.. ಸಾಮಾನ್ಯ ಜನರ 4 ಚಕ್ರದ ಆಸೆ ಈಡೇರಿಸಿದ ಸ್ಫೂರ್ತಿಯ ಕತೆ
2022-23ರ ಸಾಲಿನಲ್ಲಿ ಹರಿದು ಬಂದ ಇಷ್ಟು ಹಣದಲ್ಲಿ ಸರ್ಕಾರ ಇಲ್ಲಿಯವರೆಗೆ ಬಳಸಿಕೊಂಡಿದ್ದು ಸುಮಾರು 439 ಕೋಟಿ ರೂಪಾಯಿ. ಅದರಲ್ಲಿ 346 ಕೋಟಿ ರೂಪಾಯಿ ಮಕ್ಕಳ ಕಲ್ಯಾಣ ನಿಧಿಗೆ ಬಳಸಲಾಗಿದೆ.91.87 ಕೋಟಿ ರೂಪಾಯಿ ಆಕ್ಸಿಜನ್ ಸಿಲಿಂಡರ್ ಖರೀದಿಗೆ ಹಾಗು2 ಕೋಟಿ ರೂಪಾಯಿ ಬ್ಯಾಂಕ್ ಹಾಗೂ ಎಸ್ಎಂಎಸ್ ಚಾರ್ಜಸ್ಗಳಿಗೆ ಖರ್ಚಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ