ರೈತರಿಗೆ ಗುಡ್​ನ್ಯೂಸ್ ನೀಡಿದ ಮೋದಿ; ಸಂಪುಟ ಸಭೆಯಲ್ಲಿ ಪ್ರಮುಖ ಮೂರು ನಿರ್ಧಾರ

author-image
Bheemappa
Updated On
ಕದನ ವಿರಾಮ ಬಳಿಕ ಮೋದಿ ಮೊದಲ ಸಭೆ.. ದೇಶದಲ್ಲಿ ಇಂದು ನಡೆದ 4 ಪ್ರಮುಖ ಬೆಳವಣಿಗೆಗಳು..!
Advertisment
  • ದೆಹಲಿಯಲ್ಲಿ ನಾಲ್ಕು ಉನ್ನತ ಮಟ್ಟದ ಸಭೆ ನಡೆಸಿದ ಮೋದಿ
  • ಸಭೆಯಲ್ಲಿ ಪ್ರಮುಖ ನಿರ್ಣಯಗಳನ್ನು ತೆಗೆದುಕೊಂಡಿದ್ದಾರಾ?
  • ಪಹಲ್ಗಾಮ್​ ದಾಳಿ ಬಳಿಕ ಬೆಳವಣಿಗೆ ಹಿನ್ನೆಲೆಯಲ್ಲಿ ಸಭೆಗಳು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇವತ್ತು ಸಚಿವ ಸಂಪುಟ ಸಭೆ ನಡೆಸಿತು. ಈ ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ಭಾರತ ಸರ್ಕಾರ ತೆಗೆದುಕೊಂಡಿದೆ.

ಪ್ರಧಾನಿ ಮೋದಿ ಸಭೆಯ ಪ್ರಮುಖ ಹೈಲೆಟ್ಸ್..!​​

  1. ದೇಶದಲ್ಲಿ ಜಾತಿ ಗಣತಿ ಮತ್ತು ಜನಗಣತಿ ಮಾಡುವುದು
  2.  ಜಾತಿ ಗಣತಿಯ ಮೂಲ ಜನಗಣತಿಯಲ್ಲೇ ಸೇರಿಸುವ ನಿರ್ಧಾರ
  3.  ಕಬ್ಬು ಬೆಳೆಗಾರರಿಗೆ ಗುಡ್​ನ್ಯೂಸ್, ಎಫ್​ಆರ್​​ಪಿ (Fair and Remunerative Price) ಹೆಚ್ಚಳ
  4.  ಕ್ವಿಂಟಾಲ್​ಗೆ 355 ರೂ ನಿಗಧಿ, ಅದಕ್ಕಿಂತ ಕಡಿಮೆ ಬೆಲೆಗೆ ಖರೀದಿಸಲು ಸಾಧ್ಯವಿಲ್ಲ
  5.  ಶಿಲ್ಲಾಂಗ್‌ನಿಂದ ಸಿಲ್ವರ್ ಕಾರಿಡಾರ್‌ ಯೋಜನೆಗೆ ಅನುಮೋದನೆ
  6.  ಮೇಘಾಲಯದಿಂದ ಅಸ್ಸಾಂಗೆ ಸಂಪರ್ಕಿಸುವ ಹೊಸ ಹೆದ್ದಾರಿ ಇದು
  7.  166.8 ಕಿಲೋ ಮೀಟರ್​ ಉದ್ದದ ಚತುಷ್ಪಥ ರಸ್ತೆಗೆ ಕೇಂದ್ರ ಸರ್ಕಾರ ಅನುಮತಿ

ಪಾಕ್​​ ವಿರುದ್ಧದ ಕ್ರಮ ಗೌಪ್ಯ

ಕಾಶ್ಮೀರದ ಪಹಲ್ಗಾಮ್​​ನಲ್ಲಿ ನಡೆದ ಉಗ್ರರ ಪೈಶಾಚಿಕ ಕೃತ್ಯ ಬಳಿಕ ನಡೆಯುತ್ತಿರುವ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ಇಂದು 4 ಉನ್ನತ ಮಟ್ಟದ ಸಭೆ ನಡೆಸಿದರು. ಅದರಲ್ಲಿ ರಾಜಕೀಯ ವ್ಯವಹಾರಗಳ ಸಚಿವ ಸಂಪುಟ ಸಭೆಯು ತುಂಬಾನೇ ಮಹತ್ವ  ಪಡೆದುಕೊಂಡಿತ್ತು. ಐದಾರು ವರ್ಷಗಳ ನಂತರ ನಡೆದ ಸಭೆಯಲ್ಲಿ ಜಾತಿಗಣತಿ, ಜನಗಣತಿ ಮಾಡುವ ಬಗ್ಗೆ ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ. ಇನ್ನು, ಪಹಲ್ಗಾಮ್ ದಾಳಿ ವಿಚಾರವಾಗಿ ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ವಿಚಾರದ ಬಗ್ಗೆಯೂ ಚರ್ಚೆ ನಡೆದಿದೆ. ಸದ್ಯದ ಪರಿಸ್ಥಿತಿಯಲ್ಲಿ ಅದನ್ನು ಮೋದಿ ಸರ್ಕಾರ ರಿವೀಲ್ ಮಾಡಿಲ್ಲ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment