newsfirstkannada.com

ಮೋದಿ ಮತ್ತೆ ಪ್ರಧಾನಿ ಆಗಬೇಕು.. ಬೆರಳನ್ನೇ ಕತ್ತರಿಸಿ ಕಾಳಿಗೆ ಅರ್ಪಿಸಿದ ಅಭಿಮಾನಿ; ಆಮೇಲೇನಾಯ್ತು?

Share :

Published April 8, 2024 at 6:12am

    ಮೋದಿ ಪ್ರಧಾನಿಯಾಗಲೆಂದು ಅಭಿಮಾನಿಯ ‘ಬೆರಳ’ರಕೆ

    ಕಾರವಾರದ ಅರುಣ್ ವರ್ಣೇಕರ್ ಮೋದಿಯ ಅಪ್ಪಟ ಫ್ಯಾನ್​

    2019ರಲ್ಲೂ ಮೋದಿ ಗೆಲುವಿಗೆ ಬೆರಳು ಅರ್ಪಿಸಿದ್ದ ಅಭಿಮಾನಿ

ಕಾರವಾರ: ಸಾಮಾನ್ಯವಾಗಿ ತಮ್ಮ ನೆಚ್ಚಿನ ನಾಯಕ ಉನ್ನತ ಹುದ್ದೆಗೇರಲು ಕಾರ್ಯಕರ್ತರು, ಅಭಿಮಾನಿಗಳು ದೇವರಿಗೆ ಹರಕೆ ಹೊರುತ್ತಾರೆ. ಆದ್ರೆ ಇಲ್ಲೊಬ್ಬ ಅಂಧಾಭಿಮಾನಿ ಮಾತ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಲೆಂದು ತನ್ನ ಕೈಬೆರಳನ್ನೇ ಅರ್ಪಿಸಿದ್ದಾನೆ. ತಮ್ಮ ನೆಚ್ಚಿನ ನಾಯಕ ಮತ್ತೆ ಗೆಲ್ಲಬೇಕೆಂದು ದೇವರಿಗೆ ಹರಕೆ ಹೊತ್ತುಕೊಳ್ಳುವುದನ್ನೋ ಅಥವಾ ದೇವರಿಗೆ ಕಾಣಿಕೆ ಹಾಕುವುದನ್ನೋ ನಾವು-ನೀವೆಲ್ಲ ನೋಡಿದ್ದೇವೆ. ಆದ್ರೆ ಇಲ್ಲೊಬ್ಬ ಪ್ರಳಯಾಂತಕ ಅಭಿಮಾನಿ ಮೋದಿ ಪ್ರಧಾನಿಯಾಗಬೇಕೆಂದು ಮಾಡಿದ ಕೆಲಸವನ್ನು ನೋಡಿದ್ರೆ ನೀವು ಹೌಹಾರಿರ್ತಿರಾ.

ಇದನ್ನೂ ಓದಿ: ಬರೋಬ್ಬರಿ 270 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್‌.. ಈ ಕಿಲಾಡಿ ಲೇಡಿ ಸ್ಕೂಟಿ ಮೇಲಿರೋ ದಂಡ ಎಷ್ಟು ಗೊತ್ತಾ?

ತನ್ನ ಬೆರಳನ್ನು ತಾನೇ ಕಡಿದು ಅರ್ಪಿಸಿದ ಅರುಣ್ ವರ್ಣೇಕರ್

ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕು. ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಅಂತ ಪ್ರಾರ್ಥಿಸಿ ಅಭಿಮಾನಿಯೊಬ್ಬ ತನ್ನ ಅಭಿಮಾನದ ಎಲ್ಲೆ ಮೀರಿದ್ದಾನೆ. ಕಾಳಿ ಮಾತೆಗೆ ತನ್ನ ಬೆರಳನ್ನೇ ಅರ್ಪಿಸಿ ಎಲ್ಲರನ್ನೂ ಹೌಹಾರುವಂತೆ ಮಾಡಿದ್ದಾನೆ. ಅಂದಾಗೆ ಈ ಘಟನೆ ನಡೆದಿರೋದು ಮೋದಿ ರಾಜ್ಯ ಗುಜರಾತ್​ನಲ್ಲಲ್ಲ. ಬದಲಾಗಿ ಕರುನಾಡಿನ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಸೋನಾರವಾಡದಲ್ಲಿ. ಅರುಣ್ ವರ್ಣೇಕರ್ ಎಂಬುವವರು ಕಾಳಿ ಮಾತೆಗೆ ಎಡಗೈ ಬೆರಳನ್ನು ಅರ್ಪಿಸಿದ ಅಭಿಮಾನಿ. ಸೋನಾರವಾಡದ ಅರುಣ್ ವರ್ಣೇಕರ್ ಪ್ರಧಾನಿ ಮೋದಿಯ ಅಪ್ಪಟ ಅಭಿಮಾನಿ. ಮಾತ್ರವಲ್ಲದೆ ಮನೆಯಲ್ಲಿ ಮೋದಿಗಾಗಿ ಗುಡಿಯನ್ನೇ ನಿರ್ಮಿಸಿ ದಿನಾಲೂ ಪೂಜೆ ಮಾಡ್ತಿದ್ದಾರೆ. ಬೆರಳು ತುಂಡು ಮಾಡಿಕೊಂಡು ರಕ್ತದಲ್ಲಿ ಮಾ ಕಾಳಿಮಾತಾ ಮೋದಿ ಬಾಬಾ ಕೋ ರಕ್ಷಾ ಕರೋ, ಮೋದಿ ಬಾಬಾ ಪಿಎಂ, ತೀಸ್ರೀ ಬಾರ್​, 378+, ಮೇರಾ ಮೋದಿ ಬಾಬಾ ಸಬಸೇ ಮಹಾನ್ ಅಂತ ರಕ್ತದಲ್ಲಿ ಗೋಡೆ ಹಾಗೂ ಪೋಸ್ಟರ್‌ನಲ್ಲಿ ಬರೆದುಕೊಂಡಿದ್ದಾರೆ. ವಿಚಿತ್ರ ಏನೆಂದರೆ 2019ರಲ್ಲೂ ಮೋದಿ ಗೆಲುವಿಗಾಗಿ ಬಲಗೈ ಬೆರಳನ್ನು ಕತ್ತರಿಸಿ ಕಾಳಿಮಾತೆಗೆ ಅರ್ಪಿಸಿದ್ದ.

ದೇಶದ ಅಭಿವೃದ್ಧಿಗಾಗಿ ಮೋದಿ ಮತ್ತೊಮ್ಮೆ ಬೇಕು ಅನ್ನೋ ಅರುಣ್, ಈ ಹಿಂದೆ ಮುಂಬೈನಲ್ಲಿ ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡ್ತಿದ್ದ. ಸದ್ಯ ತಂದೆ-ತಾಯಿಯ ಆರೈಕೆಗಾಗಿ ಮುಂಬೈ ಕೆಲಸ ಬಿಟ್ಟು ಕಾರವಾರದಲ್ಲೇ ನೆಲೆಸಿದ್ದಾನೆ. ತಂದೆ ತಾಯಿಯ ಸೇವೆ ಮಾಡೋದು ಪ್ರತಿಯೊಬ್ಬ ಪುತ್ರನ ಆದ್ಯ ಕರ್ತವ್ಯ. ಆದ್ರೆ ಈ ರೀತಿ ಮೋದಿಗಾಗಿ ಬೆರಳನ್ನು ಕಟ್ ಮಾಡಿಕೊಂಡಿದ್ದನ್ನು ಅಭಿಮಾನ ಎನ್ನಬೇಕೋ ಅಥವಾ ಅಂಧಾಭಿಮಾನ ಎನ್ನಬೇಕೋ ನಿಮಗೆ ಬಿಟ್ಟಿದ್ದು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿ ಮತ್ತೆ ಪ್ರಧಾನಿ ಆಗಬೇಕು.. ಬೆರಳನ್ನೇ ಕತ್ತರಿಸಿ ಕಾಳಿಗೆ ಅರ್ಪಿಸಿದ ಅಭಿಮಾನಿ; ಆಮೇಲೇನಾಯ್ತು?

https://newsfirstlive.com/wp-content/uploads/2024/04/pm-modi2.jpg

Load More