ರಾಮೇಶ್ವರಂನಲ್ಲಿ ವರ್ಟಿಕಲ್‌ ಲಿಫ್ಟ್‌ ಬ್ರಿಡ್ಜ್‌ ಲೋಕಾರ್ಪಣೆ; ಇದರ ಇತಿಹಾಸ ಏನು? ಏನೆಲ್ಲಾ ಪ್ರಯೋಜನ?

author-image
admin
Updated On
ರಾಮೇಶ್ವರಂನಲ್ಲಿ ವರ್ಟಿಕಲ್‌ ಲಿಫ್ಟ್‌ ಬ್ರಿಡ್ಜ್‌ ಲೋಕಾರ್ಪಣೆ; ಇದರ ಇತಿಹಾಸ ಏನು? ಏನೆಲ್ಲಾ ಪ್ರಯೋಜನ?
Advertisment
  • ಪಂಬನ್-ರಾಮೇಶ್ವರಂ ನಡುವೆ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆ
  • ಹಡಗು ಚಲಿಸುವಾಗ ಬ್ರಿಡ್ಜ್ ಮೇಲಕ್ಕೆ ಹೋಗಿ ಮತ್ತದೇ ಸ್ಥಾನಕ್ಕೆ ವಾಪಸ್
  • ಮುಖ್ಯಭೂಮಿಯಿಂದ ರಾಮೇಶ್ವರಂ ದ್ವೀಪಕ್ಕೆ 5 ನಿಮಿಷದಲ್ಲಿ ಪ್ರಯಾಣ

ತಮಿಳುನಾಡಿನಲ್ಲಿ ನಿರ್ಮಾಣವಾಗಿರುವ ದೇಶದ ಮೊದಲ ವರ್ಟಿಕಲ್​​ ರೈಲ್ವೇ ಬ್ರಿಡ್ಜ್​ ಲೋಕಾರ್ಪಣೆಗೊಂಡಿದೆ. ರಾಮೇಶ್ವರಂ ದ್ವೀಪವನ್ನು ಸಂಪರ್ಕಿಸುವ ಸೇತುವೆಯನ್ನ ಸುಮಾರು 550 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ರಾಮನವಮಿಯಂದೇ ಪ್ರಧಾನಿ ಮೋದಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಪಂಬನ್​​ ಬ್ರಿಡ್ಜ್​​ನ್ನ ಉದ್ಘಾಟಿಸಿದ್ದಾರೆ.

ದೇಶದೆಲ್ಲೆಡೆ ರಾಮನವಮಿಯನ್ನು ಅದ್ಧೂರಿಯಾಗಿ ಆಚರಿಸಲಾಗಿದೆ. ಈ ವಿಶೇಷವಾದ ದಿನದಂದು ಪ್ರಧಾನಿ ನರೇಂದ್ರ ಮೋದಿ ದೇಶಕ್ಕೆ ಗಿಫ್ಟ್​ ಕೊಟ್ಟಿದ್ದಾರೆ. ತಮಿಳುನಾಡಿನ ರಾಮೇಶ್ವರಂನ ಪಂಬನ್​ನಲ್ಲಿ ನಿರ್ಮಿಸಲಾದ ವರ್ಟಿಕಲ್​​ ಲಿಫ್ಟ್​​ ಸಮುದ್ರ ಸೇತುವೆಯನ್ನ ಪ್ರಧಾನಿ ಮೋದಿ ಉದ್ಘಾಟಿಸಿದ್ದಾರೆ.

publive-image

ದೇಶದ ಮೊದಲ ವರ್ಟಿಕಲ್‌ ಲಿಫ್ಟ್‌ ಬ್ರಿಡ್ಜ್​​ ಲೋಕಾರ್ಪಣೆ
ರಾಮೇಶ್ವರಂನಲ್ಲಿ ​ರೈಲ್ವೇ ಸೇತುವೆ ಉದ್ಘಾಟಿಸಿದ ಮೋದಿ
ದೇಶದ ಮೊದಲ ವರ್ಟಿಕಲ್​​ ಲಿಫ್ಟ್​​ ಸೇತುವೆ ಇಂದು ಲೋಕಾರ್ಪಣೆಗೊಂಡಿದೆ. ತಮಿಳುನಾಡಿನ ಆಧ್ಯಾತ್ಮಿಕ ತಾಣ ರಾಮೇಶ್ವರಂನ ಪಂಬನ್​ನಲ್ಲಿರುವ ಶತಮಾನದ ಹಿಂದಿನ ಸೇತುವೆ ಪಕ್ಕದಲ್ಲಿ ಈ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ರೈಲ್ವೆ ಸೇತುವೆಯನ್ನ ನಿರ್ಮಿಸಲಾಗಿದ್ದು, ಪ್ರಧಾನಿ ಮೋದಿ ದೇಶದ ಮೊದಲ ವರ್ಟಿಕಲ್​ ಬ್ರಿಡ್ಜ್​​ನ್ನ ಉದ್ಘಾಟಿಸಿದ್ರು.

ಶ್ರೀಲಂಕಾ ಪ್ರವಾಸದಲ್ಲಿದ್ದ ಪ್ರಧಾನಿ ಮೋದಿ ಹೆಲಿಕಾಪ್ಟರ್​ ಮೂಲಕ ತಮಿಳುನಾಡಿನ ಮಂಡಪಂಗೆ ಆಗಮಿಸಿದ್ರು. ಬಳಿಕ ರೇಷ್ಮೇ ಪಂಚೆ ಬಿಳಿ ಅಂಗಿ ಉಟ್ಟು ಸಮಾರಂಭದಲ್ಲಿ ಪಾಲ್ಗೊಂಡ ಪ್ರಧಾನಿ ಮೋದಿ, ಮಧ್ಯಾಹ್ನ 12:30ರ ಸಮಯಕ್ಕೆ ಸೇತುವೆಯನ್ನ ಲೋಕಾರ್ಪಣೆಗೊಳಿಸಿದ್ರು. ಇದೇ ವೇಳೆ ರೈಲು ಮತ್ತು ಹಡಗು ಸಂಚಾರಕ್ಕೆ ಹಸಿರು ನಿಶಾನೆ ತೋರಿದ್ರು.

publive-image

ಅಂದಾಗೆ ಈ ಹಳೇ ಪಂಬನ್ ರೈಲು ಸೇತುವೆಯನ್ನ 111 ವರ್ಷಗಳ ಹಿಂದೆ ನಿರ್ಮಿಸಲಾಗಿತ್ತು, ಒಂದು ಶತಮಾನಕ್ಕೂ ಹೆಚ್ಚು ಕಾಲ ಯಾತ್ರಿಕರು, ಪ್ರವಾಸಿಗರು ಮತ್ತು ವ್ಯಾಪಾರಕ್ಕೆ ಜೀವನಾಡಿಯಾಗಿ ಕಾರ್ಯನಿರ್ವಹಿಸಿತ್ತು. ಸಮುದ್ರ ನೀರಿನ ಹೊಡೆತ, ಹೆಚ್ಚಿದ ಸಂಚಾರದಿಂದ ಶಿಥಿಲಗೊಂಡಿತ್ತು. ಹೀಗಾಗಿ, ಆಧುನಿಕ ಬೇಡಿಕೆಯಂತೆ 2019 ರಲ್ಲಿ ಕೇಂದ್ರ ಸರ್ಕಾರವು ಬದಲಿ ರೈಲ್ವೇ ಪಥ ನಿರ್ಮಾಣಕ್ಕೆ ಅನುಮೋದನೆ ನೀಡಿತ್ತು.

ಇದನ್ನೂ ಓದಿ: ಸಾಯೋ ಮುನ್ನ ಪತ್ನಿಗೆ ವಿನಯ್ ಸೋಮಯ್ಯ ವಿಶೇಷ ಮನವಿ.. ಮನಕಲಕುವಂತಿದೆ ಆ ಭಾವುಕ ಪತ್ರ! 

ಆಧುನಿಕ ಪಂಬನ್‌ ಬ್ರಿಡ್ಜ್‌ ವಿಶೇಷತೆಗಳೇನು?
ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಲಂಬ ಸಮುದ್ರ ಸೇತುವೆ
ಪಂಬನ್-ರಾಮೇಶ್ವರಂ ನಡುವೆ ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆ
ಸುಮಾರು 550 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಾಣ
ವರ್ಟಿಕಲ್ ಲಿಫ್ಟ್ ಸಮುದ್ರ ಸೇತುವೆ ಉದ್ದ 2.07 ಕಿ.ಮೀಟರ್ ಇದೆ
ಮಾನವ ರಹಿತವಾಗಿ ಕಾರ್ಯನಿರ್ವಹಿಸುವ ವರ್ಟಿಕಲ್ ಲಿಫ್ಟ್ ಬ್ರಿಡ್ಜ್​​
99 ಸ್ಪ್ಯಾನ್‌ಗಳು, 72.5 ಮೀ. ಉದ್ದದ ಲಂಬ ಲಿಫ್ಟ್ ಸ್ಪ್ಯಾನ್ ಹೊಂದಿದೆ
ಸಮುದ್ರದಲ್ಲಿ 17 ಮೀಟರ್​ ಎತ್ತರಕ್ಕೆ ಏಳುವ ಸಾಮರ್ಥ್ಯ ಹೊಂದಿದೆ
ಹಡಗು ಚಲಿಸುವಾಗ ಬ್ರಿಡ್ಜ್ ಮೇಲಕ್ಕೆ ಹೋಗಿ ಮತ್ತದೇ ಸ್ಥಾನಕ್ಕೆ ವಾಪಸ್
ಮುಖ್ಯಭೂಮಿಯಿಂದ ರಾಮೇಶ್ವರಂ ದ್ವೀಪಕ್ಕೆ 5 ನಿಮಿಷದಲ್ಲಿ ಪ್ರಯಾಣ
ಲಂಬ ಸೇತುವೆಯಲ್ಲಿ ಚಲಿಸುವ ರೈಲಿನ ವೇಗದ ಮಿತಿ ಗಂಟೆಗೆ 75 ಕಿ.ಮೀ
ಸೇತುವೆಗೆ ಶೆರ್ಜರ್ ರೋಲಿಂಗ್ ಲಿಫ್ಟ್ ತಂತ್ರಜ್ಞಾನ ಬಳಕೆ ಮಾಡಲಾಗಿದೆ
ಸಮುದ್ರದ ಬ್ರಿಡ್ಜ್‌ಗೆ ತುಕ್ಕು ಹಿಡಿಯದಂತೆ ಡಬಲ್ ಕೋಟ್ ಪೇಂಟ್ ಬಳಕೆ

ಹಳೆಯ ಸೇತುವೆ ಶಿಥಿಲಗೊಂಡಿದ್ದರಿಂದ ಪಕ್ಕದಲ್ಲಿಯೇ ಹೊಸ ಸೇತುವೆ ನಿರ್ಮಿಸಲಾಗಿದೆ. ಹಳೇ ಸೇತುವೆ ಮಾನವ ಸಹಿತವಾಗಿ ಕಾರ್ಯನಿರ್ವಹಿಸುತ್ತಿತ್ತು. ಆದ್ರೆ, ಈ ನೂತನ ಬ್ರಿಡ್ಜ್​​​​ ಮಾನವ ರಹಿತವಾಗಿ ಕಾರ್ಯನಿರ್ವಹಿಸುತ್ತದೆ.. ಸುಮಾರು 550 ಕೋಟಿ ನಿರ್ಮಾವಾಗಿರುವ ಈ ಸೇತುವೆ ಎಲೆಕ್ಟ್ರಿಕಲ್ ಆಟೋಮೆಕ್ಯಾನಿಕಲ್​​ ತಂತ್ರಜ್ಞಾನವನ್ನ ಸಹ ಒಳಗೊಂಡಿದೆ.. ಆಧುನಿಕ ಷೆರ್ಜರ್‌ ರೋಲಿಂಗ್‌ ಲಿಫ್ಟ್‌ ತಂತ್ರಜ್ಞಾನದಿಂದ ರೈಲು ಮತ್ತು ಹಡಗು ಎರಡರ ಸಂಚಾರಕ್ಕೂ ಅನುವು ಮಾಡಿಕೊಡಲಿದೆ.


">April 6, 2025

ರಾಮನಾಥಸ್ವಾಮಿ ದೇಗುಲಕ್ಕೆ ಪ್ರ್ರಧಾನಿ ಮೋದಿ ಭೇಟಿ
ರಾಮನವಮಿ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ, ಸೇತುವೆ ಉದ್ಘಾಟನೆಗೂ ಮುನ್ನ ರಾಮೇಶ್ವರಂನಲ್ಲಿರುವ ರಾಮನಾಥಸ್ವಾಮಿ ದೇವಸ್ಥಾನಕ್ಕೆ ಭೇಟಿ ಕೊಟ್ರು.. ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ್ರು.
ವೇಗವಾಗಿ ಚಲಿಸೋ ರೈಲುಗಳು.. ಹೆಚ್ಚಿದ ಜನದಟ್ಟಣೆಯನ್ನೂ ಕೂಡ ನಿರ್ವಹಿಸುವಂತೆ ಈ ಸೇತುವೆಯ ನಿರ್ಮಾಣ ಮಾಡಲಾಗಿದೆ. ಹೊಸ ಪಂಬನ್ ಸೇತುವೆ ಪ್ರಗತಿಯ ಸಂಕೇತವಾಗಿದೆ. ಇಂಜಿನಿಯರ್​ಗಳ ಕೈಚಳಕ ಇಡೀ ಭಾರತ ಹುಬ್ಬೇರಿಸುವಂತೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment