PM internship scheme; ಅರ್ಜಿ ಆರಂಭ.. 500 ಕಂಪನಿ, 90 ಸಾವಿರಕ್ಕೂ ಹೆಚ್ಚು ಪೋಸ್ಟ್, ತಕ್ಷಣ ಅಪ್ಲೇ ಮಾಡಿ

author-image
Bheemappa
Updated On
PM internship scheme; ಅರ್ಜಿ ಆರಂಭ.. 500 ಕಂಪನಿ, 90 ಸಾವಿರಕ್ಕೂ ಹೆಚ್ಚು ಪೋಸ್ಟ್, ತಕ್ಷಣ ಅಪ್ಲೇ ಮಾಡಿ
Advertisment
  • ಇಂಟರ್ನ್‌ಶಿಪ್​ಗೆ ಅರ್ಜಿ ಸಲ್ಲಿಕೆ ಮಾಡಲು ವಿದ್ಯಾರ್ಹತೆ ಏನಿದೆ?
  • 5 ವರ್ಷಗಳಲ್ಲಿ 1 ಕೋಟಿ ಯುವಕರಿಗೆ ಇಂಟರ್ನ್‌ಶಿಪ್ ಅವಕಾಶ
  • ಅದಾನಿ ಗ್ರೂಪ್, ಮಾರುತಿ ಸುಜುಕಿ ಸೇರಿ ಕಂಪನಿಗಳಲ್ಲಿ ಕೆಲಸ

ನಿರುದ್ಯೋಗ ಯುವಕ-ಯುವತಿಯರಿಗಾಗಿ ಪ್ರಧಾನಮಂತ್ರಿ ಇಂಟರ್ನ್‌ಶಿಪ್‌ ಪೋಸ್ಟ್​ಗೆ ಅರ್ಜಿಗಳನ್ನು ಆರಂಭಿಸಲಾಗಿದೆ. 90,800ಕ್ಕೂ ಅಧಿಕ ಇಂಟರ್ನ್‌ಶಿಪ್‌ಗಳನ್ನು ಪೋಸ್ಟ್​ಗಳಿದ್ದು ಅಕ್ಟೋಬರ್ 12 ಸಂಜೆ 5 ಗಂಟೆಯಿಂದ ಪೋರ್ಟಲ್ ಅನ್ನು ಪ್ರಾರಂಭಿಸಲಾಗಿದೆ. ಅಭ್ಯರ್ಥಿಗಳು ಕೂಡಲೇ ನೋಂದಣಿ ಮಾಡಿಕೊಳ್ಳಬಹುದು. ಯಾವುದೇ ಶುಲ್ಕ ಇರುವುದಿಲ್ಲ. ಆನ್​ಲೈನ್ ಮೂಲಕ ಮಾತ್ರ ಅರ್ಜಿಗೆ ಅವಕಾಶ ಇರುತ್ತದೆ.

ಪ್ರಧಾನಮಂತ್ರಿ ಇಂಟರ್ನ್‌ಶಿಪ್‌ ಪೋಸ್ಟ್​ಗೆ ಅರ್ಜಿ ಸಲ್ಲಿಕೆ ಮಾಡಲು ಆಸಕ್ತಿ ಹೊಂದಿರುವ ಅಭ್ಯರ್ಥಿಯು ಅಧಿಕೃತ ವೆಬ್​ಸೈಟ್​ (pminternship.mca.gov.in)ಗೆ ಭೇಟಿ ನೀಡಬೇಕು. ಬಳಿಕ ನಿಮ್ಮ ಸ್ವವಿವರವನ್ನು ನೀಡಿ ರಿಜಿಸ್ಟ್ರೇಷನ್ ಮಾಡಿಕೊಳ್ಳಬೇಕು. ಇದನ್ನು ಮಾಡಿದ ನಂತರ ನಿಮ್ಮ ಫೋನ್ ನಂಬರ್ ಅಥವಾ ಇ-ಮೇಲ್​ಗೆ ಇಂಟರ್ನ್‌ಶಿಪ್‌ ಬಗ್ಗೆ ನೋಟಿಫಿಕೇಶನ್ ಬರುತ್ತದೆ. ಅದಾನಿ ಗ್ರೂಪ್, ಮಾರುತಿ ಸುಜುಕಿ, ಈಚರ್ ಮೋಟಾರ್ಸ್, ಲಾರ್ಸೆನ್, ಟೂಬ್ರೊ ಲಿಮಿಟೆಡ್, ಮುತ್ತೂಟ್ ಫೈನಾನ್ಸ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್, ಕೋಕಾ ಕೋಲಾ, ಹೆಚ್​ಡಿಎಫ್​ಸಿ ಸೇರಿ ವಿವಿಧ 500 ಕಂಪನಿಗಳಲ್ಲಿ ಅಭ್ಯರ್ಥಿಗಳಿಗೆ ಇಂಟರ್ನ್‌ಶಿಪ್​ ಇರುತ್ತದೆ.

ಪ್ರಧಾನಮಂತ್ರಿ ಇಂಟರ್ನ್‌ಶಿಪ್​ಗೆ ಅರ್ಹತೆಗಳೇನು?

18 ರಿಂದ 30 ವರ್ಷದ ಅಭ್ಯರ್ಥಿಗಳಿಗೆ ಅವಕಾಶ
ಭಾರತದ ಪ್ರಜೆಗಳು ಆಗಿರಬೇಕು
ಕೌಶಲ್ಯತೆಗಳನ್ನ ಹೊಂದಿರಬೇಕು

ವಿದ್ಯಾರ್ಹತೆ

10ನೇ ತರಗತಿ, ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಹಾಗೂ ಡಿಪ್ಲೋಮಾ, ಟೆಕ್ನಿಕಲ್ ಕೋರ್ಸ್ ಸೇರಿದಂತೆ ವಿವಿಧ ಶೈಕ್ಷಣಿಕ ಹಿನ್ನೆಲೆ ಇರುವವರು ಅರ್ಜಿ ಸಲ್ಲಿಕೆ ಮಾಡಬಹುದು.

ಇದನ್ನೂ ಓದಿ: Home Guards; ಅರ್ಜಿ ವಿತರಣೆ ಮಾಡುವುದು ಯಾವಾಗ.. ಗೃಹರಕ್ಷಕ ದಳ ಸೇರಲು ಅರ್ಹತೆಗಳೇನು?

publive-image

ಅಪ್ಲೇ ಮಾಡುವುದು ಹೇಗೆ..?

  • ಅಧಿಕೃತ ವೆಬ್​ಸೈಟ್​ಗೆ ಭೇಟಿ ನೀಡಬೇಕು
  • ರಿಜಿಸ್ಟ್ರೇಷನ್ ಮೇಲೆ ಕ್ಲಿಕ್ ಮಾಡಬೇಕು
  • ಫಾರ್ಮ್​ ಅನ್ನ ಪೂರ್ಣವಾಗಿ ಭರ್ತಿ ಮಾಡಿ
  • ಭರ್ತಿ ಮಾಡಿದ ಮೇಲೆ ಸಬ್​​ಮೀಟ್ ಕೊಡಿ
  • ಪೋರ್ಟಲ್​ನಲ್ಲಿ ನಿಮ್ಮ ರೆಸ್ಯೂಮ್ ರೆಡಿ ಆಗುತ್ತೆ
  • 5 ಇಂಟರ್ನ್‌ಶಿಪ್ ಅವಕಾಶ ಇರುತ್ತೆ
  • ಬಳಿಕ ಸಬ್​ಮೀಟ್ ಆದಮೇಲೆ ಫಾರ್ಮ್ ಡೌನ್​ಲೋಡ್ ಮಾಡಿ
  • ಹಾರ್ಡ್​ಕಾಪಿಯನ್ನು ಹಾಗೆ ಉಳಿಸಿಕೊಂಡಿರಬೇಕು

ಪಿಎಂ ಇಂಟರ್ನ್‌ಶಿಪ್‌ ಪೋಸ್ಟ್​ಗಳು ರಾಜ್ಯಗಳು ಸೇರಿದಂತೆ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಟ್ಟು 737 ಜಿಲ್ಲೆಗಳಿಂದ ಅರ್ಜಿಯನ್ನು ಸಲ್ಲಿಕೆ ಮಾಡಲಾಗುತ್ತದೆ. ಅಭ್ಯರ್ಥಿಗಳಿಗೆ 6 ಸಾವಿರ ರೂಪಾಯಿ ಸ್ಟೇಫಂಡ್ ನೀಡಲಾಗುತ್ತದೆ. 2024ರ ಡಿಸೆಂಬರ್ 2ರಿಂದ ಉದ್ಯೋಗಗಳು ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಹೇಳಲಾಗಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಸಲದ ಕೇಂದ್ರ ಬಜೆಟ್‌ನಲ್ಲಿ ಇಂಟರ್ನ್‌ಶಿಪ್ ಯೋಜನೆ ಘೋಷಿಸಿದ್ದರು. ಇದು 5 ವರ್ಷಗಳಲ್ಲಿ 1 ಕೋಟಿ ಯುವಕರಿಗೆ ಪ್ರತಿಷ್ಠಿತ 500 ಕಂಪನಿಗಳಲ್ಲಿ ಇಂಟರ್ನ್‌ಶಿಪ್ ಒದಗಿಸುವ ಗುರಿಯನ್ನು ಹೊಂದಿದೆ. ಅರ್ಭರ್ಥಿಗಳು ವ್ಯಾಪಾರ-ವ್ಯವಹಾರ ಕುರಿತು ನೈಜ ಅನುಭವವನ್ನು ಇಲ್ಲಿ ಪಡೆಯಲಿದ್ದಾರೆ. ಈ ಕಂಪನಿಗಳಲ್ಲಿ 1 ವರ್ಷದ ಅವಧಿಗೆ ಈ ಇಂಟರ್ನ್‌ಶಿಪ್ ಇರುತ್ತದೆ. ಹೀಗಾಗಿ ಆಸಕ್ತಿ ಹೊಂದಿರುವವರು ನೋಂದಣಿ ಮಾಡಿಕೊಳ್ಳಬಹುದು.

ಅರ್ಜಿ ಸಲ್ಲಿಕೆ ಮಾಡಲು ಲಿಂಕ್=https://pminternship.mca.gov.in/login/

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment