newsfirstkannada.com

ಮೋದಿ ಸಮಾವೇಶದಲ್ಲಿ ಗುಡುಗಿದ ದೇವೇಗೌಡ್ರು; ಸಿದ್ದರಾಮಯ್ಯ, ಡಿಕೆಶಿಗೆ ಸಖತ್ ಪಂಚ್‌; ಏನಂದ್ರು?

Share :

Published April 14, 2024 at 6:10pm

Update April 14, 2024 at 6:13pm

    136 ಸ್ಥಾನ ಗೆದ್ದ ಇಬ್ಬರು ಮಹನೀಯರು ಬಿಜೆಪಿ ಸೋಲಿಸಬೇಕು ಅಂತಿದ್ದಾರೆ

    ಈ ತಲೆಯಲ್ಲಿ ಬುದ್ಧಿ ಇಲ್ಲದೇ ಮೋದಿ ಜತೆ ಕುಮಾರಸ್ವಾಮಿಗೆ ಹೋಗಲು ಹೇಳಲಿಲ್ಲ

    ಅಯ್ಯಯ್ಯೋ I.N.D.I.A ಅಂತೆ ಯಾರು ಈ ದೇಶ ನಡೆಸುತ್ತಿದ್ದಾರೋ ಎಂದ HDD

ಮೈಸೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಿದ್ದಾರೆ. ಮೈಸೂರಲ್ಲಿ ವಿಜಯ ಸಂಕಲ್ಪ ಸಮಾವೇಶ ನಡೆಯುತ್ತಿದ್ದು, ಬಿಜೆಪಿ, ಜೆಡಿಎಸ್‌ ನಾಯಕರು ಸಮಾವೇಶದಲ್ಲಿ ಭಾಗಿಯಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸಮಾವೇಶದಲ್ಲಿ ಜೆಡಿಎಸ್ ವರಿಷ್ಠ ಹೆಚ್‌.ಡಿ. ದೇವೇಗೌಡರು ಮಾತನಾಡಿದರು. ನನಗೆ ಮಂಡಿ ನೋವು ಇದೆ. ಎದ್ದು ನಿಂತು ಗೌರವ ಸಲ್ಲಿಸಲು ಸಾಧ್ಯವಾಗಲಿಲ್ಲ ಎಂದು ಮೋದಿ ಅವರ ಬಳಿ ಕ್ಷಮೆ ಕೋರಿದ ದೇವೇಗೌಡ್ರು, ನೇರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಅವರನ್ನು ತರಾಟೆ ತೆಗೆದುಕೊಂಡರು.

136 ಸ್ಥಾನಗಳನ್ನು ಗೆದ್ದ ಎರಡು ಮಹನೀಯರು ಕರ್ನಾಟಕದ ಸಂಪತ್ತನ್ನು ಕಳುಹಿಸಿ ಬಿಜೆಪಿ ಸೋಲಿಸಬೇಕು ಅಂತಿದ್ದಾರೆ.‌ ಅಯ್ಯಯ್ಯೋ I.N.D.I.A ಅಂತೆ ಯಾರು ಈ ದೇಶ ನಡೆಸುತ್ತಿದ್ದಾರೋ. ದೇಶವನ್ನು ಮುನ್ನಡೆಸಿದವರು ಯಾರಾದರೂ ಇದ್ದರೆ ಪಕ್ಕದಲ್ಲೇ ಕುಳಿತ್ತಿದ್ದಾರೆ. ಈ ತಲೆಯಲ್ಲಿ ಬುದ್ಧಿ ಇಲ್ಲದೇ ಕುಮಾರಸ್ವಾಮಿಗೆ ಮೋದಿ ಜತೆ ಹೋಗಲು ಹೇಳಲಿಲ್ಲ. ನೀನು ಹೋಗು, ಮೋದಿ ಜತೆ ಇರು ಅಂತ ಹೇಳಿದ್ದೇನೆ ಎಂದು ಹೆಚ್‌ಡಿಡಿ ಹೇಳಿದರು.

ಈ ರಾಜ್ಯದಲ್ಲಿ ಇಬ್ಬರು ಮಹನೀಯರು ಇದ್ದಾರೆ. ಪುಣ್ಯಾತ್ಮರಿಗೆ ನಮೋ ನಮಃ.‌ ಮೋದಿ ಅವರ ಬಗ್ಗೆ ಎಷ್ಟು ಲಘುವಾಗಿ ಒಬ್ಬ ರಾಜ್ಯದ ಮುಖ್ಯಮಂತ್ರಿ ಮಾತನಾಡುತ್ತಿದ್ದಾರೆ. ಇದೆಲ್ಲವನ್ನೂ ನಾನು ಗಮನಿಸುತ್ತಿದ್ದೇನೆ. ನೀವು ಕೇವಲ ಆರು ಕೋಟಿ ಜನರ ಮುಖ್ಯಮಂತ್ರಿಯಾಗಿ 150 ಕೋಟಿಯ ಪ್ರಧಾನಿ ಬಗ್ಗೆ ಮಾತನಾಡುತ್ತೀರಿ ಎಂದು ಗರಂ ಆದರು.

ಇದನ್ನೂ ಓದಿ: ಮಂಡ್ಯದಲ್ಲಿ ಕಾಂಗ್ರೆಸ್‌ಗೆ ಬ್ರಹ್ಮಾಸ್ತ್ರವಾದ HDK ವಿವಾದಾತ್ಮಕ ಹೇಳಿಕೆ; ಡಿ.ಕೆ ಶಿವಕುಮಾರ್‌ ಕೆಂಡಾಮಂಡಲ!

ಇನ್ನು, ನನಗೆ ಕರ್ನಾಟಕದ 28 ಸೀಟು ಗೆಲ್ಲಬೇಕು. ಮೂರು ಜೆಡಿಎಸ್ ಅಲ್ಲ, 24 ಎನ್‌ಡಿಎ ಅಭ್ಯರ್ಥಿಗಳು ಗೆಲ್ಲಬೇಕು. ಯಡಿಯೂರಪ್ಪ ಅವರೇ ನಾವು ಕೆಲಸ ಮಾಡುತ್ತೇವೆ. ನಾಲ್ಕು ಕ್ಷೇತ್ರಕ್ಕೆ ಸೀಮಿತ ಅಲ್ಲ. ನಾನು ಕೈಮುಗಿದು ಪ್ರಾರ್ಥನೆ ಮಾಡುತ್ತೇನೆ. ರಾಷ್ಟ್ರವನ್ನು ಬಲಯುತವಾಗಿ ಬೆಳೆಸುವ ಒಂದೇ ಶಕ್ತಿ ಪ್ರಧಾನಿ ನರೇಂದ್ರ ಮೋದಿ. ಇಂಥವರು ಇಂಡಿಯಾ ಒಕ್ಕೂಟದಲ್ಲಿ ನನ್ನ ಕಣ್ಣಿಗೆ ಯಾರೂ ಕಾಣುತ್ತಿಲ್ಲ ಎಂದು ಹೆಚ್‌.ಡಿ ದೇವೇಗೌಡರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿ ಸಮಾವೇಶದಲ್ಲಿ ಗುಡುಗಿದ ದೇವೇಗೌಡ್ರು; ಸಿದ್ದರಾಮಯ್ಯ, ಡಿಕೆಶಿಗೆ ಸಖತ್ ಪಂಚ್‌; ಏನಂದ್ರು?

https://newsfirstlive.com/wp-content/uploads/2024/04/Modi-Hd-Devegowda.jpg

Load More