newsfirstkannada.com

ಲೋಕಸಭೆಯಲ್ಲಿ ರಾಜ್ಯದ 10 ಕ್ಷೇತ್ರ ಕಳೆದುಕೊಳ್ಳುವ ಭಯ.. NDA ಸಭೆಯಲ್ಲಿ ಕರ್ನಾಟಕ ಸಂಸದರಿಗೆ ಮೋದಿ ಕ್ಲಾಸ್​​..!

Share :

03-08-2023

    2019ರ ಚುನಾವಣೆಯಲ್ಲಿ 28ರಲ್ಲಿ 25 ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿ

    ಕಟೀಲ್​​ಗೆ B.L.ಸಂತೋಷ್ ಮೂಲಕ ಹೈಕಮಾಂಡ್​ ಸಂದೇಶ

    ‘ರಕ್ಷಾಬಂಧನ್​’ ಸ್ಪೆಷಲ್ ಆಗಿ ಆಚರಿಸುವಂತೆ ಕರೆ ಕೊಟ್ಟ ಮೋದಿ

2024ರ ಲೋಕಸಮರ ಸಮೀಪಿಸುತ್ತಿದ್ದಂತೆ ಎಲ್ಲಾ ಪಕ್ಷಗಳು ಸಮರಾಭ್ಯಾಸದಲ್ಲಿ ತೊಡಗಿವೆ. ಯಾವ ಕ್ಷೇತ್ರದಿಂದ ಯಾವ ಅಭ್ಯರ್ಥಿಗಳು ನಿಲ್ಲಬೇಕೆಂದು ರಣತಂತ್ರ ಹೆಣೆಯುತ್ತಿವೆ. ಗೆಲ್ಲೋ ಕುದುರೆಗಳ ಭೇಟೆ ಕೂಡ ನಡೆಯುತ್ತಿದೆ. ಈ ಯುದ್ಧದ ಭಾಗವಾಗೇ ಪ್ರಧಾನಿ ಮೋದಿ ದೆಹಲಿಯಲ್ಲಿ ಸಂಸದರ ಸಭೆ ನಡೆಸುತ್ತಿದ್ದಾರೆ. ನಿನ್ನೆ ರಾತ್ರಿ ಈ ಸಭೆಯಲ್ಲಿ ರಾಜ್ಯದ ಸಂಸದರು ಭಾಗಿಯಾಗಿದ್ದು, ಈ ವೇಳೆ ಕರ್ನಾಟಕ ಗೆಲ್ಲುವ ಬಗ್ಗೆ ಗಂಭೀರವಾಗಿ ಚರ್ಚಿಸಲಾಗಿದೆ. ಕೆಲ ಟಿಪ್ಸ್​ ಹಾಗೂ ಸಂದೇಶಗಳನ್ನು ಕೂಡಾ ರವಾನಿಸಿರುವ ಮೋದಿ ಗೆಲುವಿನ ಪಾಠದ ಅಭ್ಯಾಸ ಮಾಡಿಸಿದ್ದಾರೆ.

ನಳಿನ್​ಗೆ ಬಿ.ಎಲ್ ಸಂತೋಷ ಮೂಲಕ ಹೈಕಮಾಂಡ್​ ಸಂದೇಶ

ಕಳೆದ ಬಾರಿ 28ರಲ್ಲಿ 25 ಕ್ಷೇತ್ರಗಳನ್ನು ಜಯಿಸಿದ್ದ ಬಿಜೆಪಿಗೆ ಈ ಬಾರಿ ಅಷ್ಟೂ ಕ್ಷೇತ್ರಗಳನ್ನು ಉಳಿಸಿಕೊಳ್ಳುವ ಸವಾಲು ಎದುರಾಗಿದೆ. ಯಾಕಂದ್ರೆ ರಾಜ್ಯದಲ್ಲೀಗ ಕಾಂಗ್ರೆಸ್‌ ಆಡಳಿತವಿದೆ. ಹೀಗಾಗಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್‌ಗೆ ಹೈಕಮಾಂಡ್ ನಾಯಕರು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮೂಲಕ ಮಹತ್ವದ ಸಂದೇಶವನ್ನೂ ಕೂಡ ರವಾನಿಸಲಾಗಿದೆ ಎನ್ನಲಾಗಿದೆ.

ಬಿಜೆಪಿ ‘ಹೈ’ ಸಂದೇಶಗಳೇನು?

  • ರಾಜ್ಯದ 28 ಕ್ಷೇತ್ರಗಳ ಪೈಕಿ 8-10 ಕ್ಷೇತ್ರಗಳಲ್ಲಿ ಅಭ್ಯರ್ಥಿ ಬದಲಾವಣೆ
  • ಈ ತಿಂಗಳೊಳಗೆ ಹೊಸ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ
  • ನೂತನ‌ ಅಭ್ಯರ್ಥಿಗಳು ಆಗುವವರ ಹೆಸರು ಹೊರಗೆ ಹೋಗಬಾರದು
  • ಈ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವ ವಾತಾವರಣ ನಿರ್ಮಾಣವಾಗಬೇಕು
  • ಈಗಲೇ ವರದಿ ನೀಡಿ ಅಂತ ನಳಿನ್‌ ಕಟೀಲ್​ಗೆ ಹೈಕಮಾಂಡ್ ಸೂಚನೆ

ಚಾಮರಾಜನಗರ, ತುಮಕೂರು, ಚಿಕ್ಕಬಳ್ಳಾಪುರ, ದಾವಣಗೆರೆ, ಬೆಳಗಾವಿ, ಉತ್ತರ ಕನ್ನಡ, ಬಾಗಲಕೋಟೆ, ವಿಜಯಪುರ ಹಾಗೂ ಬಳ್ಳಾರಿ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಬದಲಾವಣೆಗೆ ಹೈಕಮಾಂಡ್ ನಾಯಕರು ಚಿಂತನೆ ನಡೆಸಿದ್ದಾರೆನ್ನಲಾಗಿದೆ. ಈ ಕ್ಷೇತ್ರಗಳಲ್ಲಿ ಯಾರಿಗೆ ಮಣೆ ಹಾಕಿದ್ರೆ ಬಿಜೆಪಿಗೆ ವಿಜಯಲಕ್ಷ್ಮೀ ಒಲಿಯಲಿದ್ದಾಳೆ. ಈಗಿನಿಂದಲೇ ಕಸರತ್ತು ಮಾಡದಿದ್ರೆ ಮುಂದೆ ಸಂಕಷ್ಟ ನಿಶ್ಚಿತ ಅಂತ ಹೈಕಮಾಂಡ್ ನಾಯಕರು ಅರಿತಿದ್ದಾರೆ. ಹೀಗಾಗಿ ಮುಂದಿನ ಎಂಟ್ಹತ್ತು ದಿನಗಳಲ್ಲಿ ನಳಿನ್‌ಕುಮಾರ್ ಕಟೀಲ್ ಅಭ್ಯರ್ಥಿಗಳನ್ನು ಅಂತಿಮ ಮಾಡಲಿದ್ದಾರೆ. ಈ ವರದಿಯನ್ನು ಪರಿಗಣಿಸಿ ಹೈಕಮಾಂಡ್ ನಾಯಕರು ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ.

ಸಂಸದರಿಗೆ ಮೋದಿ ಪಾಠ

  • ರಕ್ಷಾಬಂಧನವನ್ನು ಮುಸ್ಲಿಂ ಮಹಿಳೆಯರೊಂದಿಗೂ ಆಚರಿಸಿ
  • ತ್ರಿವಳಿ ತಲಾಖ್ ರದ್ದು ಬಗ್ಗೆ ಮಹಿಳೆಯರಿಗೆ ಮನವರಿಕೆ ಮಾಡಿ
  • ತ್ರಿವಳಿ ತಲಾಖ್ ಕಾಯ್ದೆ ಜಾರಿಯಿಂದ ಪಾಸಿಟಿವ್ ಇಂಫ್ಯಾಕ್ಟ್
  • ಅಣ್ಣ-ತಂಗಿಯ ಭಾಂಧವ್ಯ ಬೆಸೆಯುವ ಹಬ್ಬ ರಕ್ಷಾ ಬಂಧನ
  • ಸಮಾಜದ ಎಲ್ಲ ವರ್ಗದ ಜನರೊಂದಿಗೆ ಸಂಪರ್ಕ ಮುಖ್ಯ

ಅಂದಾಗೆ ಇದೇ ಆಗಸ್ಟ್ 30 ರಂದು ರಕ್ಷಾ ಬಂಧನ ಹಬ್ಬ ಇದೆ. ಈ ವರ್ಷ 4,000 ಮುಸ್ಲಿಂ ಮಹಿಳೆಯರನ್ನು ಹಜ್​ಗೆ ಕೇಂದ್ರ ಸರ್ಕಾರ ಕಳಿಸಿದೆ. ಈ ಎಲ್ಲಾ ವಿಚಾರಗಳೊಂದಿಗೆ ಕೇಂದ್ರ ಸರ್ಕಾರ 2024 ರ ಲೋಕಸಮರವನ್ನು ಗೆಲ್ಲಲು ತಂತ್ರ ಹೆಣೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭೆಯಲ್ಲಿ ರಾಜ್ಯದ 10 ಕ್ಷೇತ್ರ ಕಳೆದುಕೊಳ್ಳುವ ಭಯ.. NDA ಸಭೆಯಲ್ಲಿ ಕರ್ನಾಟಕ ಸಂಸದರಿಗೆ ಮೋದಿ ಕ್ಲಾಸ್​​..!

https://newsfirstlive.com/wp-content/uploads/2023/06/MODI-7.jpg

Load More