newsfirstkannada.com

ನಾಡಿದ್ದು ರಾಜ್ಯಕ್ಕೆ ಬರ್ತಿದ್ದಾರೆ ಪ್ರಧಾನಿ ಮೋದಿ.. ಕಾರ್ಯಕರ್ತರಲ್ಲಿ ಹೊಸ ಹುರುಪು..!

Share :

Published January 17, 2024 at 8:32am

    ಮೋದಿ ಸ್ವಾಗತಿಸಲು ಬಿಜೆಪಿ ಕಾರ್ಯಕರ್ತರು ತಯಾರಿ

    ಈ ಹಿಂದೆ ಭೇಟಿ ಕೊಟ್ಟಾಗ ಕಾರ್ಯಕರ್ತರ ಭೇಟಿ ಆಗಿರಲಿಲ್ಲ

    ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೋದಿ ಭೇಟಿ ಮಹತ್ವ

ಜನವರಿ 19 ರಂದು ಕಲಬುರಗಿ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿದ್ದು, ಸ್ವಾಗತಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. ದೆಹಲಿಯಿಂದ ವಿಶೇಷ ವಿಮಾನ ಮೂಲಕ ಕಲಬುರಗಿ ವಿಮಾನ ನಿಲ್ದಾಣಕ್ಕೆ ಅಂದು ಬೆಳಿಗ್ಗೆ 10 ಗಂಟೆಗೆ ಆಗಮಿಸಲಿದ್ದಾರೆ.

ಅಲ್ಲಿಂದ ಹೆಲಿಕ್ಯಾಪ್ಟರ್ ಮೂಲಕ ಸೊಲ್ಲಾಪುರಕ್ಕೆ ತೆರಳಲಿದ್ದಾರೆ. ಸೊಲ್ಲಾಪುರದಲ್ಲಿ ಬಡ ಜನರಿಗಾಗಿ ನಿರ್ಮಿಸಿರುವ 10 ಸಾವಿರ ಮನೆಗಳ ಉದ್ಘಾಟನೆ ಮತ್ತು ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಸಂಜೆ 4 ಗಂಟೆಗೆ ಮರಳಿ ಕಲಬುರಗಿ ವಿಮಾನ ನಿಲ್ದಾಣಕ್ಕೆ ಮೋದಿ ಆಗಮಿಸಲಿದ್ದಾರೆ.

ಕಲಬುರಗಿ ಏರ್ಪೋರ್ಟ್ ನಿಂದ ವಿಶೇಷ ವಿಮಾನ ಮೂಲಕ ಬೆಂಗಳೂರಿಗೆ ಆಗಮಿಸಲಿದ್ದಾರೆ. ಬೆಂಗಳೂರಿನಲ್ಲಿ ಖೇಲೋ ಇಂಡಿಯಾ ಹಾಗೂ ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಸೆಂಟರ್​ಗೆ ಭೇಟಿ ನೀಡಿಲಿದ್ದಾರೆ. ಈ ಹಿಂದೆ ಬೆಂಗಳೂರಿನ ಇಸ್ರೋ ಕಚೇರಿಗೆ ಮೋದಿ ಆಗಮಿಸಿದ್ದರೂ ಆ ವೇಳೆ ಯಾವುದೇ ಕಾರ್ಯಕರ್ತರನ್ನು ಭೇಟಿಯಾಗಿರಲಿಲ್ಲ. ಇದೀಗ 19ರಂದು ಬೆಂಗಳೂರಿಗೆ ಆಗಮಿಸುವ ಮೋದಿ ಅವರನ್ನು ಬಿಜೆಪಿ ಅದ್ಧೂರಿಯಾಗಿ ಸ್ವಾಗತಿಸಲು ತೀರ್ಮಾನಿಸಿದೆ. ಮೋದಿ ಭೇಟಿಯು ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತರಲಿದೆ ಎನ್ನಲಾಗುತ್ತಿದೆ. ಯಾಕಂದರೆ ಇನ್ನೇನು ಕೆಲವೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ. ಹೀಗಾಗಿ ಮೋದಿ ಬೆಂಗಳೂರು, ಕಲಬುರಗಿ ಭೇಟಿ ತುಂಬಾನೇ ಮಹತ್ವ ಪಡೆದುಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನಾಡಿದ್ದು ರಾಜ್ಯಕ್ಕೆ ಬರ್ತಿದ್ದಾರೆ ಪ್ರಧಾನಿ ಮೋದಿ.. ಕಾರ್ಯಕರ್ತರಲ್ಲಿ ಹೊಸ ಹುರುಪು..!

https://newsfirstlive.com/wp-content/uploads/2023/12/Ayodhya-Pm-modi.jpg

Load More