newsfirstkannada.com

‘ನಶೆಯಲ್ಲಿ ಯುವಕರು’- ರಾಹುಲ್ ಗಾಂಧಿ ಹೇಳಿಕೆಗೆ ವಾರಣಾಸಿಯಲ್ಲೇ ಮೋದಿ ತಿರುಗೇಟು; ಹೇಳಿದ್ದೇನು?

Share :

Published February 23, 2024 at 6:12pm

  ಕಾಂಗ್ರೆಸ್ ಪಕ್ಷದ ರಾಯಲ್ ಫ್ಯಾಮಿಲಿಯವರಿಂದ ಉತ್ತರಪ್ರದೇಶಕ್ಕೆ ಅಪಮಾನ

  ಕಾಂಗ್ರೆಸ್ ಯುವರಾಜ ಕಾಶಿಯ ನನ್ನ ಮಕ್ಕಳನ್ನು ನಶೆಯಲ್ಲಿದ್ದಾರೆ ಎಂದಿದ್ದಾರೆ

  ವಾರಣಾಸಿಯಲ್ಲಿ ರಾಹುಲ್ ಗಾಂಧಿ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಿಡಿ

ವಾರಣಾಸಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೀಡಿದ್ದ ಹೇಳಿಕೆಗೆ ಪ್ರಧಾನಿ ನರೇಂದ್ರ ಮೋದಿ ಉತ್ತರಪ್ರದೇಶದಲ್ಲೇ ತಿರುಗೇಟು ಕೊಟ್ಟಿದ್ದಾರೆ. ವಾರಣಾಸಿಯಲ್ಲಿ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ, ಬೃಹತ್ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದರು.

ಕಾಂಗ್ರೆಸ್ ಪಕ್ಷದ ರಾಯಲ್ ಫ್ಯಾಮಿಲಿಯವರು ಯುಪಿ ಯುವಕರು ಮದ್ಯ ದಾಸರಾಗಿದ್ದಾರೆ ಎಂದಿದ್ದಾರೆ. ಯುಪಿ ಯುವಕರನ್ನು ನಶೆಯಲ್ಲಿರುವವರು ಎಂದಿದ್ದಾರೆ. ಇದರಿಂದ ಪರಿವಾರವಾದಿಗಳ ನಿಜವಾದ ಬಣ್ಣ ಬಯಲಾಗಿದೆ. ತಮ್ಮ ಹತಾಶೆಯನ್ನು ಯುಪಿ ಯುವಕರ ಮೇಲೆ ತೋರಿಸುತ್ತಿದ್ದಾರೆ. ಕಾಂಗ್ರೆಸ್ ಯುವರಾಜ ಕಾಶಿಯ ನನ್ನ ಮಕ್ಕಳನ್ನು ನಶೆಯಲ್ಲಿರುವವರು ಎಂದಿದ್ದಾರೆ.

ಉತ್ತರ ಪ್ರದೇಶದ ಯುವಕರಿಗೆ ರಾಹುಲ್ ಗಾಂಧಿ ಅಪಮಾನ ಮಾಡಿದ್ದಾರೆ. ಈ ಅವಮಾನವನ್ನು ನಾವು ಎಂದಿಗೂ ಮರೆಯಲ್ಲ. ಕಾಂಗ್ರೆಸ್ ಪಕ್ಷ ಕಳೆದ 20 ವರ್ಷಗಳನ್ನ ನನ್ನನ್ನು ಅಪಮಾನ ಮಾಡುವುದರಲ್ಲೇ ಕಳೆಯಿತು. ತಮಗೆ ತಲೆಬಾಗುವವರನ್ನು ಮಾತ್ರ ಪರಿವಾರವಾದಿಗಳು ಬೆಂಬಲಿಸುತ್ತಾರೆ. ಕಾಂಗ್ರೆಸ್ ಪಕ್ಷಕ್ಕೆ ರಾಮಮಂದಿರದಲ್ಲಿ ನಂಬಿಕೆ ಇಲ್ಲ. ಕಾಂಗ್ರೆಸ್ ಪಕ್ಷಕ್ಕೆ ಜನರ ಆಕಾಂಕ್ಷೆಗಳು ಅರ್ಥವಾಗಲ್ಲ. ಕಾಂಗ್ರೆಸ್‌ಗೆ ಪ್ರಭು ಶ್ರೀರಾಮನ ಮೇಲೆ ದ್ವೇಷ. ಪರಿವಾರವಾದ ಯುಪಿ ಅಭಿವೃದ್ದಿಗೆ ತಡೆಯೊಡ್ಡಿದ್ದರು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ನಶೆಯಲ್ಲಿ ಯುವಕರು’- ರಾಹುಲ್ ಗಾಂಧಿ ಹೇಳಿಕೆಗೆ ವಾರಣಾಸಿಯಲ್ಲೇ ಮೋದಿ ತಿರುಗೇಟು; ಹೇಳಿದ್ದೇನು?

https://newsfirstlive.com/wp-content/uploads/2024/02/Pm-modi-Rahul-Gandhi.jpg

Load More