newsfirstkannada.com

ನನಗೆ ಮೋದಿ ಭೇಟಿ ಯಾವತ್ತೂ ಖುಷಿ -ಬಿಲ್​ ಗೇಟ್ಸ್​ ಪ್ರಧಾನಿ ಮೋದಿ ಮಧ್ಯೆ ಮಹತ್ವದ ಮಾತುಕತೆ..!

Share :

Published March 1, 2024 at 9:53am

Update March 1, 2024 at 9:56am

    ಭಾರತದ ಪ್ರವಾಸದಲ್ಲಿರುವ ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್

    ಕೃಷಿ, ಆರೋಗ್ಯ, ಹವಾಮಾನ, AI ಬಗ್ಗೆ ಗಣ್ಯರಿಂದ ಮಹತ್ವದ ಚರ್ಚೆ

    ಸ್ಮೃತಿ ಇರಾನಿ, ಜೈಶಂಕರ್ ಅವರನ್ನೂ ಭೇಟಿಯಾಗಿರುವ ಗೇಟ್ಸ್​

ಭಾರತ ಪ್ರವಾಸದಲ್ಲಿರುವ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾಗಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು.. ಪ್ರಧಾನಿ ಮೋದಿಯವರೊಂದಿಗಿನ ಭೇಟಿ ವಿಶೇಷವಾಗಿತ್ತು ಎಂದಿದ್ದಾರೆ.

ಇನ್ನು ಪ್ರಧಾನಿ ಮೋದಿ ಕೂಡ ಬಿಲ್ ಗೇಟ್ಸ್ ಭೇಟಿಯಾಗಿರೋದನ್ನು ಸ್ಮರಣೀಯ ಎಂದು ಬಣ್ಣಿಸಿದ್ದಾರೆ. ಇಬ್ಬರ ನಡುವೆ ಮಹತ್ವದ ವಿಚಾರಗಳ ಕುರಿತು ವಿಸ್ತೃತ ಚರ್ಚೆ ನಡೆದಿದೆ. ನಾನು ನರೇಂದ್ರ ಮೋದಿ ಅವರನ್ನು ಭೇಟಿಯಾಗಲು ಯಾವಾಗಲೂ ಪ್ರೇರೇಪಿತನಾಗಿರುತ್ತೇನೆ. ಅವರ ಜೊತೆ ಚರ್ಚಿಸಲು ಬಹಳಷ್ಟು ವಿಚಾರ ಇತ್ತು. ನಾವು ಸಾರ್ವಜನಿಕ ಒಳಿತಿಗಾಗಿ AI ಬಗ್ಗೆ ಮಾತನಾಡಿದ್ದೇವೆ. ಜೊತೆಗೆ ನಾವು ಭಾರತದಿಂದ ಹೇಗೆ ಜಗತ್ತಿಗೆ ಪಾಠಗಳನ್ನು ತೆಗೆದುಕೊಳ್ಳಬಹುದು ಅನ್ನೋದ್ರ ಬಗ್ಗೆಯೂ ಚರ್ಚೆಯಾಗಿದೆ. ಮಹಿಳಾ ನೇತೃತ್ವದ ಅಭಿವೃದ್ಧಿ, ಕೃಷಿ, ಆರೋಗ್ಯ ಮತ್ತು ಹವಾಮಾನ ಹೊಂದಾಣಿಕೆಯಲ್ಲಿ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಬಿಲ್​​​ ಗೇಟ್ಸ್ ತಿಳಿಸಿದ್ದಾರೆ.

ಭಾರತೀಯ ಸಂಶೋಧನೆ ಮತ್ತು ತಂತ್ರಜ್ಞಾನದ ಹತೋಟಿ ಕುರಿತು ಚರ್ಚೆ ಆಗಿದೆ. ಗೇಟ್ಸ್ ಫೌಂಡೇಶನ್ ಇಂಡಿಯಾ ಮತ್ತು ಆರೋಗ್ಯ ಸಚಿವಾಲಯ ನಡುವಿನ ಪಾಲುದಾರಿಕೆ ಮುಂದುವರಿಸುವ ನಿರೀಕ್ಷೆ ಇದೆ ಎಂದಿದ್ದಾರೆ. ಮೋದಿ ಭೇಟಿಗೂ ಮೊದಲು ಕೇಂದ್ರ ಆರೋಗ್ಯ ಸಚಿವರಾದ ಮನ್ಸುಕ್ ಮಾಂಡವಿಯಾ, ಸ್ಮೃತಿ ಇರಾನಿ, ಎಸ್​ ಜೈಶಂಕರ್ ಅವರನ್ನು ಭೇಟಿಯಾಗಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ನನಗೆ ಮೋದಿ ಭೇಟಿ ಯಾವತ್ತೂ ಖುಷಿ -ಬಿಲ್​ ಗೇಟ್ಸ್​ ಪ್ರಧಾನಿ ಮೋದಿ ಮಧ್ಯೆ ಮಹತ್ವದ ಮಾತುಕತೆ..!

https://newsfirstlive.com/wp-content/uploads/2024/03/PM-MODI-10.jpg

Load More