newsfirstkannada.com

ಕಾಶಿ ವಿಶ್ವನಾಥನ ದರ್ಶನ ಪಡೆದ ಪ್ರಧಾನಿ.. ಕೈಯಲ್ಲಿ ತ್ರಿಶೂಲ ಹಿಡಿದು ಮೋದಿ ನಮೋ ನಮಃ!

Share :

Published March 10, 2024 at 7:16am

    ದೈವಿಕ ಮಂತ್ರ ಜಪಿಸುತ್ತಾ ಪ್ರಧಾನಿಯಿಂದ ಚುನಾವಣೆ ರಣಕಹಳೆ

    ಕೈಯಲ್ಲಿ ಶಿವನ ತ್ರಿಶೂಲವನ್ನು ಹಿಡಿದು ಜನರತ್ತ ಕೈ ಬೀಸಿದ ಪ್ರಧಾನಿ

    ಪ್ರಧಾನಿ ಮೋದಿ ಅಭಿವೃದ್ಧಿ ಮಂತ್ರ ಜಪಿಸುತ್ತಾ ದೇಶ ಪರ್ಯಟನೆ

ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ಪ್ರಧಾನಿ ಮೋದಿ ದೇಶಾದ್ಯಂತ ಮಿಂಚಿನ ಸಂಚಾರ ನಡೆಸ್ತಿದ್ದಾರೆ. ದೇವಸ್ಥಾನಗಳಿಗೂ ಭೇಟಿ ಕೊಡ್ತಿದ್ದಾರೆ. ಒಂದೆಡೆ ಅಭಿವೃದ್ಧಿ ಸೂತ್ರ. ಇನ್ನೊಂದೆಡೆ ದೈವಿಕ ಮಂತ್ರ ಜಪಿಸ್ತಾ ಚುನಾವಣೆ ರಣಕಹಳೆ ಮೊಳಗಿಸ್ತಿದ್ದಾರೆ. ಅದರಂತೆ ಕಾಶಿ ವಿಶ್ವನಾಥನಿಗೂ ಮೋದಿ ನಮೋ ನಮಃ ಎಂದಿದ್ದಾರೆ.

ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನವೇ ಕಮಲಪಡೆ ಕ್ಯಾಂಪೇನ್ ಶುರು ಮಾಡಿದೆ. ಇದರ ಭಾಗವಾಗಿ ಕೇಸರಿ ಬ್ರಿಗೇಡ್​ನ ರಾಜ್ಯ ಸಂಚಾರಕ್ಕೂ ಚಾಲನೆ ದೊರೆತಿದೆ. ಅದರಲ್ಲೂ ಪ್ರಧಾನಿ ಮೋದಿ ಅಭಿವೃದ್ಧಿ ಮಂತ್ರ ಜಪಿಸ್ತಾ ದೇಶ ಪರ್ಯಟನೆ ಮಾಡ್ತಿದ್ದಾರೆ. ಇದೀಗ ಸ್ವಕ್ಷೇತ್ರಕ್ಕೆ ಕಾಲಿಟ್ಟು ವಿಶ್ವನಾಥನಿಗೂ ಉಘೇ ಎಂದಿದ್ದಾರೆ.

ಟಿಕೆಟ್​​ ಘೋಷಣೆ ಬಳಿಕ ಸ್ವ-ಕ್ಷೇತ್ರಕ್ಕೆ ಮೋದಿ ಎಂಟ್ರಿ!

ನಿನ್ನೆ ಒಂದೇ ದಿನದಲ್ಲಿ ಈಶಾನ್ಯ ಭಾರತದ 4 ರಾಜ್ಯಗಳಿಗೆ ತೆರಳಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ ಸಂಜೆ ತಮ್ಮ ಸ್ವಕ್ಷೇತ್ರವಾದ ವಾರಣಾಸಿಗೆ ಕಾಲಿಟ್ಟಿದ್ರು. ವಾರಾಣಸಿಯಲ್ಲಿ ಶಕ್ತಿ ಪ್ರದರ್ಶನ ನಡೆಸಿದ ನಮೋ ಬರೋಬ್ಬರಿ 28 ಕಿಲೋ ಮೀಟರ್​​​​ ರೋಡ್​​ ಶೋ ನಡೆಸಿದ್ರು. ಜನರತ್ತ ಕೈ ಬೀಸಿದ್ರು.

ಸತತ 3ನೇ ಬಾರಿಗೆ ವಾರಾಣಸಿ ಕ್ಷೇತ್ರದಿಂದ ಮೋದಿ ಸ್ಪರ್ಧಿಸುತ್ತಿದ್ದು, ತಮ್ಮ ನೆಚ್ಚಿನ ನಾಯಕನನ್ನು ಸ್ವಾಗತಿಸಲು ಜನರ ದಂಡೇ ಹರಿದು ಬಂದಿತ್ತು. ಹೂ ಮಳೆ ಸುರಿಸುವ ಮೂಲಕ ಮೋದಿಯನ್ನ ಭರ್ಜರಿಯಾಗಿ ಸ್ವಾಗತಿಸಿದ್ರು.

ಕಾಶಿ ವಿಶ್ವನಾಥನ ದರ್ಶನ ಪಡೆದ ಪ್ರಧಾನಿ ಮೋದಿ!

ರೋಡ್​​ ಶೋ ಬಳಿಕ ಪ್ರಧಾನಿ ಮೋದಿ ಅವರು ಇತಿಹಾಸ ಪ್ರಸಿದ್ಧ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ರು, ಈ ವೇಳೆ ಉತ್ತರ ಪ್ರದೇಶ ಸಿಎಂ ಯೋಗಿ ಅದಿತ್ಯನಾಥ್​ ಕೂಡ ಸಾಥ್ ನೀಡಿದ್ರು. ಭೇಟಿ ನೀಡಿದ ಮೋದಿ ಶಿವನ ದರ್ಶನ ಪಡೆದು ಧಾರ್ಮಿಕ ವಿಧಿ ವಿಧಾನದಲ್ಲಿ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದ್ರು. ಪೂಜೆಯ ಬಳಿಕ ದೇವಸ್ಥಾನದಿಂದ ಹೊರಬಂದ ಪ್ರಧಾನಿ ಕೈಯಲ್ಲಿ ಶಿವನ ತ್ರಿಶೂಲವನ್ನು ಹಿಡಿದು ಜನರತ್ತ ಕೈ ಬೀಸಿದ್ರು. ಇದೇ ವೇಳೆ ಹರ ಹರ ಮಹಾದೇವ್​​ ಎಂದು ಘೋಷ ಮೊಳಗಿಸಿದ್ರು.

ಹೀಗೆ ತ್ರಿಶೂಲ ಹಿಡಿದು ಲೋಕ ಸಮರಕ್ಕೆ ಪ್ರಧಾನಿ ಮೋದಿ ರಣಕಹಳೆ ಮೊಳಗಿಸಿದ್ದಾರೆ. ಕಾಶಿ ವಿಶ್ವನಾಥನ ಆಶೀರ್ವಾದ ಪಡೆದು ‘ಗ್ಯಾರಂಟಿ’ ಲೋಕವನ್ನ ಅಲ್ಲಾಡಿಸೋಕ್ಕೆ ಸಜ್ಜಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾಶಿ ವಿಶ್ವನಾಥನ ದರ್ಶನ ಪಡೆದ ಪ್ರಧಾನಿ.. ಕೈಯಲ್ಲಿ ತ್ರಿಶೂಲ ಹಿಡಿದು ಮೋದಿ ನಮೋ ನಮಃ!

https://newsfirstlive.com/wp-content/uploads/2024/03/MODI-4.jpg

Load More