/newsfirstlive-kannada/media/post_attachments/wp-content/uploads/2025/05/Operation-Sindoor8.jpg)
ಏಪ್ರಿಲ್ 22ರಂದು ಪಾಕ್ ಬೆಂಬಲಿತ ಉಗ್ರರು ಕಾಶ್ಮೀರದ ಪಹಲ್ಗಾಮ್ನಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿಕೊಂಡು ಪೈಶಾಚಿಕ ಕೃತ್ಯ ನಡೆಸಿದ್ದರು. ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕರು ಜೀವ ಕಳೆದುಕೊಂಡಿದ್ದರು. ಉಗ್ರರ ದಾಳಿಗೆ ಭಾರತ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿತ್ತು.
ಇದನ್ನೂ ಓದಿ: ಹಫೀಜ್ ಅಡಗುತಾಣ ಉಡಾಯಿಸಿದ ರಫೇಲ್.. ಪಾಕ್ ಮೇಲೆ ಭಾರತ ಪ್ರಯೋಗಿಸಿದ ಅಸ್ತ್ರಗಳು ಯಾವ್ಯಾವುದು?
ಇದೀಗ ಭಾರತೀಯ ಸೇನೆ ಹಾಗೂ ಭಾರತೀಯ ವಾಯುಪಡೆ ಜಂಟಿಯಾಗಿ ಆಪರೇಷನ್ ಸಿಂಧೂರ್ ಆರಂಭಿಸಿವೆ. ಇದು ಪಾಕ್ ವಿರುದ್ಧ ಕೈಗೊಂಡ ಅತೀ ದೊಡ್ಡ ಮಿಲಿಟರಿ ಕಾರ್ಯಾಚರಣೆಯಾಗಿದೆ. ಇನ್ನೂ, ಪಾಕ್ ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ ಹೆಸರನ್ನು ಸೂಚಿಸಿದ್ದೇ ಪ್ರಧಾನಿ ನರೇಂದ್ರ ಮೋದಿ ಎನ್ನಲಾಗಿದೆ.
ಭಾರತದ ಪ್ರಧಾನಿ ಮೋದಿ ಅವರಿಂದ ಆಪರೇಷನ್ ಸಿಂಧೂರ ಎಂದು ಮಿಲಿಟರಿ ಕಾರ್ಯಾಚರಣೆಗೆ ನಾಮಕರಣ ಮಾಡಲಾಗಿದೆ. ಈ ಮೊದಲು ಪ್ರಧಾನಿ ಮೋದಿ ಅವರ ಮುಂದೆ ಒಂದಿಷ್ಟು ಹೆಸರುಗಳನ್ನು ತೋರಿಸಿಲಾಗಿತ್ತು. ಅದರಲ್ಲಿ ಪ್ರಧಾನಿ ಮೋದಿ ಅವರು ಆಪರೇಷನ್ ಸಿಂಧೂರ ಎಂಬ ಹೆಸರನ್ನೇ ಆಯ್ಕೆ ಮಾಡಿದ್ದಾರೆ. ಹೀಗಾಗಿ ಭಾರತದ ಕಾರ್ಯಾಚರಣೆಗೆ ಆಪರೇಷನ್ ಸಿಂಧೂರ ಹೆಸರು ಅನೇಕ ಕಾರಣಕ್ಕೆ ವಿಶಿಷ್ಟ, ವಿಶೇಷವಾಗಿದೆ. ಏಕೆಂದರೆ ಸಿಂಧೂರ ಎಂಬ ಪದವು ಭಾರತೀಯ ಸಂಸ್ಕೃತಿಯಲ್ಲಿ ಶಕ್ತಿ, ರಕ್ಷಣೆ, ಸಮೃದ್ಧಿ, ಸೌಭಾಗ್ಯ, ಶಕ್ತಿ ದೇವತೆ ಪಾರ್ವತಿ, ದುರ್ಗಾ ಶಕ್ತಿಯ ಸಂಕೇತವಾಗಿದೆ.
ಭಾರತೀಯ ಸೇನೆಯ ಧೈರ್ಯ, ತ್ಯಾಗ, ಶೌರ್ಯ ಮತ್ತು ದೇಶವನ್ನು ರಕ್ಷಿಸುವ ಸಂಕಲ್ಪವನ್ನು ಸೂಚ್ಯವಾಗಿ ತಿಳಿಸುತ್ತದೆ. ಇದು ಜೀವನ ಮತ್ತು ಬಲಿದಾನದೊಂದಿಗೆ ಸಂಬಂಧ ಹೊಂದಿದೆ. ಸಿಂದೂರವು ಕೇವಲ ಒಂದು ವಸ್ತುವಲ್ಲ, ಭಾರತೀಯ ಸಂಸ್ಕೃತಿಯಲ್ಲಿ ಆಳವಾದ ಭಾವನಾತ್ಮಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಮೌಲ್ಯವನ್ನು ಹೊಂದಿದೆ.
ಇದನ್ನೂ ಓದಿ: ವಾಯುಪಡೆಯಿಂದ ಮತ್ತೊಂದು ಅಟ್ಯಾಕ್.. ಪಾಕ್ಗೆ ಚೀನಾ ನೀಡಿದ್ದ ಯುದ್ಧ ವಿಮಾನ JF-17 ಉಡೀಸ್..! VIDEO
ಸದ್ಯ ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ 9 ಅಡಗುತಾಣಗಳ ಮೇಲೆ ಈ ದಾಳಿ ಆಗಿದೆ. ಮುರೀದ್ಕೆ, ಮುಜಾಫರ್ಬಾದ್, ಬಹಾವಲ್ಪುರ್, ಕೋಟ್ಲಿ, ಚಾಕ್ಅಮ್ರು, ಗುಲ್ಪುರ್, ಭಿಂಬರ್ನಲ್ಲಿ ದಾಳಿ ಆಗಿದೆ. ಇನ್ನೂ, ಭಾರತೀಯ ಸೇನೆ, ಭಾರತೀಯ ವಾಯುಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ 23 ನಿಮಿಷದಲ್ಲೇ 80ಕ್ಕೂ ಹೆಚ್ಚು ಮಂದಿ ಉಗ್ರರು ಮೃತಪಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ