newsfirstkannada.com

‘ಇದು ನನ್ನೊಬ್ಬನ ಸಾಧನೆಯಲ್ಲ, ಭಾರತದ ಸಾಧನೆ’ ಭೂತಾನ್​ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿದ ಮೋದಿ

Share :

Published March 23, 2024 at 8:13am

    ಭೂತಾನ್ ಜನರ ಅದ್ಧೂರಿ ಸ್ವಾಗತ ಹಾಗೂ ಅವರ ಪ್ರೀತಿಗೆ ಮೋದಿ ಫಿದಾ

    ಭಾರತ ಮತ್ತು ಭೂತಾನ್ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಮಾತುಕತೆ

    ಮಕ್ಕಳೊಂದಿಗೆ ಸಂತಸದ ಸಮಯ ಕಳೆದ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ಮೋದಿ 2 ದಿನಗಳ ಭೂತಾನ್ ಪ್ರವಾಸದಲ್ಲಿದ್ದಾರೆ. ಭೂತಾನ್ ಜನರ ಅದ್ಧೂರಿ ಸ್ವಾಗತಕ್ಕೆ ಹಾಗೂ ಅವರ ಪ್ರೀತಿಗೆ ಮೋದಿ ಫಿದಾ ಆಗಿದ್ದಾರೆ. ಇನ್ನೂ ಭೂತಾನ್‌ನ ಅತ್ಯುನ್ನತ ಗೌರವವನ್ನು ಸಹ ನಮೋ ಸ್ವೀಕಾರ ಮಾಡಿದ್ದಾರೆ.

ಪರ್ವತಗಳ ನಾಡು ಭೂತಾನ್​ ಪ್ರವಾಸದಲ್ಲಿ ಮೋದಿ

ಪ್ರಧಾನಿ ಮೋದಿ 2 ದಿನಗಳ ಭೂತಾನ್ ಪ್ರವಾಸ ಕೈಗೊಂಡಿದ್ದು, ಭೂತನ್​ನಲ್ಲಿ ಪ್ರಧಾನಿ ಮೋದಿಗೆ ಸಾಂಪ್ರದಾಯಿಕವಾಗಿ ಅದ್ಧೂರಿ ಸ್ವಾಗತಸಿಕ್ಕಿದೆ. ಭೂತಾನ್​ನ ಪ್ರೀತಿಗೆ ಪ್ರಧಾನಿ ಮೋದಿ ಫಿದಾ ಆಗಿದ್ದಾರೆ. ಮೋದಿಯವರು ಮಾ.​21 ಮತ್ತು 22 ಎರಡು ದಿನ ಭೂತಾನ್​ಗೆ ಭೇಟಿ ನೀಡಬೇಕಿತ್ತು. ಆದ್ರೆ ಪ್ರತಿಕೂಲ ಹವಾಮಾನ ವೈಪರೀತ್ಯ ಭೂತಾನ್​ ಪ್ರವಾಸವನ್ನು ಒಂದು ದಿನ ಮುಂದೂಡಲಾಗಿತ್ತು. ಹೀಗಾಗಿ ನಿನ್ನೆ ಭೂತಾನ್‌ಗೆ ತೆರಳಿದ ಮೋದಿಗೆ ಅನಿವಾಸಿ ಭಾರತೀಯರು ಸ್ವಾಗತ ಕೋರಿದರು. ಈ ವೇಳೆ ಪ್ರಧಾನಿ ಮೋದಿ ಮಕ್ಕಳೊಂದಿಗೆ ಸಂತಸದ ಸಮಯವನ್ನು ಕಳೆದರು.

ಭೂತಾನ್​ನ ಅತ್ಯುನ್ನತ ಪ್ರಶಸ್ತಿ ನೀಡಿ ಮೋದಿಗೆ ಗೌರವ

ಎರಡು ದಿನಗಳ ಭೂತಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿರನ್ನ ಅಲ್ಲಿನ ದೊರೆ ಜಿಗ್ಮೆ ಖೇಸರ್ ನಮ್ಗ್ಯೆಲ್ ವಾಂಗ್‌ಚುಕ್, ಮಾಜಿ ದೊರೆ ಜಿಗ್ಮೆ ಸಿಂಗ್ಯೆ ವಾಂಗ್‌ಚುಕ್ ಭೇಟಿಯಾಗಿದ್ದಾರೆ. ದ್ವಿಪಕ್ಷೀಯ ಮತ್ತು ಪ್ರಾದೇಶಿಕ ವಿಷಯಗಳ ಕುರಿತು ಭೂತಾನ್ ಪ್ರಧಾನಿ ತ್ಶೆರಿಂಗ್ ತೊಬ್ಗೇ ಅವರೊಂದಿಗೆ ಮೋದಿ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಭೂತಾನ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಆರ್ಡರ್ ಆಫ್ ದಿ ಡ್ರುಕ್ ಗ್ಯಾಲ್ಪೋವನ್ನು ಮೋದಿ ಸ್ವೀಕರಿಸಿದರು. ಇನ್ನೂ ಪ್ರಧಾನಿ ಮೋದಿ ಈ ಪ್ರಶಸ್ತಿಯನ್ನು ಪಡೆದುಕೊಂಡ ಮೊದಲ ವಿದೇಶಿ ಸರ್ಕಾರದ ಮುಖ್ಯಸ್ಥರು ಎಂಬ ಹೆಗ್ಗಳಿಕೆ ಪಾತ್ರರಾದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಗೌರವ ನನ್ನ ವೈಯಕ್ತಿಕ ಸಾಧನೆಯಲ್ಲ. ಇದು ಭಾರತ ಮತ್ತು 140 ಕೋಟಿ ಭಾರತೀಯರ ಗೌರವವಾಗಿದೆ ಎಂದು ಬಣ್ಣಿಸಿದರು.

ಇದನ್ನು ಓದಿ: ಸಂಗೀತ ಸಮ್ಮೇಳನದಲ್ಲಿ ಉಗ್ರರ ಪೈಶಾಚಿಕ ಕೃತ್ಯ.. 60 ಮಂದಿ ದಾರುಣ ಸಾವು, 145ಕ್ಕೂ ಹೆಚ್ಚು ಜನ ಗಂಭೀರ

ಈ ಗೌರವ ನನ್ನ ವೈಯಕ್ತಿಕ ಸಾಧನೆಯಲ್ಲ. ಇದು ಭಾರತ ಮತ್ತು 140 ಕೋಟಿ ಭಾರತೀಯರ ಗೌರವವಾಗಿದೆ. ಈ ಮಹಾನ್ ಭೂಮಿ ಭೂತಾನ್‌ನಲ್ಲಿರುವ ಎಲ್ಲ ಭಾರತೀಯರ ಪರವಾಗಿ ನಾನು ಈ ಗೌರವವನ್ನು ವಿನಮ್ರವಾಗಿ ಸ್ವೀಕರಿಸುತ್ತೇನೆ ಮತ್ತು ನನ್ನ ಹೃದಯದೊಳಗಿನಿಂದ ಎಲ್ಲರಿಗೂ ಕೋಟಿ ಕೋಟಿ ಧನ್ಯವಾದಗಳನ್ನ ಹೇಳುತ್ತೇನೆ.

ನರೇಂದ್ರ ಮೋದಿ, ಭಾರತದ ಪ್ರಧಾನ ಮಂತ್ರಿ

ಇಂದೂ ಕೂಡ ಭೂತಾನ್​ ನೆಲದಲ್ಲಿ ನಡೆಯುವ ಹಲವು ಕಾರ್ಯಕ್ರಮಗಳಲ್ಲಿ ಪ್ರಾಧನಿ ಮೋದಿ ಭಾಗಿಯಾಗಲಿದ್ದು, ಭಾರತ ಮತ್ತು ಭೂತಾನ್ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಪಾಲುದಾರಿಕೆಯನ್ನು ಹೆಚ್ಚಿಸುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳು ನಡೆಯುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಇದು ನನ್ನೊಬ್ಬನ ಸಾಧನೆಯಲ್ಲ, ಭಾರತದ ಸಾಧನೆ’ ಭೂತಾನ್​ ಅತ್ಯುನ್ನತ ನಾಗರಿಕ ಪ್ರಶಸ್ತಿ ಸ್ವೀಕರಿಸಿದ ಮೋದಿ

https://newsfirstlive.com/wp-content/uploads/2024/03/MODI_BHUTAN_3.jpg

Load More