newsfirstkannada.com

‘ಕಾಂಗ್ರೆಸ್ಸಿನದ್ದು​​​ ಮುಸ್ಲಿಂ ಲೀಗ್​ ಪ್ರಣಾಳಿಕೆ’- ಉತ್ತರ ಪ್ರದೇಶದಲ್ಲಿ ಪ್ರಧಾನಿ ಮೋದಿ ಕಿಡಿ

Share :

Published April 7, 2024 at 6:15am

    ಯೋಗಿ ರಾಜ್ಯ ಉತ್ತರ ಪ್ರದೇಶದಲ್ಲಿ ಮೋದಿ ಬೃಹತ್ ಱಲಿ

    ದೇಶವನ್ನು 5ನೇ ಅತಿದೊಡ್ಡ ಆರ್ಥಿಕತೆ ಮಾಡುವ ಗುರಿ

    ಎನ್​ಡಿಎ ಸರ್ಕಾರದ ಸಾಧನೆಗಳ ಬಗ್ಗೆ ಪ್ರಧಾನಿ ಗುಣಗಾನ

ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯದ ಪ್ರಚಾರ ಭರಾಟೆ ಜೋರಾಗಿದೆ. ಅಭ್ಯರ್ಥಿಗಳು ತಮ್ಮ ಕ್ಷೇತ್ರದಲ್ಲಿ ಅಬ್ಬರದ ಮತಬೇಟೆ ನಡೆಸುತ್ತಿದ್ದಾರೆ. ಈ ನಡುವೆ ಪ್ರಧಾನಿ ಮೋದಿ ತಮ್ಮ ಸೇನಾನಿಗಳನ್ನು ಗೆಲ್ಲಿಸಲು ಟೊಂಕ ಕಟ್ಟಿದ್ದಾರೆ. ಯೋಗಿ ರಾಜ್ಯ ಹಾಗೂ ರಾಜರೂರಲ್ಲಿ ಪ್ರಚಾರ ಮಾಡಿದ್ದಾರೆ. ಈ ವೇಳೆ ಕಾಂಗ್ರೆಸ್​ನ ಪ್ರಣಾಳಿಕೆ ವಿರುದ್ಧ ಕೆಂಡ ಕಾರಿದ್ದಾರೆ.

ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಮೋದಿ ಪ್ರಚಾರ ಱಲಿ

ಲೋಸಮರದಲ್ಲಿ 400 ಕ್ಷೇತ್ರಗಳತ್ತ ಮೇಲೆ ಕಣ್ಣಿಟ್ಟಿರುವ ಕೇಸರಿ ಪಾಳಯ ಈ ನಿಟ್ಟಿನಲ್ಲಿ ಅಬ್ಬರದ ಪ್ರಚಾರ ಮಾಡ್ತಿದೆ. ಇದರ ಭಾಗವಾಗಿಯೇ ದೇಶಾದ್ಯಂತ ಪ್ರಚಾರ ಮಾಡ್ತಿದ್ದಾರೆ. ಯೋಗಿ ರಾಜ್ಯ ಉತ್ತರ ಪ್ರದೇಶದಲ್ಲಿ ಮೋದಿ ಬೃಹತ್ ಱಲಿ ನಡೆಸಿದ್ರು. ಸಹರಾನ್‌ಪುರದಲ್ಲಿ ಚುನಾವಣಾ ಪ್ರಚಾರ ಸಮಾವೇಶವನ್ನು ಉದ್ದೇಶಿಸಿ ಮೋದಿ ಮಾತನಾಡಿದ್ರು.

ಕಾಂಗ್ರೆಸ್ ಪ್ರಣಾಳಿಕೆ ಮುಸ್ಲಿಂ ಲೀಗ್‌ನ್ನು ಪ್ರತಿಬಿಂಬಿಸುತ್ತದೆಂದು ಮೋದಿ ಕಿಡಿ

ಚುನಾವಣಾ ಪ್ರಚಾರ ಱಲಿಯಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್​ನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ಅದರಲ್ಲೂ ಮೊನ್ನೆ ಬಿಡುಗಡೆಯಾದ ಹಸ್ತ ಪಡೆಯ ಪ್ರಣಾಳಿಕೆ ವಿರುದ್ಧ ಅಕ್ಷರಶಃ ಕೆಂಡ ಕಾರಿದ್ರು. ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಾಂಗ್ರೆಸ್ ದಶಕಗಳ ಹಿಂದೆಯೇ ಕೊನೆಯಾಗಿದೆ. ಈಗಿನದ್ದು ಭಾರತದ ನಿರೀಕ್ಷೆಗಳನ್ನು ಈಡೇರಿಸುವಂಥದ್ದಲ್ಲ. ನಿನ್ನೆ ಬಿಡುಗಡೆಯಾದ ಪ್ರಣಾಳಿಕೆಯಿಂದ ಇದು ಸ್ಪಷ್ಟವಾಗಿದೆ. ಪ್ರಣಾಳಿಕೆಯು ಮುಸ್ಲಿಂ ಲೀಗ್‌ನ ಚಿಂತನೆಗಳನ್ನು ಪ್ರತಿಬಿಂಬಿಸುತ್ತದೆ. ಈ ಪಕ್ಷವು 21ನೇ ಶತಮಾನದಲ್ಲಿ ಭಾರತವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿಲ್ಲ ಅಂತ ಕಿಡಿಕಾರಿದ್ರು.

ಈಗ ಉಳಿದಿರುವ ಕಾಂಗ್ರೆಸ್​ನ ಬಳಿ ದೇಶದ ಹಿತಕ್ಕೆ ಬೇಕಾದ ಯಾವುದೇ ನೀತಿಗಳಿಲ್ಲ. ರಾಷ್ಟ್ರ ನಿರ್ಮಾನದ ವಿಷನ್ ಕೂಡ ಇಲ್ಲ. ಕಾಂಗ್ರೆಸ್ ಪ್ರಣಾಳಿಕೆಯು ಸ್ವಾತಂತ್ರ್ಯದ ಸಮಯದಲ್ಲಿ ಮುಸ್ಲಿಂ ಲೀಗ್‌ನಲ್ಲಿ ಪ್ರಚಲಿತದಲ್ಲಿದ್ದ ಅದೇ ಚಿಂತನೆಯನ್ನು ಪ್ರತಿಬಿಂಬಿಸುತ್ತದೆ. ಕಾಂಗ್ರೆಸ್ ಪ್ರಣಾಳಿಕೆಯು ಸಂಪೂರ್ಣವಾಗಿ ಮುಸ್ಲಿಂ ಲೀಗ್‌ನ ಪ್ರತಿರೂಪವಾಗಿದೆ. ಈ ಮುಸ್ಲಿಂ ಲೀಗ್ ಪ್ರಣಾಳಿಕೆಯ ಉಳಿದ ಭಾಗಗಳಲ್ಲಿ ಎಡಪಂಥೀಯರು ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿದ್ದಾರೆ.

ನರೇಂದ್ರ ಮೋದಿ, ಪ್ರಧಾನಿ

‘ಭಾರತವನ್ನು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಗಿ ಮಾಡಿದ್ದೇವೆ’

ಇನ್ನು ಮುಂದುವರೆದು ಮಾತನಾಡಿದ ಮೋದಿ, ಕಳೆದ 10 ವರ್ಷಗಳಲ್ಲಿ ನಾವು ಭಾರತವನ್ನು ವಿಶ್ವದ 5 ನೇ ಅತಿದೊಡ್ಡ ಆರ್ಥಿಕ ಸೂಪರ್ ಪವರ್ ದೇಶವನ್ನಾಗಿ ಮಾಡಿದ್ದೇವೆ. ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಭಾರತ ವಿಶ್ವದ ಅಗ್ರ 15 ಆರ್ಥಿಕತೆಗಳಲ್ಲಿ ಒಂದಾಗಿತ್ತು. ನಾವು ಅಧಿಕಾರಕ್ಕೆ ಬಂದು 10 ವರ್ಷಗಳಲ್ಲಿ ದೇಶವು ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ ಅಂತ ತಮ್ಮ ಸಾಧನೆ ಬಗ್ಗೆ ಕೊಂಡಾಡಿದ್ರು. ಉತ್ತರಪ್ರದೇಶದ ಬೆನ್ನಲ್ಲೇ ಪ್ರಧಾನಿ ರಾಜರೂರು ರಾಜಸ್ಥಾನದ ಅಜ್ಮೇರ್​ಗೆ ತೆರಳಿ ಅಲ್ಲೂ ಕೂಡ ಅಬ್ಬರದ ಪ್ರಚಾರ ನಡೆಸಿದ್ರು. ಕಾಂಗ್ರೆಸ್​ನ ಪರಿವಾರವಾದದ ವಿರುದ್ಧ ವಾಗ್ದಾಳಿ ನಡೆಸಿದ್ರು. ಒಟ್ಟಾರೆ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸ್ತಾನೇ ತಮ್ಮ ಸರ್ಕಾರದ ಸಾಧನೆಯನ್ನು ಮೋದಿ ಬಿಚ್ಚಿಟ್ಟಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಕಾಂಗ್ರೆಸ್ಸಿನದ್ದು​​​ ಮುಸ್ಲಿಂ ಲೀಗ್​ ಪ್ರಣಾಳಿಕೆ’- ಉತ್ತರ ಪ್ರದೇಶದಲ್ಲಿ ಪ್ರಧಾನಿ ಮೋದಿ ಕಿಡಿ

https://newsfirstlive.com/wp-content/uploads/2024/04/pm-modi-up2.jpg

Load More