ಬಾಂಗ್ಲಾದೇಶದ ಶಕ್ತಿ ಪೀಠದಲ್ಲಿ ಕಳ್ಳನ ಕೈಚಳಕ; ಕಾಳಿ ಮಾತೆಗೆ ಮೋದಿ ಗಿಫ್ಟ್ ನೀಡಿದ್ದ​ ಚಿನ್ನದ ಕಿರೀಟ ಕಳ್ಳತನ

author-image
Ganesh
Updated On
ಬಾಂಗ್ಲಾದೇಶದ ಶಕ್ತಿ ಪೀಠದಲ್ಲಿ ಕಳ್ಳನ ಕೈಚಳಕ; ಕಾಳಿ ಮಾತೆಗೆ ಮೋದಿ ಗಿಫ್ಟ್ ನೀಡಿದ್ದ​ ಚಿನ್ನದ ಕಿರೀಟ ಕಳ್ಳತನ
Advertisment
  • 2021ರಲ್ಲಿ ಪ್ರಧಾನಿ ನರೇಂದ್ರ ಮೋದಿಯಿಂದ ಉಡುಗೊರೆ
  • ಚಿನ್ನದ ಕಿರೀಟ ಕದಿಯುತ್ತಿರುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದೆ
  • ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ

ದೇಶದಲ್ಲಿ ನವರಾತ್ರಿ ಸಂಭ್ರಮ ಜೋರಾಗಿದೆ. ದುರ್ಗಾ ದೇವಿಯ ಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಮತ್ತೊಂದೆಡೆ, ಬಾಂಗ್ಲಾದೇಶದ ಸಖ್ತೀರಾದ ಶ್ಯಾಮನಗರದಲ್ಲಿರುವ (Shyamnagar) ಪ್ರಸಿದ್ಧ ಜೇಶೋರೇಶ್ವರಿ ಕಾಳಿ ದೇವಸ್ಥಾನದ (jeshoreshwari kali temple) ಚಿನ್ನದ ಕಿರೀಟ ಕಳ್ಳತನವಾಗಿದೆ.

51 ಶಕ್ತಿ ಪೀಠಗಳಲ್ಲಿ ಈ ದೇಗುಲ ಕೂಡ ಒಂದಾಗಿದೆ. ಕಳ್ಳತನವಾಗಿರುವ ದೃಶ್ಯ ದೇವಸ್ಥಾನದ ಸಿಸಿಟಿವಿಯಲ್ಲಿ ದಾಖಲಾಗಿದೆ. ಅದರಲ್ಲಿ ಯುವಕನೊಬ್ಬ ಚಿನ್ನದ ಕಿರೀಟವನ್ನು ತೆಗೆದುಕೊಂಡು ಹೋಗ್ತಿರುವ ದೃಶ್ಯ ಬಹಿರಂಗಗೊಂಡಿವೆ. ಚಿನ್ನದ ಕಿರೀಟವನ್ನು ಪ್ರಧಾನಿ ನರೇಂದ್ರ ಮೋದಿ ಉಡುಗೊರೆಯಾಗಿ ನೀಡಿದ್ದರು.

ಇದನ್ನೂ ಓದಿ:ನವರಾತ್ರಿಯಂದು ಅಹ್ಮದಾಬಾದ್​ನಲ್ಲಿ ಪುರುಷರು ಸ್ತ್ರೀ ವೇಷ ಹಾಕುವುದೇಕೆ; ಇದರ ಹಿಂದೆ ಇದೆ ಒಂದು ದುರಂತ ಇತಿಹಾಸ

ಬಾಂಗ್ಲಾದೇಶದ ಈ ಕಾಳಿ ದೇವಸ್ಥಾನದ ಕಿರೀಟಕ್ಕೂ ಪ್ರಧಾನಿ ಮೋದಿಗೂ ವಿಶೇಷ ಸಂಬಂಧ ಇದೆ. 2021ರಲ್ಲಿ ಮೋದಿ ಬಾಂಗ್ಲಾದೇಶಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದರು. ಈ ವೇಳೆ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದರು. ಇದೀಗ ಅದೇ ಚಿನ್ನದ ಕಿರೀಟ ಕಳ್ಳತನವಾಗಿದೆ.
ಗುರುವಾರ ಮಧ್ಯಾಹ್ನ 2:47 ರಿಂದ 2:50 ರ ನಡುವೆ ದೇವಸ್ಥಾನದಲ್ಲಿ ಕಳ್ಳತನ ನಡೆದಿದೆ. ದೇವಾಲಯದ ಅರ್ಚಕ ದಿಲೀಪ್ ಕುಮಾರ್ ಬ್ಯಾನರ್ಜಿ ದೈನಂದಿನ ಪೂಜೆಯನ್ನು ಪೂರ್ಣಗೊಳಿಸಿದ ನಂತರ, ದೇವಾಲಯದ ಬೀಗಗಳನ್ನು ನಿರ್ವಹಣೆ ಮಾಡುವ ವ್ಯಕ್ತಿಗೆ ನೀಡಿದ್ದರು.

ನಿರ್ವಹಣೆ ಮಾಡುತ್ತಿದ್ದ ವ್ಯಕ್ತಿ ರೇಖಾ ಸರ್ಕಾರ್‌, ಬೇರೆ ಕೆಲಸದಲ್ಲಿ ಬ್ಯುಸಿಯಿದ್ದ. ಈ ವೇಳೆ ಕಾಳಿ ಮಾತೆಯ ಚಿನ್ನದ ಕಿರೀಟ ಕಾಣೆಯಾಗಿದೆ.
ರೇಖಾ ಸರ್ಕಾರ್ ವಾಪಸ್ ಬಂದು ನೋಡಿದಾಗ ಕಾಳಿ ಮಾತೆಯ ಚಿನ್ನದ ಕಿರೀಟ ಕಾಣೆಯಾಗಿದೆ. ಈ ವಿಷಯವನ್ನು ಕುಡಲೇ ಎಲ್ಲರಿಗೂ ತಿಳಿಸಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಇದನ್ನೂ ಓದಿ:ಎಲ್ಲೆಲ್ಲೂ ದಸರಾ ಸಂಭ್ರಮ, ಸಡಗರ.. ಮೈಸೂರು ಅರಮನೆಯಲ್ಲಿ ಆಯುಧ ಪೂಜೆ..! ಇದರ ಮಹತ್ವ ಏನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment