newsfirstkannada.com

VIDEO: ಬಿಲ್‌ ಗೇಟ್ಸ್‌ ಜೊತೆ ಡೀಪ್‌ಫೇಕ್‌ ಅಪಾಯದ ಬಗ್ಗೆ ಚರ್ಚಿಸಿದ ಪ್ರಧಾನಿ ಮೋದಿ; ಏನಂದ್ರು?

Share :

Published March 29, 2024 at 6:22pm

Update March 29, 2024 at 7:03pm

    ಡೀಪ್ ಫೇಕ್‌ನಲ್ಲಿ ನನ್ನ ಧ್ವನಿಯನ್ನು ದುರ್ಬಳೆಕೆ ಮಾಡಿಕೊಳ್ಳಬಹುದು

    ಭಾರತದಲ್ಲಿ ಬಳಸುತ್ತಿರುವ AI ಟೆಕ್ನಾಲಜಿ ಬಗ್ಗೆ ಬಿಲ್‌ ಗೇಟ್ಸ್ ಜೊತೆ ಚರ್ಚೆ

    ದೆಹಲಿಯ ಪ್ರಧಾನಿ ನಿವಾಸದಲ್ಲಿ ಮೋದಿ, ಬಿಲ್ ಗೇಟ್ಸ್ ವಿಶೇಷ ಸಂದರ್ಶನ

ನವದೆಹಲಿ: ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ಸಂದರ್ಶನ ಮಾಡಿದ್ದಾರೆ. ದೆಹಲಿಯ ಪ್ರಧಾನಿ ನಿವಾಸಕ್ಕೆ ಭೇಟಿ ಕೊಟ್ಟ ಬಿಲ್ ಗೇಟ್ಸ್, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಸೇರಿದಂತೆ ಭಾರತದ ಟೆಕ್ ಕ್ಷೇತ್ರದ ಬೆಳವಣಿಗೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಬಿಲ್ ಗೇಟ್ಸ್ ಹಾಗೂ ಪ್ರಧಾನಿ ಮೋದಿ ಅವರು ಮಾತನಾಡಿರೋ ವಿಡಿಯೋಗಳು ವೈರಲ್ ಆಗಿದೆ.

ಡೀಪ್‌ಫೇಕ್‌ ತಂತ್ರಜ್ಞಾನದ ಬಗ್ಗೆ ಹೆಚ್ಚು ಆತಂಕ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಸಂದರ್ಶನದಲ್ಲಿ ಕೆಲವೊಂದು ಮಹತ್ವದ ಪ್ರಶ್ನೆ ಕೇಳಿದ್ದಾರೆ. ಸದ್ಯ ಜಾಗತಿಕವಾಗಿ ಆರ್ಟಿಫಿಷಿಯಲ್ ಟೆಕ್ನಾಲಜಿಯನ್ನ

ಹೆಚ್ಚಾಗಿ ಬಳಸಲಾಗುತ್ತಿದೆ. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್‌ ಬಳಸುವವರಿಗೆ ಸರಿಯಾದ ಮಾಹಿತಿ ಇಲ್ಲದಿದ್ದರೆ ದುರ್ಬಳಕೆ ಆಗುತ್ತದೆ. ಡೀಪ್ ಫೇಕ್‌ನಲ್ಲಿ ನನ್ನ ಧ್ವನಿಯನ್ನು ದುರ್ಬಳೆಕೆ ಮಾಡಿಕೊಳ್ಳಬಹುದು ಅಲ್ವಾ ಎಂದು ಪ್ರಧಾನಿ ನರೇಂದ್ರ ಮೋದಿ ಆತಂಕ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಬಳಸುತ್ತಿರುವ AI ಟೆಕ್ನಾಲಜಿ ಬಗ್ಗೆ ಉಭಯ ನಾಯಕರು ಸಾಕಷ್ಟು ಚರ್ಚೆ ನಡೆಸಿದ್ದಾರೆ.

ಭಾರತದಂತಹ ವಿಶಾಲವಾದ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ತಂತ್ರಜ್ಞಾನದ ದುರ್ಬಳಕೆ ಆಗುತ್ತದೆ. ಉದಾಹರಣೆಗೆ, G20 ಶೃಂಗಸಭೆಯಲ್ಲಿ AIನಿಂದ ನನ್ನ ಭಾಷಣವನ್ನು ತಮಿಳು ಸೇರಿದಂತೆ ವಿವಿಧ ಭಾಷೆಗಳಿಗೆ ಅನುವಾದ ಮಾಡಲಾಗಿದೆ. ಹೀಗೆ ಭಾರತವೂ ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಯುತ ಬದಲಾವಣೆಗಳಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬರ್‌ ಫೋಟೋ ಬಿಡುಗಡೆ; ₹10 ಲಕ್ಷ ನಗದು ಬಹುಮಾನ

ಬಿಲ್ ಗೇಟ್ಸ್ ಅವರು ನಡೆಸಿದ ಪ್ರಧಾನಿ ಮೋದಿ ಅವರ ವಿಶೇಷ ಸಂದರ್ಶನದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಬಿಲ್ ಗೇಟ್ಸ್ ಜೊತೆ ಮುಕ್ತವಾಗಿ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಬಿಲ್‌ ಗೇಟ್ಸ್‌ ಜೊತೆ ಡೀಪ್‌ಫೇಕ್‌ ಅಪಾಯದ ಬಗ್ಗೆ ಚರ್ಚಿಸಿದ ಪ್ರಧಾನಿ ಮೋದಿ; ಏನಂದ್ರು?

https://newsfirstlive.com/wp-content/uploads/2024/03/PM-Modi-Bill-Gates.jpg

Load More