newsfirstkannada.com

ಉತ್ತರ ಪ್ರದೇಶದಲ್ಲಿ ಮತ್ತೊಂದು ಮಂದಿರ; 10 ಲಕ್ಷ ಕೋಟಿ ಯೋಜನೆಗಳಿಗೆ ಮೋದಿ ಚಾಲನೆ

Share :

Published February 20, 2024 at 6:07am

    ಲೋಕಸಭೆ ಸಮರದ ಹೊತ್ತಲ್ಲಿ ಮೋದಿ ಅಭಿವೃದ್ಧಿ ಮಂತ್ರ

    ಯುಪಿಯಲ್ಲಿ ಹೂಡಿಕೆ ವಲಯಕ್ಕೆ ‘ನಮೋ’ ಯೋಗಿ ವೇಗ

    10 ಲಕ್ಷ ಕೋಟಿ ಮೊತ್ತದ 14 ಸಾವಿರ ಯೋಜನೆಗೆ ಚಾಲನೆ

ಯೋಗಿ ನಾಡಿನಲ್ಲಿ ಪ್ರಧಾನಿ ಮೋದಿ ಲೋಕ ಸಭಾ ರಣಕಹಳೆ ಮೊಳಗಿಸಿದ್ದಾರೆ. ಅಭಿವೃದ್ಧಿಯ ಮಂತ್ರ ಜಪಿಸುತ್ತಾ ಸಾವಿರಾರು ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಅಯೋಧ್ಯೆ ರಾಮಮಂದಿರದ ಬಳಿಕ ಮತ್ತೊಂದು ಬೃಹತ್ ಮಂದಿರಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಯುಪಿಯಲ್ಲಿ ಹೂಡಿಕೆ ವಲಯಕ್ಕೆ ‘ನಮೋ’ ವೇಗ ಕೊಟ್ಟಿದ್ದಾರೆ. ಲೋಕಸಭೆ ಸಮರದ ಹೊತ್ತಲ್ಲಿ ಪ್ರಧಾನಿ ನರೇಂದ್ರ ಅಭಿವೃದ್ಧಿಯ ಮಂತ್ರ ಜಪಿಸುತ್ತಿದ್ದಾರೆ. ರಾಷ್ಟ್ರ ವ್ಯಾಪಿ ಸಂಚರಿಸುತ್ತಾ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡುತ್ತಿದ್ದಾರೆ. ಯೋಗಿನಾಡಿನಲ್ಲಿ ದಾಖಲೆಯ ಯೋಜನೆಗಳಿ ನಮೋ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಜೊತೆಗೆ ಮತ್ತೊಂದು ಐತಿಹಾಸಿಕ ದೇಗುಲದ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ದಾರೆ.

ಕಲ್ಕಿ ಮಂದಿರ ನಿರ್ಮಾಣಕ್ಕೆ ಪ್ರಧಾನಿ ಮೋದಿ ಶಂಕುಸ್ಥಾಪನೆ

ಪ್ರಧಾನಿ ನರೇಂದ್ರ ಮೋದಿ ಯೋಗಿ ನಾಡಿನಲ್ಲಿ ಅಭಿವೃದ್ಧಿಯ ಹರಿಕಾರನಾಗಿದ್ರು. ಜೊತೆಗೆ ಮತ್ತೊಂದು ಇತಿಹಾಸ ಸೃಷ್ಟಿಸೋ ಮಂದಿರಕ್ಕೆ ಅಡಿಗಲ್ಲು ಹಾಕಿದ್ರು. ಉತ್ತರಪ್ರದೇಶದ ಸಂಭಾಲ್ ಜಿಲ್ಲೆಯಲ್ಲಿ ಕಲ್ಕಿ ಧಾಮ್ ದೇವಾಲಯಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ರು. ಕಲ್ಕಿಯು ವಿಷ್ಣುವಿನ ಕೊನೆಯ ಅವತಾರ ಅಂತ ಹೇಳಲಾಗುತ್ತೆ. ಇದೀಗ ಕಲ್ಕಿ ಮಂದಿರದ ಶಂಕುಸ್ಥಾಪನೆಯ ಪೂಜಾ ವಿಧಿವಿಧಾನಗಳಲ್ಲಿ ಪ್ರಧಾನಿ ಮೋದಿ ಶ್ರದ್ಧಾ ಭಕ್ತಿಯಿಂದ ಭಾಗಿಯಾಗಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಪ್ರಧಾನಿ ಮೋದಿಗೆ ಸಿಎಂ ಯೋಗಿ ಆದಿತ್ಯನಾಥ್, ಶ್ರೀ ಕಲ್ಕಿಧಾಮ್ ನಿರ್ಮಾಣ ಟ್ರಸ್ಟ್‌ನ ಅಧ್ಯಕ್ಷ ಪ್ರಮೋದ್ ಕೃಷ್ಣಂ ಸಾಥ್ ನೀಡಿದ್ರು. ಪೂಜಾ ವಿಧಿವಿಧಾನದ ಅಂತ್ಯದಲ್ಲಿ ಪ್ರಧಾನಿ ಮೋದಿ ತಮ್ಮ ಕೈಯ್ಯಾರೆ ಕಲ್ಕಿ ಮಂದಿರ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ್ರು. ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಮತ್ತೊಂದು ಸನಾತನ ನಂಬಿಕೆಯ ಕೇಂದ್ರಕ್ಕೆ ಶಂಕುಸ್ಥಾಪನೆಯಾಗಿದೆ. ಮಂದಿರಕ್ಕೆ ಅಡಿಗಲ್ಲು ಹಾಕುವ ಭಾಗ್ಯ ನನಗೆ ದೊರೆತಿರೋದು ಸಂತಸ ತಂದಿದೆ ಎಂದ್ರು.

ಯುಪಿಯಲ್ಲಿ 14 ಸಾವಿರ ಯೋಜನೆಗಳಿಗೆ ಮೋದಿ ಚಾಲನೆ

ಒಂದ್ಕಡೆ ಧಾರ್ಮಿಕವಾದ ಐತಿಹಾಸಿಕ ಕ್ಷಣಗಳಲ್ಲಿ ಭಾಗಿಯಾಗಿದ್ದ ಮೋದಿ, ಮತ್ತೊಂದೆಡೆ ಉತ್ತರಪ್ರದೇಶದ ಅಭಿವೃದ್ಧಿಗೆ ಮತ್ತಷ್ಟು ವೇಗ ನೀಡಿದ್ರು. ಯೋಗಿ ನಾಡಿನಲ್ಲಿ ಸುಮಾರು 10 ಲಕ್ಷ ಕೋಟಿ ಮೌಲ್ಯದ 14 ಸಾವಿರ ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ರು. ಯೋಗಿ ನಾಡಿನಲ್ಲಿ ಇನ್‌ವೆಸ್ಟ್‌ಮೆಂಟ್ ವಲಯಕ್ಕೆ ಉತ್ತೇಜನ ನೀಡಿದ್ರು. 2023ರ ಗ್ಲೋಬಲ್‌ ಇನ್‌ವೆಸ್ಟ್‌ಮೆಂಟ್ ಕಾರ್ಯಕ್ರಮದಲ್ಲಿ ಯುಪಿ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. ಈ ವೇಳೆ ಯುಪಿ ಸರ್ಕಾರದ ಜೊತೆ ದೇಶ ಹಾಗೂ ವಿಶ್ವದ ಹಲವು ಖಾಸಗಿ ಕಂಪನಿಗಳು ಒಪ್ಪಂದ ಮಾಡಿಕೊಂಡಿತ್ತು. ಮಧ್ಯಮ ಮತ್ತು ದೊಡ್ಡ ಕೈಗಾರಿಕೆಗಳ ಹೂಡಿಕೆಗೆ ಕಂಪನಿಗಳು ಸಹಿ ಹಾಕಿದ್ವು.

ಇದೀಗ ಮುಂದಿನ ಕೆಲ‌ ವರ್ಷಗಳಲ್ಲಿ ಯುಪಿಯಲ್ಲಿ 14,000 ಯೋಜನೆಗಳು ಆರಂಭವಾಗಲಿವೆ. ಉತ್ಪಾದನಾ ವಲಯ, ಐಟಿ, ಐಟಿ ಏತರ, ಗ್ರೀನ್ ಎನರ್ಜಿ, ಸೇವಾ ವಲಯ, ಹೌಸಿಂಗ್, ಆಹಾರ ಉತ್ಪಾದನೆ, ಮನರಂಜನೆ ಹಾಗೂ ಶಿಕ್ಷಣ ಕ್ಷೇತ್ರ ಹಲವು ಕ್ಷೇತ್ರಗಳಲ್ಲಿ ಹೂಡಿಕೆಗೆ ಖಾಸಗಿ ಕಂಪನಿಗಳು ಒಪ್ಪಂದ ಮಾಡಿಕೊಂಡಿವೆ. ಇದೀಗ ಇದಕ್ಕೆ ಸಂಬಂಧಿಸಿದ 14 ಸಾವಿರ ಯೋಜನೆಗಳಿಗೆ ಮೋದಿ ಚಾಲನೆ ನೀಡಿದ್ದಾರೆ. ಒಟ್ಟಾರೆ, ಖಾಸಗಿ ವಲಯದ ಕಂಪನಿಗಳ ಜೊತೆ ಕೈ ಜೋಡಿಸಿ ಯೋಗಿ ಸರ್ಕಾರ ಹೂಡಿಕೆ ವಲಯಕ್ಕೆ ವೇಗ ಕೊಟ್ಟಿದೆ. ಇದಕ್ಕೆ ಪ್ರಧಾನಿ ಮೋದಿಯವರ ಅಭಿವೃದ್ಧಿ ಮಂತ್ರ ಜಪದ ಟಚ್‌ ಸಿಕ್ಕಿದೆ. ಇದೀಗ ಯೋಗಿ ನಾಡು ಮುಂದಿನ ಕೆಲ ವರ್ಷಗಳಲ್ಲಿ ಯಾವ ಮಟ್ಟಿಗೆ ಡೆವಲಪ್ ಆಗುತ್ತೆ ಅಂತ ಕಾದು ನೋಡಬೇಕಿದೆ.

‘ನಮೋ’ ‘ಧಾರ್ಮಿಕ’ ಹೂಡಿಕೆ

  • ಯುಪಿಯಲ್ಲಿ ಧಾರ್ಮಿಕ ತಾಣಗಳಿಗೆ ಹೆಚ್ಚು ಅನುದಾನ
  • ಅಯೋಧ್ಯೆ, ಮಥುರಾ, ಕಾಶಿಗೆ ಮತ್ತಷ್ಟು ಅನುದಾನ ನೀಡಿಕೆ
  • ಧಾರ್ಮಿಕ ತಾಣಗಳ ಯಾತ್ರೆಗೆ ಹೆಚ್ಚು ಹೆಸರಾಗಿರುವ ಯುಪಿ
  • ಇದನ್ನ ಗಮನದಲ್ಲಿಟ್ಟು ಹೆಚ್ಚು ಜನರನ್ನ ಆಕರ್ಷಿಸಲು ಹೂಡಿಕೆ
  • ಯುಪಿಯ ಚಿತ್ರಕೂಟ, ಕುಶಿನಗರ, ಪ್ರಯಾಗರಾಜ್, ಸೀತಾಪುರ್‌
  • ಮಿರ್ಜಾಪುರ್ ಸೇರಿದಂತೆ 8 ಸ್ಥಳಗಳಲ್ಲಿ ಬಂಡವಾಳ ಹೂಡಿಕೆ
  • 8 ಧಾರ್ಮಿಕ ಸ್ಥಳಗಳಲ್ಲಿ 86 ಸಾವಿರ ಕೋಟಿ ರೂ. ಹೂಡಿಕೆ
  • ಅಯೋಧ್ಯೆ, ಮಥುರಾ, ವಾರಣಾಸಿಯಲ್ಲೂ ಹೂಡಿಕೆ ಹೆಚ್ಚಳ
  • ₹40 ಸಾವಿರ ಕೋಟಿ ಮೊತ್ತದ ಯೋಜನೆಗಳಿಗೆ ಬಂಡವಾಳ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉತ್ತರ ಪ್ರದೇಶದಲ್ಲಿ ಮತ್ತೊಂದು ಮಂದಿರ; 10 ಲಕ್ಷ ಕೋಟಿ ಯೋಜನೆಗಳಿಗೆ ಮೋದಿ ಚಾಲನೆ

https://newsfirstlive.com/wp-content/uploads/2024/02/pm-modi-99.jpg

Load More