newsfirstkannada.com

BAPS ಹಿಂದೂ ದೇವಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ; 140 ಕೋಟಿ ಭಾರತೀಯರ ಹೃದಯ ಗೆದ್ದ UAE..!

Share :

Published February 15, 2024 at 6:44am

  ಬುರ್ಜ್ ಖಲೀಫಾ, ಮ್ಯೂಸಿಯಂ, ಮಸೀದಿ ಬೆನ್ನಲ್ಲೇ ಹೊಸ ಅಧ್ಯಾಯ

  ಇನ್ಮುಂದೆ ಅರಬ್​ಗೆ ಹೆಚ್ಚಿನ ಭಕ್ತರು ಆಗಮಿಸುತ್ತಾರೆಂದ ಮೋದಿ

  ದುಬೈನ ವಿಶ್ವ ಸರ್ಕಾರ ಶೃಂಗಸಭೆಯಲ್ಲಿ ಮೋದಿ, ಕಿಂಗ್​ಖಾನ್ ಭಾಗಿ

ಪ್ರಧಾನಿ ಮೋದಿ ಎರಡು ದಿನಗಳ ಕಾಲ ಯುಎಇ ಹಾಗೂ ಕತಾರ್ ಪ್ರವಾಸದಲ್ಲಿದ್ದಾರೆ. ಅರಬ್ ನಾಡಲ್ಲಿ ಮೊದಲ ಹಿಂದೂ ದೇವಸ್ಥಾನ ಉದ್ಘಾಟಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಈಗಾಗಲೇ ಯುಎಇನಲ್ಲಿ ಅದ್ದೂರಿ ಸ್ವಾಗತ ಸ್ವೀಕರಿಸಿರುವ ಮೋದಿ ಅಲ್ಲಿಂದ ಕತಾರ್​ಗೆ ತೆರಳಿದ್ದಾರೆ.

ಅರಬ್ಬರ ನಾಡಲ್ಲಿ ಭವ್ಯವಾದ ಅಕ್ಷರ ಪುರುಷೋತ್ತಮ ಸ್ವಾಮಿ ನಾರಾಯಣ ದೇವಸ್ಥಾನವು ತಲೆಎತ್ತಿದೆ. ಪ್ರಧಾನಿ ಮೋದಿ ದುಬೈನ ಅಬುಧಾಬಿಯಲ್ಲಿ ಮಂದಿರವನ್ನು ಉದ್ಘಾಟನೆ ಮಾಡಿದ್ದಾರೆ. ಮಹಂತ್ ಸ್ವಾಮಿ ಮಹಾರಾಜ್ ಅವರೊಂದಿಗೆ ಪ್ರಧಾನಿ ದೇಗುಲವನ್ನ ಲೋಕಾರ್ಪಣೆ ಮಾಡಿದ್ದಾರೆ. ದೇವಾಲಯ ಉದ್ಘಾಟನೆಗೂ ಮುನ್ನ ಮಂದಿರದ ಹೊರಗಡೆ ಕಲ್ಯಾಣಿಗೆ ಗಂಗಾ ಪೂಜೆ ಕಾರ್ಯವನ್ನು ಮೋದಿ ನೆರವೇರಿಸಿದರು. ನಂತರ ಪ್ರವೇಶದ್ವಾರದಲ್ಲಿ ಟೇಪ್‌ ಕತ್ತರಿಸುವ ಮೂಲಕ ದೇವಾಲಯವನ್ನು ಲೋಕಾರ್ಪಣೆಗೊಳಿಸಿ ನಾರಾಯಣನಿಗೆ ಪುಷ್ಪ ಅರ್ಪಿಸಿ ಪ್ರಾರ್ಥಿಸಿದರು.

ದುಬೈನಲ್ಲಿ ಸ್ವಾಮಿ ನಾರಾಯಣ ದೇವಸ್ಥಾನವನ್ನು ಉದ್ಘಾಟಿಸಿ ಮಾತನಾಡಿದ ಮೋದಿ, UAE ಅಧ್ಯಕ್ಷ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್‌ಗೆ ಎದ್ದು ನಿಂತು ಗೌರವ ಸಲ್ಲಿಸುವಂತೆ ಮನವಿ ಮಾಡಿದರು. ದೇವಾಲಯದ ನಿರ್ಮಾಣದಲ್ಲಿ ಯುಎಇ ಸರ್ಕಾರದ ಪಾತ್ರ ಶ್ಲಾಘನೀಯ. ಈ ದೇವಾಲಯ ಏಕತೆ ಮತ್ತು ಸೌಹಾರ್ದತೆಯ ಸಂಕೇತವಾಗಲಿದೆ. ಇಲ್ಲಿವರೆಗೆ ಬುರ್ಜ್ ಖಲೀಫಾ. ಪ್ಯೂಚರ್ ಮ್ಯೂಸಿಯಂ, ಶೇಖ್ ಜಾಯೆದ್ ಮಸೀದಿ ಮತ್ತು ಹೈಟೆಕ್ ಕಟ್ಟಡಗಳಿಗೆ ಹೆಸರುವಾಸಿಯಾಗಿದ್ದ ಯುಎಇನಲ್ಲಿ ಮತ್ತೊಂದು ಸಾಂಸ್ಕೃತಿಕ ಕಟ್ಟಡ ಜನ್ಮ ತಾಳಿದೆ. ಮುಂಬರುವ ದಿನಗಳಲ್ಲಿ ಇಲ್ಲಿಗೆ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ ಅಂತ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ಇವತ್ತು ಯುನೈಟೆಡ್ ಅರಬ್ ಎಮಿರೇಟ್ಸ್​ನ ಭೂಮಿ ಮಾನವೀಯತೆಯ ಇತಿಹಾಸದಲ್ಲಿ ಹೊಸ ಸುವರ್ಣ ಅಧ್ಯಾಯ ಬರೆದಿದೆ. ಈ ಕ್ಷಣದ ಹಿಂದೆ ಹಲವು ವರ್ಷಗಳ ಶ್ರಮ ಅಡಗಿದೆ. ಭಗವಾನ ಸ್ವಾಮಿನಾರಾಯಣ ಆಶೀರ್ವಾದ ಸಿಕ್ಕಿದೆ. ಇಲ್ಲಿವರೆಗೆ ಬುರ್ಜ್ ಖಲೀಫಾ. ಪ್ಯೂಚರ್ ಮ್ಯೂಸಿಯಂ, ಶೇಖ್ ಜಾಯೆದ್ ಮಸೀದಿ ಮತ್ತು ಹೈಟೆಕ್ ಕಟ್ಟಡಗಳಿಗೆ ಹೆಸರುವಾಸಿಯಾಗಿದ್ದ ಯುಎಇನಲ್ಲಿ ಮತ್ತೊಂದು ಸಾಂಸ್ಕೃತಿಕ ಕಟ್ಟಡ ಜನ್ಮ ತಾಳಿದೆ. ಮುಂಬರುವ ದಿನಗಳಲ್ಲಿ ಇಲ್ಲಿಗೆ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ-ನರೇಂದ್ರ ಮೋದಿ, ಪ್ರಧಾನಿ
ಭಾರತೀಯ ಕಾರ್ಮಿಕರಿಗಾಗಿ ಆಸ್ಪತ್ರೆ ನಿರ್ಮಾಣಕ್ಕೆ ದುಬೈನಲ್ಲಿ ಭೂಮಿ ನೀಡುವುದಾಗಿ ಯುಎಇ ಉಪಾಧ್ಯಕ್ಷರು ಘೋಷಿಸಿದ್ದಾರೆ. ಇದಕ್ಕೆ ನಾನು ಯುಎಇ ಅಧ್ಯಕ್ಷರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಮೋದಿ ಹೇಳಿದ್ದಾರೆ.

ದುಬೈನ ವಿಶ್ವ ಸರ್ಕಾರ ಶೃಂಗಸಭೆಯಲ್ಲಿ ಮೋದಿ, ಕಿಂಗ್‌ಖಾನ್ ಭಾಗಿ ಇನ್ನು ಮಂದಿರ ಉದ್ಘಾಟನೆ ಬಳಿಕ ಪ್ರಧಾನಿ ಮೋದಿ ದುಬೈನಲ್ಲಿ ನಡೆದ ವಿಶ್ವ ಸರ್ಕಾರ ಶೃಂಗಸಭೆಯಲ್ಲಿ ಭಾಗಿಯಾದ್ರು. ಈ ವೇಳೆ ಮಾತನಾಡಿದ ಮೋದಿ, ವಿಶ್ವಾದ್ಯಂತ ಸರ್ಕಾರಗಳು ಎದುರಿಸುತ್ತಿರುವ ಸವಾಲುಗಳನ್ನು ಎದುರಿಸುವಲ್ಲಿ ನಿರ್ಣಾಯಕ ಅಂಶವಾಗಿ ಭ್ರಷ್ಟಾಚಾರ ರಹಿತ ಮತ್ತು ಪಾರದರ್ಶಕ ಆಡಳಿತದ ಮಹತ್ವವನ್ನು ಎತ್ತಿ ತೋರಿಸಿದರು. ಈಗ ಜಗತ್ತಿಗೆ ಸ್ಮಾರ್ಟ್ ಸರ್ಕಾರದ ಅಗತ್ಯವಿದೆ ಎಂದು ಹೇಳಿದ್ರು.

ಒಟ್ಟಾರೆ ಪ್ರಧಾನಿ ಮೋದಿಗೆ ಅಬುಧಾಬಿಯಲ್ಲಿ ಆಚರಿ ಸ್ವಾಗತ ಸಿಕ್ಕಿದ್ದು ಮುಸ್ಲಿಂ ರಾಷ್ಟ್ರದಲ್ಲಿ ಭವ್ಯ ದೇವಸ್ಥಾನ ತಲೆ ಎತ್ತಿದೆ. ಇತ್ತ ವಿಶ್ವ ಸರ್ಕಾರ ಕೈಂಗನರಿಯಲ್ಲೂ ಪ್ರಧಾನಿ ಮೋದಿ ಭಾಗಿಯಾಗಿ ಹಲವು ರಾಷ್ಟ್ರಗಳ ಸಮಸ್ಯೆ ಮೇಲೆ ಬೆಳಕು ಚೆಲ್ಲಿದ್ರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BAPS ಹಿಂದೂ ದೇವಾಲಯ ಉದ್ಘಾಟಿಸಿದ ಪ್ರಧಾನಿ ಮೋದಿ; 140 ಕೋಟಿ ಭಾರತೀಯರ ಹೃದಯ ಗೆದ್ದ UAE..!

https://newsfirstlive.com/wp-content/uploads/2024/02/NARENDRA-MODI.jpg

Load More