newsfirstkannada.com

73ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಧಾನಿ ಮೋದಿ; ಪ್ರಮುಖ ಎರಡು ಯೋಜನೆಗಳಿಗೆ ಚಾಲನೆ

Share :

17-09-2023

    ಪ್ರಧಾನಿ ಮೋದಿಗೆ 73ನೇ ಹುಟ್ಟುಹಬ್ಬ ಶುಭಾಶಯಗಳ ಮಹಾಪೂರ

    ಪ್ರೀತಿಯಿಂದ ಶುಭಾಶಯ ತಿಳಿಸಿದ ಮಾಜಿ ಪ್ರಧಾನಿ ದೇವೇಗೌಡ

    ದೇಶದ್ಯಾಂತ ಯಾವ್ಯಾವ ಕಾರ್ಯಕ್ರಮಗಳನ್ನ ಕೈಗೊಳ್ಳಲಾಗಿದೆ ಗೊತ್ತಾ?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು 73ನೇ ವಸಂತಕ್ಕೆ ಕಾಲಿಟ್ಟಿದ್ದು, ವಿಶ್ವದ ಗಣ್ಯ ನಾಯಕರಿಂದ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿವೆ. ಪ್ರಧಾನಿ ಸಚಿವಾಲಯವು ವಿಶೇಷ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿದೆ. ಬಿಜೆಪಿ ಸರಣಿ ಕಾರ್ಯಕ್ರಮಗಳನ್ನು ಕೈಗೊಂಡಿದ್ದು ನಿಮ್ಮ ಸೇವಾ ಭಾವ ವ್ಯಕ್ತಪಡಿಸಿ ಎಂಬ ವಿಶೇಷ ಅಭಿಯಾನ ಆರಂಭಿಸಿದೆ.

ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಅವರು ಪ್ರಧಾನಿ ಮೋದಿಯವರಿಗೆ ಶುಭಾಶಯಗಳನ್ನು ಕೋರಿದ್ದಾರೆ. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ದೇವೇಗೌಡರು, ಪ್ರಧಾನಿಯವರಿಗೆ ನನ್ನ ಆತ್ಮೀಯವಾದ ಶುಭಾಶಯಗಳು. ಅವರಿಗೆ ದೇಶ ಸೇವೆ ಮಾಡಲು ಇನ್ನು ಉತ್ತಮ ಆರೋಗ್ಯ ಆ ಭಗವಂತ ನೀಡಲಿ ಎಂದು ಹಾರೈಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ

ಮೋದಿ ಉದ್ಘಾಟಿಸುವ ಆ 2 ಕಾರ್ಯಕ್ರಮಗಳು

ದೇಶಾದ್ಯಂತ ಪ್ರಧಾನಿಯವರ ಹುಟ್ಟುಹಬ್ಬದ ಕಾರಣ ಅಭಿಮಾನಿಗಳು ಅನೇಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡ್ಕೊಂಡಿದ್ದಾರೆ. ಹಾಗೇ, ನರೇಂದ್ರ ಮೋದಿ ಸಹ ಇಂದು ಹಲವು ಮಹತ್ವದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಪ್ರಧಾನಿ ಮೋದಿ ಅವರು ತಮ್ಮ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಇಂದು ಎರಡು ವಿಶೇಷ ಕಾರ್ಯಕ್ರಮಗಳನ್ನ ಉದ್ಘಾಟನೆ ಮಾಡಲಿದ್ದಾರೆ. ಬೆಳಗ್ಗೆ 11 ಗಂಟೆಗೆ ದೆಹಲಿಯ ಯಶೋಭೂಮಿ ಹಂತ-1 ಅನ್ನು ಉದ್ಘಾಟನೆ ಮಾಡಲಿದ್ದಾರೆ. ಇದು ದೆಹಲಿಯ ದ್ವಾರಕಾದಲ್ಲಿ ಅತ್ಯಾಧುನಿಕ ಎಕ್ಸ್‌ಪೋ ಕೇಂದ್ರವಾಗಿದೆ. ಇದೇ ವೇಳೆ ಹೊಸ ಮೆಟ್ರೋ ನಿಲ್ದಾಣವಾದ ಯಶೋಭೂಮಿ ದ್ವಾರಕಾ ಸೆಕ್ಟರ್- 25 ಅನ್ನು ಕೂಡ ಪ್ರಧಾನಿ ಉದ್ಘಾಟಿಸಲಿದ್ದಾರೆ.

ನಂತರ ದ್ವಾರಕದ ಇಂಡಿಯಾ ಇಂಟರ್‌ನ್ಯಾಶನಲ್‌ ಕನ್ವೆನ್ಷನ್‌ ಮತ್ತು ಎಕ್ಸ್‌ಪೋ ಸೆಂಟರ್‌ನಲ್ಲಿ 11:30ಕ್ಕೆ ವಿಶ್ವಕರ್ಮ ಜಯಂತಿಯ ಸ್ಮರಣಾರ್ಥವಾಗಿ ವಿಶ್ವಕರ್ಮ ಯೋಜನೆಗೆ ಚಾಲನೆ ನೀಡಲಿದ್ದಾರೆ. ಸಾಂಪ್ರದಾಯಿಕ 18 ಕಸುಬುಗಳಲ್ಲಿ ತೊಡಗಿದವರಿಗೆ ನೆರವು ನೀಡುವುದೇ ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.

ಮೋದಿ ಹುಟ್ಟುಹಬ್ಬದಿಂದ ಗಾಂಧಿ ಜಯಂತಿವರೆಗೆ ಕಾರ್ಯಕ್ರಮ

ಪ್ರಧಾನಿ ಮೋದಿಯವರ ತವರು ಗುಜರಾತ್​ನಲ್ಲಿ ಸಂಭ್ರಮ ಮನೆ ಮಾಡಿದ್ದು ಬಿಜೆಪಿ ಘಟಕದಿಂದ ಸುದೀರ್ಘ ಸಂಭ್ರಮಾಚರಣೆ ಮಾಡಲು ಪ್ಲಾನ್ ಮಾಡಲಾಗಿದೆ. ಮೋದಿ ಹುಟ್ಟುಹಬ್ಬದಿಂದ ಗಾಂಧಿ ಜಯಂತಿವರೆಗೆ ಕಾರ್ಯಕ್ರಮ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಬಿಜೆಪಿ ವತಿಯಿಂದ ಗುಜರಾತ್​ನ ನವಸಾರಿ ಜಿಲ್ಲೆಯ 30,000 ಶಾಲಾ ಬಾಲಕಿಯರಿಗೆ ಬ್ಯಾಂಕ್ ಖಾತೆ ಮಾಡಿಸಿಕೊಡುವುದು ಜೊತೆಗೆ ಎಲ್ಲ ಜಿಲ್ಲೆಗಳಲ್ಲಿ ರಕ್ತದಾನ ಶಿಬಿರಗಳನ್ನು ಆಯೋಜನೆ ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

73ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಪ್ರಧಾನಿ ಮೋದಿ; ಪ್ರಮುಖ ಎರಡು ಯೋಜನೆಗಳಿಗೆ ಚಾಲನೆ

https://newsfirstlive.com/wp-content/uploads/2023/09/MODI_HDD.jpg

Load More