ಮತ್ತೆ ಪ್ರಶಂಸೆ ಪಡೆದ ವೈಭವ್ ಸೂರ್ಯವಂಶಿ.. ಯಂಗ್ ಕ್ರಿಕೆಟರ್​ಗೆ ಪ್ರಧಾನಿ ಮೋದಿ ಹೇಳಿದ್ದು ಏನು?

author-image
Bheemappa
Updated On
ಮತ್ತೆ ಪ್ರಶಂಸೆ ಪಡೆದ ವೈಭವ್ ಸೂರ್ಯವಂಶಿ.. ಯಂಗ್ ಕ್ರಿಕೆಟರ್​ಗೆ ಪ್ರಧಾನಿ ಮೋದಿ ಹೇಳಿದ್ದು ಏನು?
Advertisment
  • ಕೇವಲ 35 ಬಾಲ್​ಗಳಲ್ಲಿ ಸೆಂಚುರಿ ಬಾರಿಸಿದ್ದ ಸೂರ್ಯವಂಶಿ
  • ಯುವ ಆಟಗಾರನ ಮುಂದಿನ ಕ್ರಿಕೆಟ್​ ಜೀವನಕ್ಕೆ ಶುಭ ಹಾರೈಕೆ
  • ಪ್ರಧಾನಿ ಮೋದಿ ಪಾದ ಮುಟ್ಟಿ ನಮಸ್ಕರಿಸಿದ ಸೂರ್ಯವಂಶಿ

ಪರಿಚಯಸ್ಥರು, ರಾಜಕಾರಣಿಗಳು, ಕ್ರಿಕೆಟರ್ಸ್​, ಸಿನಿಮಾದವರು ಸಿಕ್ಕರೇ ಪ್ರಧಾನಿ ಮೋದಿ ಅವರು ಕುಶಲೋಪರಿ ವಿಚಾರಿಸುತ್ತಾರೆ. ಅದರಲ್ಲಿ ಮೋದಿಯವರಿಗೆ ಯುವಕರನ್ನು ಕಂಡರೇ ಅಷ್ಟೇ ಪ್ರೀತಿ ಇದೆ. ಅದರಂತೆ ಐಪಿಎಲ್​ನ ಯುವ ಆಟಗಾರ ವೈಭವ್​ ಸೂರ್ಯವಂಶಿ ಅವರ ಕುಟುಂಬಸ್ಥರು ಮೋದಿ ಅವರನ್ನು ಭೇಟಿಯಾಗಿದ್ದಾರೆ.

ಬಿಹಾರನ ಪಾಟ್ನಾ ಏರ್​ಪೋರ್ಟ್​ನಲ್ಲಿ ಪ್ರಧಾನಿ ಮೋದಿಯವರನ್ನು ವೈಭವ್​ ಸೂರ್ಯವಂಶಿ ಹಾಗೂ ಯುವ ಆಟಗಾರನ ತಂದೆ, ತಾಯಿ ಭೇಟಿಯಾಗಿದ್ದಾರೆ. ಈ ವೇಳೆ ಸೂರ್ಯವಂಶಿ ಹಾಗೂ ಅವರ ತಂದೆ, ತಾಯಿ ಜೊತೆ ಪ್ರಧಾನಿ ಮೋದಿ ಮಾತನಾಡಿದರು. ಈ ವೇಳೆ ವೈಭವ್​ ಸೂರ್ಯವಂಶಿ ಅವರು ಪ್ರಧಾನಿ ಮೋದಿಯವರ ಪಾದ ಮುಟ್ಟಿ ನಮಸ್ಕಾರ ಮಾಡಿದರು. ಈ ವೇಳೆ ಪ್ರಧಾನಿಯವರು ಸೂರ್ಯವಂಶಿಗೆ ಬೆನ್ನು ತಟ್ಟಿ ಶುಭ ಹಾರೈಸಿದ್ದಾರೆ.

ಇದನ್ನೂ ಓದಿ: ಕಮಲ್ ಹಾಸನ್​ಗೆ ಟಾಂಗ್ ಕೊಟ್ಟ ರಚಿತಾ ರಾಮ್​.. ಹಿರಿಯ ನಟನ ಹೆಸರು ಹೇಳದೇ​ ಡಿಚ್ಚಿ!

publive-image

ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿರುವುದನ್ನು ಪ್ರಧಾನಿ ಮೋದಿಯವರು ತಮ್ಮ ಅಧಿಕೃತ ಎಕ್ಸ್​ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಯಂಗ್ ಕ್ರಿಕೆಟರ್​ ಸನ್ಷೆಷನ್ ವೈಭವ್ ಸೂರ್ಯವಂಶಿ ಮತ್ತು ಅವರ ಪೋಷಕರನ್ನು ವಿಮಾನ ನಿಲ್ದಾಣದಲ್ಲಿ ಭೇಟಿ ಮಾಡಿದೆ. ಸೂರ್ಯವಂಶಿಯ ಕ್ರಿಕೆಟ್ ಸ್ಕಿಲ್ಸ್​ ದೇಶದಲ್ಲೆಡೆ ಪ್ರಶಂಸಿಸಲಾಗುತ್ತಿದೆ. ಅವರ ಮುಂದಿನ ಭವಿಷ್ಯದ ಪ್ರಯತ್ನಗಳಿಗೆ ಶುಭಾಶಯಗಳು ಎಂದು ಮೋದಿ ತಿಳಿಸಿದ್ದಾರೆ.

14 ವರ್ಷದ ಬಾಲಕ ವೈಭವ್ ಸೂರ್ಯವಂಶಿ ಐಪಿಎಲ್​ ಕ್ರಿಕೆಟ್​ ಲೋಕದಲ್ಲಿ ಸನ್ಷೆಷನ್ ಆಗಿದ್ದಾರೆ. ರಾಜಸ್ಥಾನದ ಯಂಗ್ ಬ್ಯಾಟರ್​​ ವಿಶ್ವಕ್ಕೆ ತನ್ನ ಬ್ಯಾಟಿಂಗ್​ ಪ್ರದರ್ಶನ ತೋರಿಸಿಕೊಂಡಿದ್ದಾರೆ. ಗುಜರಾತ್​ ಟೈಟನ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ಅದ್ಭುತವಾಗಿ ಬ್ಯಾಟ್​ ಬೀಸಿದ್ದ ವೈಭವ್​ ಸೂರ್ಯವಂಶಿ ಕೇವಲ 35 ಬಾಲ್​ಗಳನ್ನು ಸೆಂಚುರಿ ಬಾರಿಸಿದ್ದರು. ಈ ಸೆಂಚುರಿಯಲ್ಲಿ 11 ಸಿಕ್ಸರ್​ ಇರುವುದು ವಿಶೇಷ.


">May 30, 2025

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment