/newsfirstlive-kannada/media/post_attachments/wp-content/uploads/2025/05/NARENDRA-MODI.jpg)
ಏಪ್ರಿಲ್ 22 ರಂದು ಪಹಲ್ಗಾಮ್ನ ಬೈಸರನ್ನಲ್ಲಿ ಉಗ್ರರು ರಾಕ್ಷಸೀ ಕೃತ್ಯವೆಸಗಿದ್ದರು. ಹಿಂದೂ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದ ಭಯೋತ್ಪಾದಕರು 26 ಅಮಾಯಕರ ಜೀವ ತೆಗೆದಿದ್ದರು. ಅದರಲ್ಲಿ ಶಿವಮೊಗ್ಗದ ಮಂಜುನಾಥ್ ಕೂಡ ಪ್ರಾಣ ಕಳೆದುಕೊಂಡಿದ್ದಾರೆ.
ಘೋರ ದಾಳಿಗೆ ಪತ್ನಿ ಹಾಗೂ ಮಗನ ಎದುರಲ್ಲೇ ಮಂಜುನಾಥ್ ಜೀವಬಿಟ್ಟಿದ್ದರು. ಉಗ್ರರ ಪೈಶಾಚಿಕ ಕೃತ್ಯದಿಂದ ಪತಿಯ ಕೊನೆಯ ಕ್ಷಣವನ್ನು ಕಣ್ಣಾರೆ ಕಂಡಿದ್ದ ಮಂಜುನಾಥ್ ಪತ್ನಿ ಪಲ್ಲವಿ, ಅಲ್ಲಿನ ಕರಾಳ ಕ್ಷಣದ ಬಗ್ಗೆ ಮಾಧ್ಯಮಗಳಿಗೆ ವಿವರಿಸಿದ್ದರು. ಪತಿಯ ಹಣೆಗೆ ಉಗ್ರರು ಗುಂಡಿಟ್ಟಾಗ, ನನ್ನ ಮತ್ತು ಮಗನನ್ನ ಯಾಕೆ ಉಳಿಸಿದ್ದೀರಿ..? ‘ನಮ್ಮನ್ನೂ ಮುಗಿಸಿ..’ಎಂದು ಭಯೋತ್ಪಾದಕರಿಗೆ ಕೇಳಿಕೊಂಡೆ. ಅದಕ್ಕೆ ಉಗ್ರ, ‘ಅದನ್ನು ಮೋದಿಗೆ ಹೋಗಿ ಹೇಳು’ ಎಂದ ಅಂತಾ ತಿಳಿಸಿದ್ದರು. ಉಗ್ರನ ಈ ಹೇಳಿಕೆ ಹಾಗೂ ಪಲ್ಲವಿ ಅವರ ನೋವಿನ ನುಡಿಗಳು ದೇಶದ ಜನರ ಹೃದಯವನ್ನು ಕಲುಕಿತ್ತು. ಪ್ರತೀಕಾರ ಆಗಲೇಬೇಕು ಎಂದು ಭಾರತ ಆಗ್ರಹಿಸಿತ್ತು. ಇದೀಗ ಮೋದಿಗೆ ಹೇಳು ಎಂದಿದ್ದ ಉಗ್ರನಿಗೆ ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಿದ್ದಾರೆ.
ಒದನ್ನೂ ಓದಿ: ಜಸ್ಟ್ 23 ನಿಮಿಷ..! ಆಪರೇಷನ್ ಸಿಂಧೂರಗೆ ನಡುಗಿದ ಪಾಕ್.. ಏನೆಲ್ಲ ಆಗೋಯ್ತು..?
ಆಪರೇಷನ್ ಸಿಂಧೂರ ಮೂಲಕ ಉತ್ತರ
ಹೌದು, ಮೋದಿಗೆ ಹೇಳು ಎಂದಿದ್ದ ಉಗ್ರನಿಗೆ ಭಾರತದ ಸೇನೆ ಆಪರೇಷನ್ ಸಿಂಧೂರ ಮೂಲಕ ಉತ್ತರ ಕೊಟ್ಟಿದೆ. ಇಂದು ಮಧ್ಯರಾತ್ರಿ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ಅಡಗುತಾಣಗಳನ್ನು ಗುರಿಯಾಗಿಸಿಕೊಂಡು ಭಾರತೀಯ ಸೇನೆ ದಾಳಿ ಮಾಡಿದೆ. ಸಿಂಧೂರ ಅಳಿಸಿದ ಉಗ್ರರು ಮತ್ತು ಪಾಕ್ ವಿರುದ್ಧ ಕೈಗೊಂಡ ಅತೀ ದೊಡ್ಡ ಮಿಲಿಟರಿ ಕಾರ್ಯಾಚರಣೆಯೇ ಈ ‘ಆಪರೇಷನ್ ಸಿಂಧೂರ್’ ಆಗಿದೆ.
ಭಾರತೀಯ ಸೇನೆ, ಭಾರತೀಯ ವಾಯುಪಡೆ ಜಂಟಿಯಾಗಿ ‘ಆಪರೇಷನ್ ಸಿಂಧೂರ’ ನಡೆಸಿದೆ. ಆಪರೇಷನ್ ಸಿಂಧೂರ್ ಬಗ್ಗೆ ಮಾಹಿತಿ ನೀಡಿರುವ ರಕ್ಷಣಾ ಇಲಾಖೆ, ಭಯೋತ್ಪಾದಕ ಅಡಗುತಾಣಗಳನ್ನು ಗರಿಯಾಗಿಸಿಕೊಂಡು 9 ಕಡೆಗಳಲ್ಲಿ ದಾಳಿ ಮಾಡಲಾಗಿದೆ. ಈ ದಾಳಿಯಲ್ಲಿ 80ಕ್ಕೂ ಹೆಚ್ಚು ಉಗ್ರರು ಮೃತಪಟ್ಟಿರುವ ಬಗ್ಗೆ ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: ತುಂಬಾನೇ ಸ್ಪೆಷಲ್ಲಾಗಿದೆ ‘ಆಪರೇಷನ್ ಸಿಂಧೂರ’ ಹೆಸರು.. ಇದರ ಅರ್ಥ ಏನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ