newsfirstkannada.com

ಲೋಕಾರ್ಪಣೆ ಬಳಿಕ ರಾಮಮಂದಿರಕ್ಕೆ ಭೇಟಿದ ನೀಡಿದ ಪ್ರಧಾನಿ.. ಶ್ರೀರಾಮನ ಬಳಿ ಮೋದಿ ಕೇಳಿಕೊಂಡಿದ್ದು ಏನು?

Share :

Published May 5, 2024 at 10:07pm

Update May 5, 2024 at 10:15pm

    ಚುನಾವಣಾ ಬ್ಯುಸಿಯಲ್ಲೂ ದೇವರ ದರ್ಶನ ಪಡೆದ ಪ್ರಧಾನಿ

    ರಾಮಲಲ್ಲಾನ ವಿಗ್ರಹದ ಮುಂದೆ PM ಸಾಷ್ಟಾಂಗ ನಮಸ್ಕಾರ

    140 ಕೋಟಿ ಜನರ ಪರವಾಗಿ ಮೋದಿ ಕೇಳಿಕೊಂಡಿದ್ದು ಏನು?

ಜನವರಿ 22ರಂದು ರಾಮ ಮಂದಿರ ಉದ್ಘಾಟನೆಯಾದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿಯವರು ಬಾಲರಾಮನ ಸನ್ನಿಧಿಗೆ ತೆರಳಿ ದರ್ಶನ ಪಡೆದುಕೊಂಡಿದ್ದಾರೆ. ಈ ವೇಳೆ ದೇಶದ ಎಲ್ಲ ಜನರು ಕ್ಷೇಮವಾಗಿರಲಿ ಎಂದು ಮೋದಿ ಪ್ರಾರ್ಥಿಸಿದ್ದಾರೆ ಎಂದು ತಿಳಿದು ಬಂದಿದೆ.

ಲೋಕಸಭೆ ಚುನಾವಣೆಯ 3ನೇ ಹಂತದ ಮತದಾನಕ್ಕೆ 2 ದಿನಗಳ ಮೊದಲು ಪ್ರಧಾನಿ ಮೋದಿ ಅವರು ರಾಮಲಲ್ಲಾನ ವಿಗ್ರಹದ ಮುಂದೆ ಸಾಷ್ಟಾಂಗ ನಮಸ್ಕಾರ ಮಾಡಿದ್ದಾರೆ. ಈ ಸಂಬಂಧ ತಮ್ಮ ಅಧಿಕೃತ ಟ್ವಿಟರ್​ ಅಕೌಂಟ್​ನಲ್ಲಿ ಫೋಟೋ ಶೇರ್ ಮಾಡಿರುವ ಮೋದಿಯವರು, ಅಯೋಧ್ಯೆಯ ಪ್ರಭು ಶ್ರೀರಾಮನ ದರ್ಶನ ಪಡೆದುಕೊಂಡು ದೇಶದ 140 ಕೋಟಿ ಜನರ ಪರವಾಗಿ ಪ್ರಾರ್ಥನೆ ಸಲ್ಲಿಸಿದೆ ಎಂದು ಬರೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.

ಪ್ರಧಾನಿ ಮೋದಿ ಬರುವ ಮುನ್ಸೂಚನೆ ಹಿನ್ನೆಲೆಯಲ್ಲಿ ದೇವಾಲಯ ಆಡಳಿತ ಮಂಡಳಿಯ ಸಿಬ್ಬಂದಿ ಗುಡಿಯನ್ನೆಲ್ಲ ಬಣ್ಣ ಬಣ್ಣದ ಹೂವುಗಳಿಂದ, ಲೈಟಿಂಗ್​ಗಳಿಂದ ಅಲಂಕಾರ ಮಾಡಿದ್ದರು. ಅಲ್ಲದೇ ಭಾನುವಾರ ಆದ್ದರಿಂದ ಶ್ರೀರಾಮನ ದೇವಾಲಯವೆಲ್ಲ ಕೆಂಗುಲಾಭಿ (ಪಿಂಕ್) ಬಣ್ಣದಲ್ಲಿ ಕಂಗೊಳಿಸಿದೆ. ಇನ್ನು ಅಯೋಧ್ಯೆಯ ಶ್ರೀರಾಮನ ದರ್ಶನ ಪಡೆಯುವುದಕ್ಕೂ ಮೊದಲು ಪ್ರಧಾನಿ ಮೋದಿಯವರು ಇಟಾವಾ ಮತ್ತು ಸೀತಾಪುರದ ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸಿದ್ದರು. ಈ ವೇಳೆ ಜನರನ್ನು ಉದ್ದೇಶಿಸಿ ಮಾತನಾಡಿದ್ದರು ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಾರ್ಪಣೆ ಬಳಿಕ ರಾಮಮಂದಿರಕ್ಕೆ ಭೇಟಿದ ನೀಡಿದ ಪ್ರಧಾನಿ.. ಶ್ರೀರಾಮನ ಬಳಿ ಮೋದಿ ಕೇಳಿಕೊಂಡಿದ್ದು ಏನು?

https://newsfirstlive.com/wp-content/uploads/2024/05/MODI-2.jpg

Load More