newsfirstkannada.com

ಹಳೇ ಸಂಸತ್​ ಭವನದಲ್ಲಿ ಪ್ರಧಾನಿ ಕೊನೇ ಭಾಷಣ.. 75 ವರ್ಷಗಳ ಇತಿಹಾಸ ಮೆಲುಕು ಹಾಕಿ ಮೋದಿ ಭಾವುಕ..!

Share :

Published September 19, 2023 at 6:23am

    ವಾಜಪೇಯಿಯವರ ಭಾಷಣವನ್ನೂ ಸ್ಮರಿಸಿದ ಪ್ರಧಾನಿ

    75 ವರ್ಷಗಳಲ್ಲಿ ನಡೆದ ಪ್ರಮುಖ ಘಟನೆಗಳ ಮೆಲುಕು

    ಹಳೆಯ ಸಂಸತ್​ ಭವನದಲ್ಲಿ ಮೋದಿ ಭಾವುಕ ಭಾಷಣ!

ದೇಶಾದ್ಯಂತ ತೀವ್ರ ಕುತೂಹಲ ಹೆಚ್ಚಿಸಿದ್ದ ಸಂಸತ್​ ವಿಶೇಷ ಅಧಿವೇಶನ ಶುರುವಾಗಿದೆ. ಹಳೆಯ ಸಂಸತ್​ ಭವನದಲ್ಲಿ ಇದು ಕಟ್ಟ ಕಡೇಯ ಅಧಿವೇಶನವಾಗಿದೆ. ಹೊಸ ಸಂಸತ್‌ ಭವನಕ್ಕೆ ಅಧಿವೇಶನ ಶಿಫ್ಟ್‌ ಆಗುವುದಕ್ಕೂ ಮುನ್ನ ಕೊನೆಯದಾಗಿ ಭಾಷಣ ಮಾಡಿದ ಪ್ರಧಾನಿ ಮೋದಿ, ಸಂಸತ್ತಿನಲ್ಲಿ 75 ವರ್ಷಗಳ ಪಯಣ, ಸಾಧನೆ, ನೆನಪುಗಳ ಬಗ್ಗೆ ಮೆಲುಕು ಹಾಕಿದ್ದಾರೆ.

ಹಳೆಯ ಸಂಸತ್‌ ಭವನದಲ್ಲಿ ಮೋದಿ ಕೊನೆಯ ಭಾಷಣ
75 ವರ್ಷಗಳ ಹಾದಿಯ ‘ಸಿಹಿ – ಕಹಿ’ ನೆನಪುಗಳ ಮೆಲುಕು

17ನೇ ಲೋಕಸಭೆಯ 5 ದಿನಗಳ ವಿಶೇಷ ಅಧಿವೇಶನ ಹಲವು ಹೊಸ ಮತ್ತು ಕೊನೆಯ ಹೆಜ್ಜೆಗಳಿಗೆ ಸಾಕ್ಷಿಯಾಗಲಿದೆ. 5 ದಿನಗಳ ಈ ವಿಶೇಷ ಅಧಿವೇಶನದ ಮೊದಲ ದಿನ ಹಳೆಯ ಸಂಸತ್‌ ಭವನದಲ್ಲೇ ಕಾರ್ಯ ಕಲಾಪ ನೀಡಿತು. ಇಂದಿನಿಂದ ಹೊಸ ಸಂಸತ್​ ಭವನದಲ್ಲಿ ಅಧಿವೇಶನ ನಡೆಯಲಿದ್ದು, ಪ್ರಧಾನಿ ಮೋದಿಯವರು 17ನೇ ಲೋಕಸಭೆಯ ತಮ್ಮ ಕೊನೆಯ ಭಾಷಣದಲ್ಲಿ ಕಳೆದ 75 ವರ್ಷಗಳಿಂದ ಹಳೆಯ ಸಂಸತ್​ ಭವನದಲ್ಲಿ ನಡೆದಿರುವ ಸಿಹಿ-ಕಹಿಗಳ ಭಾವನಾತ್ಮಕ ಘಟನೆಗಳನ್ನು ಮೆಲುಕು ಹಾಕಿದರು.

ಸಂಸತ್ ವಿಶೇಷ ಅಧಿವೇಶನ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಹಳೆಯ ಸಂಸತ್‌ ಭವನದಿಂದ ಹೊಸ ಸಂಸತ್ತಿಗೆ ತೆರಳುತ್ತಿರುವುದು ಕಷ್ಟವಾಗುತ್ತಿದೆ. ಯಾವುದೇ ಕುಟುಂಬವು ಒಂದು ಮನೆಯನ್ನು ಬಿಟ್ಟು ಹೋಗುವುದು ಎಷ್ಟು ಭಾವುಕ ಕ್ಷಣಗಳಿಗೆ ಸಾಕ್ಷಿಯಾಗುತ್ತದೆಯೋ, ಅಷ್ಟೇ ಭಾವನಾತ್ಮಕ ಕ್ಷಣಗಳಿಗೆ ಹಳೆಯ ಸಂಸತ್‌ ಭವನವು ದೂಡಿದೆ ಎಂದರು. ಇನ್ನು ತಾವು ಮೊದಲ ಬಾರಿಗೆ ಸಂಸತ್​ ಭವನ ಪ್ರವೇಶಿಸಿದ ಕ್ಷಣವನ್ನು ಪ್ರಧಾನಿ ಮೋದಿ ನೆನಪಿಸಿಕೊಂಡರು. ಇನ್ನು ಭಾಷಣದುದ್ದಕ್ಕೂ ಸಂಸತ್‌ ಭವನದ ಕುರಿತು ಮಾತನಾಡಿದ ಮೋದಿ, ಭಾರತದ ಮೊದಲ ಪ್ರಧಾನಿ ನೆಹರೂ, ಲಾಲ್ ಬಹದ್ದೂರ್ ಶಾಸ್ತ್ರಿ, ಅಟಲ್ ಬಿಹಾರಿ ವಾಜಪೇಯಿ ಅವರು ಭಾರತದ ಪ್ರಜಾಪ್ರಭುತ್ವವನ್ನು ಬಲಪಡಿಸಲು ಅಪಾರ ಕೊಡುಗೆ ನೀಡಿದ್ದಾರೆ ಎಂದು ಕೊಂಡಾಡಿದರು.

ನೆಹರು ಮಧ್ಯರಾತ್ರಿ ಭಾಷಣ ಸ್ಫೂರ್ತಿ.. ವಾಜಪೇಯಿ ಭಾಷಣ ದಾರಿದೀಪ

ಹಳೆಯ ಸಂಸತ್‌ನಲ್ಲಿ ಮೊದಲ ಪ್ರಧಾನಿ ನೆಹರೂ ಅವರ ಮಧ್ಯರಾತ್ರಿಯ ನಮಗೆ ಸ್ಪೂರ್ತಿ ನೀಡುತ್ತಲೇ ಇರುತ್ತವೆ ಎಂದು ಮೋದಿ ಮೆಚ್ಚುಗೆಯ ಮಾತನಾಡಿದ್ರು. ಹಾಗೂ ಈ ಸದನದಲ್ಲಿಯೇ ಅಟಲ್ ಬಿಹಾರಿ ವಾಜಪೇಯಿ ಅವರು, ಸರ್ಕಾರಗಳು ಬರುತ್ತವೆ ಮತ್ತು ಹೋಗುತ್ತವೆ, ಪಕ್ಷಗಳು ಸ್ಥಾಪಿತವಾಗುತ್ತವೆ ಮತ್ತು ನಿರ್ಣಾವಾಗುತ್ತವೆ. ಆದರೆ, ಈ ದೇಶ ಮಾತ್ರ ಇರಲೇಬೇಕು’ ಎಂಬುದಾಗಿ ಹೇಳಿದ್ದರು. ಇದು ನಮಗೆ ದಾರಿದೀಪವಾಗಿದೆ ಎಂದು, ಮಾಜಿ ಪ್ರಧಾನಿಗಳ ಅರ್ಥಪೂರ್ಣ ಮಾತುಗಳನ್ನು ಸ್ಮರಿಸಿದ್ರು.

ತುರ್ತು ಪರಿಸ್ಥಿತಿಯ ಕರಾಳ ದಿನ. ಯುದ್ಧದ ಕಠಿಣ ನಿರ್ಧಾರಕ್ಕೂ ಸಾಕ್ಷಿ

ನೆಹರು ಅವರಿಂದ ಹಿಡಿದು ನೂರಾರು ಧೀಮಂತರು, 7,500 ಸಂಸದರು ದೇಶದ ಏಳಿಗೆಗೆ ಕೊಡುಗೆ ನೀಡಿದ್ದಾರೆ. ಈ ಸಂಸತ್ತು ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನೂ ಕಂಡಿದೆ. ಯುದ್ಧ ಘೋಷಣೆ ಸೇರಿ ಹಲವು ಕಠಿಣ ನಿರ್ಧಾರಗಳ ಮೂಲಕ ಜಗತ್ತಿಗೆ ಭಾರತದ ಶಕ್ತಿಯನ್ನು ಪ್ರದರ್ಶಿಸಿದೆ ಎಂದು ಮೋದಿ ಸ್ಮರಿಸಿದರು. ಹಳೆಯ ಸಂಸತ್​ ಭವನವು ಹಲವು ರಾಜಕೀಯ ಮೇಲಾಟಗಳಿಗೂ ಸಾಕ್ಷಿಯಾಗಿದೆ. ಕೇವಲ ನಾಲ್ಕು ಸಂಸದರನ್ನು ಹೊಂದಿರುವ ಪಕ್ಷವನ್ನು ಅಧಿಕಾರದಲ್ಲಿ ಕುಳಿಸಿದ ಹೆಮ್ಮೆ ಈ ಸಂಸತ್ತಿಗಿದೆ. ಆದರೆ 100 ಕ್ಕೂ ಹೆಚ್ಚು ಸಂಸದರನ್ನು ಹೊಂದಿರುವ ಪಕ್ಷವು ವಿರೋಧ ಪಕ್ಷದಲ್ಲಿ ಕುಳಿತಿತ್ತು ಎಂದು ತಿಳಿಸಿದರು.

ಇನ್ನು ಗಣ್ಯರ ಜತೆಗೆ ಸಂಸತ್ತಿನ ಪ್ರತಿಯೊಬ್ಬ ಸಿಬ್ಬಂದಿಯೂ ಕೊಡುಗೆ ನೀಡಿದ್ದಾರೆ. ನಾವು ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಹೊಸ ಸಂಸತ್ತಿಗೆ ಹೋಗೋಣ ಎಂದು ಪ್ರಧಾನಿ ಮೋದಿ, ಹಳೆಯ ಸಂಸತ್​ ಭವನದಲ್ಲಿ 75 ವರ್ಷಗಳಿಂದ ನಡೆದ ಸಿಹಿ-ಕಹಿಯ ಘಟನೆಗಳನ್ನು ಮೆಲುಕು ಹಾಕಿದರು. ಪ್ರಧಾನಿಯ ಭಾವನಾತ್ಮಕ ಭಾಷಣಕ್ಕೆ ವಿರೋಧ ಪಕ್ಷಗಳು ಕೂಡ ಒಂದು ಕ್ಷಣ ಮೂಕ ವಿಸ್ಮಿತರಾದರು. ನಾಳೆ ಹೊಸ ಸಂಸತ್​ ಭವನದಲ್ಲಿ ಅಧಿವೇಶನ ಆರಂಭವಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹಳೇ ಸಂಸತ್​ ಭವನದಲ್ಲಿ ಪ್ರಧಾನಿ ಕೊನೇ ಭಾಷಣ.. 75 ವರ್ಷಗಳ ಇತಿಹಾಸ ಮೆಲುಕು ಹಾಕಿ ಮೋದಿ ಭಾವುಕ..!

https://newsfirstlive.com/wp-content/uploads/2023/09/pm-modi-9.jpg

Load More