ಹುಡುಕಿ, ಹುಡುಕಿ ಹೊಡೆಯುತ್ತೇವೆ.. ಇಂಗ್ಲೀಷ್‌ನಲ್ಲಿ ಎಚ್ಚರಿಕೆ ಸಂದೇಶ ಕೊಟ್ಟ ಪ್ರಧಾನಿ ಮೋದಿ; ಏನಿದರ ಗುಟ್ಟು?

author-image
admin
Updated On
ದೇಶದ 244 ಜಿಲ್ಲೆಗಳಲ್ಲಿ ನಾಳೆ ಮಾಕ್​ ಡ್ರಿಲ್.. ಈ ಯುದ್ಧ ಕವಾಯತ್​​ನ ಉದ್ದೇಶ ಏನು..?
Advertisment
  • ಉಗ್ರರನ್ನು ಹಿಗ್ಗಾಮುಗ್ಗಾ ಅಟ್ಟಾಡಿಸಿಕೊಂಡು ಹೊಡೆದು ಹಾಕುತ್ತೇವೆ
  • ಇಂಗ್ಲೀಷ್‌ನಲ್ಲೇ ಭಾಷಣ ಮಾಡಿ ಜಗತ್ತಿಗೆ ಸ್ಪಷ್ಟ ಸಂದೇಶ ಕೊಟ್ಟ ಮೋದಿ
  • ಭಾರತೀಯರ ಇಚ್ಛಾ ಶಕ್ತಿ ಈ ಭಯೋತ್ಪಾದಕರ ಸೊಂಟ ಮುರಿಯುತ್ತೆ

ನವದೆಹಲಿ: ಪಹಲ್ಗಾಮ್‌ನಲ್ಲಿ ಭಾರತೀಯರ ರಕ್ತಪಾತ ನಡೆಸಿ ಪಾಪಿ ಪಾಕಿಸ್ತಾನದ ಉಗ್ರರು ಓಡಿ ಹೋಗಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಪಹಲ್ಗಾಮ್‌ ದಾಳಿಕೋರರಿಗಾಗಿ ಭಾರತೀಯ ಸೇನೆಯಿಂದ ಭಾರೀ ಹುಡುಕಾಟ ಶುರುವಾಗಿದೆ.

ಕಾಶ್ಮೀರದಲ್ಲಿ ಉಗ್ರರ ಬೇಟೆ ಆರಂಭವಾಗಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ರಣಹೇಡಿಗಳ ಮೇಲೆ ಕಿಡಿಕಾರಿದ್ದಾರೆ. ಅಮಾಯಕರ ಜೀವ ತೆಗೆದ ಪಾಪಿ ಉಗ್ರರನ್ನು ಹಿಗ್ಗಾಮುಗ್ಗಾ ಅಟ್ಟಾಡಿಸಿಕೊಂಡು ಹೊಡೆದು ಹಾಕುವ ಪ್ರತಿಜ್ಞೆ ಕೂಡ ಮಾಡಿದ್ದಾರೆ.

ಬಿಹಾರದ ಮಧುಬನಿಯಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂಗ್ಲೀಷ್‌ನಲ್ಲೇ ಭಾಷಣ ಮಾಡಿ ಉಗ್ರರಿಗೆ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ. ಪಹಲ್ಗಾಮ್‌ನಲ್ಲಿ ನರಮೇಧ ನಡೆಸಿದ ಭಯೋತ್ಪಾದಕರು ಕನಸಿನಲ್ಲೂ ಊಹಿಸಲಾಗದಂತಹ ಶಿಕ್ಷೆ ಕೊಡುವುದಾಗಿ ಹೇಳಿದ್ದಾರೆ.

ಸಾಮಾನ್ಯವಾಗಿ ಸಾರ್ವಜನಿಕ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದಿಯಲ್ಲೇ ಭಾಷಣ ಮಾಡುತ್ತಾರೆ. ಆದರೆ ಇಂದು ತಾವು ಪಾಕಿಸ್ತಾನಕ್ಕೆ ನೀಡುವ ಎಚ್ಚರಿಕೆ ಸಂದೇಶ ಇಡೀ ವಿಶ್ವಕ್ಕೆ ತಿಳಿಯಲಿ ಅನ್ನೋ ಉದ್ದೇಶದಿಂದ ಇಂಗ್ಲೀಷ್‌ನಲ್ಲೇ ಕಠಿಣ ಶಬ್ದಗಳನ್ನ ಬಳಕೆ ಮಾಡಿದ್ದಾರೆ.

publive-image

ಪ್ರಧಾನಿ ಮೋದಿ ಏನಂದ್ರು?
ಈ ದಾಳಿ ಕೇವಲ ಪ್ರವಾಸಿಗರ ಮೇಲೆ ಆಗಿಲ್ಲ, ದೇಶದ ಶತ್ರುಗಳು ಭಾರತದ ಆತ್ಮದ ಮೇಲೆ ದಾಳಿ ಮಾಡುವ ಸಾಹಸ ಮಾಡಿವೆ. ನಾನು ತುಂಬಾ ಸ್ಪಷ್ಟವಾಗಿ ಹೇಳುತ್ತೇನೆ. ಯಾರು ಈ ದಾಳಿ ಮಾಡಿದ್ದಾರೋ ಆ ಉಗ್ರರನ್ನು.. ಈ ದಾಳಿಗೆ ಸಂಚು ಮಾಡಿದವರಿಗೆ ಅವರ ಕಲ್ಪನೆಗೂ ಮೀರಿದ್ದ ಶಿಕ್ಷೆಯನ್ನ ನೀಡುತ್ತೇವೆ. ಶಿಕ್ಷೆ ಆಗೇ ಆಗುತ್ತೆ.

ಈಗ ಉಗ್ರರ ಅಲ್ಪ ಸ್ವಲ್ಪ ಉಳಿದ ಜಾಗವನ್ನು ಮಣ್ಣಿನಲ್ಲಿ ಮಣ್ಣು ಮಾಡುವ ಸಮಯ ಬಂದಿದೆ. 140 ಕೋಟಿ. 140 ಕೋಟಿ ಭಾರತೀಯರ ಇಚ್ಛಾ ಶಕ್ತಿ ಈ ಭಯೋತ್ಪಾದಕರ ಸೊಂಟ ಮುರಿಯುತ್ತೆ.

ಇದನ್ನೂ ಓದಿ: VIDEO: ಕನಸಿನಲ್ಲೂ ಊಹಿಸದ ಪ್ರತೀಕಾರ.. ಪಹಲ್ಗಾಮ್‌ ದಾಳಿಕೋರರಿಗೆ ಪ್ರಧಾನಿ ಮೋದಿ 10 ಎಚ್ಚರಿಕೆ 

ಗೆಳೆಯರೆ ಇಂದು ಈ ಬಿಹಾರದ ಮಣ್ಣಿನಿಂದ, ನಾನು ಇಡೀ ಜಗತ್ತಿಗೆ ಹೇಳಲು ಬಯಸುತ್ತೇನೆ. ಭಾರತವು ಪ್ರತಿಯೊಬ್ಬ ಭಯೋತ್ಪಾದಕ ಅವರ ಬೆಂಬಲಿಗರನ್ನು ಪತ್ತೆ ಹಚ್ಚಿ ಶಿಕ್ಷೆ ನೀಡುತ್ತೆ. ನಾವು ಅವರನ್ನು ಭೂಮಿಯ ಕೊನೆಯವರೆಗೂ ಹಿಂಬಾಲಿಸುತ್ತೇವೆ. ಭಾರತದ ಒಗ್ಗಟ್ಟನ್ನ ಭಯೋತ್ಪಾದನೆಯಿಂದ ಮುರಿಯಲು ಆಗುವುದಿಲ್ಲ. ಉಗ್ರರಿಗೆ ಊಹಿಸಲಾಗದಂತಹ ಶಿಕ್ಷೆ ಕೊಡ್ತೇವೆ.

ಮೃತರಿಗೆ ನ್ಯಾಯ ದೊರಕಿಸಿಕೊಡಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ. ಇಡೀ ರಾಷ್ಟ್ರವು ಈ ಸಂಕಲ್ಪದಲ್ಲಿ ದೃಢವಾಗಿದೆ. ಮಾನವೀಯತೆಯನ್ನು ನಂಬುವ ಜನರು ನಮ್ಮೊಂದಿಗಿದ್ದಾರೆ. ನಮ್ಮ ಜೊತೆ ನಿಂತ ದೇಶ ಜನರಿಗೆ, ನಾಯಕರಿಗೆ ನನ್ನ ಧನ್ಯವಾದ.
- ನರೇಂದ್ರ ಮೋದಿ, ಪ್ರಧಾನ ಮಂತ್ರಿ  


">April 24, 2025

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment