/newsfirstlive-kannada/media/post_attachments/wp-content/uploads/2025/02/OBESITY-MODI-TWEET.jpg)
ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ನಡೆದ ಮನ್​ ಕಿ ಬಾತ್​ನಲ್ಲಿ ಬೊಜ್ಜಿನ ವಿಷಯ ಕುರಿತು ಮಾತನಾಡಿದ್ದರು. ಪ್ರತಿ 8 ಜನರಲ್ಲಿ ಒಬ್ಬರು ಈ ಸ್ಥೂಲಕಾಯ ಅಥವಾ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದ್ದರು. ಅದರಲ್ಲೂ ಚಿಕ್ಕ ಮಕ್ಕಳಲ್ಲಿ ಇದರ ಪ್ರಮಾಣ ಹೆಚ್ಚಾಗುತ್ತಿರುವುದಕ್ಕೆ ಅಡುಗೆಯಲ್ಲಿ ಎಣ್ಣೆ ಬಳಕೆ ಶೇಕಡಾ 10 ರಷ್ಟು ಕಡಿಮೆ ಮಾಡಿ ಎಂದು ಕೂಡ ದೇಶದ ಜನರಿಗೆ ಕರೆ ಕೊಟ್ಟಿದ್ದರು. ಈಗ ಇದೇ ವಿಚಾರವಾಗಿ ಪ್ರಧಾನಿ ಮೋದಿ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದಾರೆ.
ಬೊಜ್ಜಿನ ವಿರುದ್ಧ ಸಮರ ಸಾರಲು ಹಾಗೂ ಅದರ ಬಗ್ಗೆ ಜಾಗೃತಿ ಮೂಡಿಸಲು ದೇಶದ 10 ಖ್ಯಾತ ನಾಯಕರಿಗೆ ಕರೆ ಕೊಟ್ಟಿದ್ದಾರೆ. ದೇಶದ ಜನರಿಗೆ ಆಹಾರ ಪದಾರ್ಥದಲ್ಲಿ ಎಣ್ಣೆ ಬಳಕೆ ಕಡಿಮೆ ಮಾಡುವಂತೆ ತಿಳಿಸಿ ಹೇಳಲು ಅವರಲ್ಲಿ ಮನವಿ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2025/02/OBESITY-MODI-TWEET-1.jpg)
ಖ್ಯಾತನಾಮರಾದ ಆನಂದ್​ ಮಹೀಂದ್ರಾ, ನಂದನ್ ನೀಲಕಣಿ, ಮನುಬಾಕರ್, ಮಿರಾಬಾಯಿ ಚಾನು, ಜಮ್ಮು ಕಾಶ್ಮೀರದ ಸಿಎಂ ಓಮರ್ ಅಬ್ದುಲ್ಲಾ, ಸಂಸದ ಮೋಹನಲಾಲ್ ಮತ್ತು ಇನ್ಫೋಸಿಸ್​ನ ಸುಧಾಮೂರ್ತಿ, ಬಿಜೆಪಿ ನಾಯಕ ದಿನೇಶ್ ಲಾಲ್ ಯಾದವ್, ನಟ ಮಾಧವನ್ ಹಾಗೂ ಗಾಯಕಿ ಶ್ರೇಯಾ ಘೋಷಾಲ್ ಅವರ ಹೆಸರನ್ನು ಘೋಷಿಸಿದ್ದಾರೆ.
ಇದನ್ನೂ ಓದಿ: ಭಾರತದ ಈ ಒಂದು ನದಿಯಲ್ಲಿ ಕೇಳಿ ಬರುತ್ತೆ ಗೆಜ್ಜೆನಾದ.. ಅತ್ತ ಕಡೆ ತಲೆ ಹಾಕಿ ನೋಡಲ್ಲ ಜನ! ಇದರ ಹಿಂದಿದೆ ಒಂದು ಪ್ರೇಮ ಕಹಾನಿ
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್​ವೊಂದನ್ನು ಮಾಡಿರುವ ಪ್ರಧಾನಿ ಮೋದಿ, ನಾನು ಮನ್​ ಕಿ ಬಾತ್​ನಲ್ಲಿ ಬೊಜ್ಜಿನ ನಿಯಂತ್ರಣ ಹಾಗೂ ನಿರ್ವಹಣೆಯ ಬಗ್ಗೆ ಹೇಳಿದ್ದೆ. ಈಗ ನಾನು ಈ ಕೆಳಗಿನ ವ್ಯಕ್ತಿಗಳ ಹೆಸರನ್ನು ಬೊಜ್ಜು ಅಥವಾ ಸ್ಥೂಲಕಾಯದ ಬಗ್ಗೆ ಅರಿವು ಮೂಡಿಸುವಂತೆ ಕೇಳಿಕೊಳ್ಳುತ್ತಿದ್ದೇನೆ ಎಂದು ಹತ್ತು ಜನರ ಹೆಸರನ್ನು ತಮ್ಮ ಎಕ್ಸ್ ಖಾತೆಯಲ್ಲಿ ಉಲ್ಲೇಖಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us