Advertisment

ಕರ್ನಾಟಕ ಗೆಲ್ಲಲು ಅಖಾಡಕ್ಕೆ ಮೋದಿ ಎಂಟ್ರಿ; ಯಾವಾಗ ಬರ್ತಿದ್ದಾರೆ, ನಿಮ್ಮ ಜಿಲ್ಲೆಗಳಿಗೂ ಬರ್ತಾರಾ?

author-image
Ganesh
Updated On
ಚುನಾವಣಾ ಬಾಂಡ್‌ ವಿವಾದಕ್ಕೆ ಪ್ರಧಾನಿ ಮೋದಿ ಕೊಟ್ರು ಶಾಕಿಂಗ್ ರಿಯಾಕ್ಷನ್.. ಹೇಳಿದ್ದೇನು?
Advertisment
  • ರಾಜ್ಯದಲ್ಲಿ ಬಿರುಸಿನಿಂದ ಸಾಗಿದ ಚುನಾವಣಾ ಪ್ರಚಾರ
  • ಭಾರತ ಗೆಲ್ಲಲು ಕಾಂಗ್ರೆಸ್​ನಿಂದ ಗ್ಯಾರೆಂಟಿಗಳ ಘೋಷಣೆ
  • ರಾಜ್ಯದಲ್ಲಿ ಮತ್ತೆ ಮೋದಿ ಅಲೆ ಎಬ್ಬಿಸಲು ಬಿಜೆಪಿ ಪ್ಲಾನ್

ರಾಜ್ಯದಲ್ಲಿ ಲೋಕಸಭಾ ರಣಕಣದಲ್ಲಿ ಪ್ರಚಾರದ ಭರಾಟೆ ಜೋರಾಗಿದೆ. ಕಾಂಗ್ರೆಸ್-ಬಿಜೆಪಿ ಪಾಳಯದ ನಾಯಕರು ಅಬ್ಬರದ ಕ್ಯಾಂಪೇನ್ ನಡೆಸುತ್ತಿದ್ದಾರೆ.. ಇದೀಗ ಕರುನಾಡ ಪ್ರಜಾಪ್ರಭುತ್ವ ಯುದ್ಧದಲ್ಲಿ ಬಿಜೆಪಿಗೆ ಮತ್ತಷ್ಟು ಬಲ ತರಲು ಮೋದಿಯ ಆಗಮನವಾಗ್ತಿದೆ. ಇದೇ ಭಾನುವಾರ ಕರಾವಳಿ, ಸಿಲಿಕಾನ್ ಸಿಟಿಯಲ್ಲಿ ನಮೋ ರಣಕಹಳೆ ಮೊಳಗಿಸಲಿದ್ದಾರೆ.

Advertisment

ಇದನ್ನೂ ಓದಿ: ಗನ್ ಇಟ್ಕೊಂಡು ಬಂದು CMಗೆ ಹಾರ ಹಾಕಿದ ಕೇಸ್​; ಭದ್ರತಾ ವೈಫಲ್ಯ ಖಂಡಿಸಿದ ಕುಮಾರಸ್ವಾಮಿ, ಏನಂದ್ರು..?

ಭಾರತದಲ್ಲಿ 2024 ಮತಯುದ್ಧಕ್ಕೆ ದಿನಗಳು ಹತ್ತಿರವಾಗ್ತಿದೆ. ಸಂಸತ್​ ಸಮರ ಗೆಲ್ಲಲು ಎನ್​ಡಿಎ, ಯುಪಿಎ ಮೈತ್ರಿಕೂಟಗಳು ತಂತ್ರ-ರಣತಂತ್ರಗಳನ್ನು ಎಣೆಯುತ್ತಿವೆ. ಕಾಂಗ್ರೆಸ್​, ಕರ್ನಾಟಕ ಮಾದರಿಯಲ್ಲಿ ಇಡೀ ಭಾರತವನ್ನು ಗೆಲ್ಲಲು ಗ್ಯಾರೆಂಟಿಗಳ ಘೋಷಣೆ ಮಾಡಿದೆ. ಇದೀಗ ಕೈ ಗ್ಯಾರಂಟಿಗೆ ಟಕ್ಕರ್ ಕೊಡಲು ರಾಜ್ಯಕ್ಕೆ ಮತ್ತೆ ನಮೋ ಆಗಮನಕ್ಕೆ ವೇದಿಕೆ ಸಜ್ಜಾಗಿದೆ.

ಕರ್ನಾಟಕ ಗೆಲ್ಲಲು ಅಖಾಡಕ್ಕೆ ನರೇಂದ್ರ ಮೋದಿ ಎಂಟ್ರಿ
ಮೊನ್ನೆಯಷ್ಟೇ 2 ದಿನಗಳ ಕಾಲ ಸಿಲಿಕಾನ್ ಸಿಟಿ ಅಖಾಡದಲ್ಲಿ ಸಿಎಂ ಸಿದ್ದರಾಮಯ್ಯ ಅಬ್ಬರಿಸಿದ್ರು.. ಜೊತೆಗೆ ಡಿಸಿಎಂ, ಡಿ.ಕೆ. ಶಿವಕುಮಾರ್‌ ಕೂಡಾ ರಣಕಹಳೆ ಮೊಳಗಿಸಿದ್ರು. ಲೋಕಸಭಾ ಮತಗಳನ್ನ ಬಾಚಿಕೊಳ್ಳಲು ಭರ್ಜರಿ ಕ್ಯಾಂಪೇನ್ ಮಾಡಿದ್ರು. ಇದೀಗ ಕಾಂಗ್ರೆಸ್ ನಾಯಕರಿಗೆ ಕೌಂಟರ್ ಕೊಡಲು ಪ್ರಧಾನಿ ನರೇಂದ್ರ ಮೋದಿ ಎಂಟ್ರಿ ಕೊಡ್ತಿದ್ದಾರೆ. ಇದೇ ವಾರಾಂತ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ರಾಜ್ಯದಲ್ಲಿ ಪ್ರಚಾರ ಫಿಕ್ಸ್ ಆಗಿದೆ.. ಭಾನುವಾರ ರಾಜ್ಯಕ್ಕೆ ನರೇಂದ್ರ ಮೋದಿ ಭೇಟಿ ನೀಡಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ದಕ್ಷಿಣ ಕನ್ನಡ, ಬೆಂಗಳೂರು ನಗರದಲ್ಲಿ ಭರ್ಜರಿ ಕ್ಯಾಂಪೇನ್ ಮಾಡಲಿದ್ದಾರೆ.. ಏಳೆಂಟು ಲೋಕಸಭಾ ಕ್ಷೇತ್ರಗಳಲ್ಲಿ ನಮೋ ರಣಕಹಳೆ ಮೊಳಗಿಸಲಿದ್ದಾರೆ.. ರಾಜ್ಯದಲ್ಲಿ ‘ಕೇಸರಿ’ ಶಕ್ತಿ ಪ್ರದರ್ಶನಕ್ಕೆ ಮೋದಿ ಪ್ಲಾನ್ ಮಾಡಿದ್ದಾರೆ.

Advertisment

ಕರುನಾಡಲ್ಲಿ ‘ಮೋದಿ’ಮೇನಿಯಾ

ನಮೋ ಶಕ್ತಿ ಪ್ರದರ್ಶನ 01:
ಕರಾವಳಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬೃಹತ್ ಸಮಾವೇಶ
ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜನರುದ್ದೇಶಿಸಿ ಮಾತು

ನಮೋ ಶಕ್ತಿ ಪ್ರದರ್ಶನ 02:
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಭರ್ಜರಿ ರೋಡ್ ಶೋ
ಹೆಬ್ಬಾಳದ ಸಂಜಯನಗರ ಹಾಗೂ ನಾಗಶೆಟ್ಟಿಹಳ್ಳಿ ಬಳಿ ರೋಡ್ ಶೋ

ನಮೋ ಶಕ್ತಿ ಪ್ರದರ್ಶನ 03:
ಬ್ಯಾಟರಾಯನಪುರದ ಕೊಡಿಗೇಹಳ್ಳಿಯಿಂದ ಮೋದಿ ರೋಡ್ ಶೋ
ಗುಂಡಾಂಜನೇಯ ದೇವಾಲಯದಿಂದ ಜಕ್ಕೂರು ಬಳಿ ರೋಡ್ ಶೋ

Advertisment

ಒಟ್ಟಾರೆ, ರಾಜ್ಯದಲ್ಲಿ ಪ್ರಧಾನಿ ಮೋದಿ ಮತ್ತೆ ಅಲೆಯನ್ನ ಎಬ್ಬಿಸಲು ಎಂಟ್ರಿ ಕೊಡ್ತಿದ್ದಾರೆ. ಕೇಸರಿ ಅಭ್ಯರ್ಥಿಗಳಿಗೆ ಪ್ರಚಾರದ ಬಲವನ್ನ ತುಂಬಲು ಮುಂದಾಗಿದ್ದಾರೆ.. ಈ ಮೂಲಕ 28ಕ್ಕೆ 28 ಕ್ಷೇತ್ರಗಳನ್ನ ಗೆಲ್ಲುವ ನಿಟ್ಟಿನಲ್ಲಿ ಮೋದಿ ರಣಕಹಳೆ ಮೊಳಗಿಸಲಿದ್ದಾರೆ.
ಮಧುಸೂದನ್, ಪೊಲಿಟಿಕಲ್ ಬ್ಯುರೋ, ನ್ಯೂಸ್‌ಫಸ್ಟ್

ಇದನ್ನೂ ಓದಿ: ಗೆದ್ದರೂ ಮುಂಬೈ ತಂಡದಲ್ಲಿ ಆರದ ಕಾವು; ಫ್ಯಾನ್ಸ್​ ವಾರ್​​ಗೆ ಬೆಂಕಿ ಹಚ್ಚಿದ ರೋಹಿತ್ ಶರ್ಮಾ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment