/newsfirstlive-kannada/media/post_attachments/wp-content/uploads/2025/01/MELODY.jpg)
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಮೆಲೋಡಿ ಮೀಮ್ಸ್​​ಗಳು ಕಳೆದ ಹಲವು ವರ್ಷಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಹಲವು ರೀತಿಯ ಟ್ರೋಲ್​ಗಳು ಕೂಡ ಆಗಿವೆ. ಮೋದಿ ಮತ್ತು ಮೆಲೋನಿ ಅವರ ನಡುವಿನ ದ್ವಿಪಕ್ಷೀಯ ಮಾತುಕತೆಗಳ ವಿಡಿಯೋಗಳು ಬೇರೆಯದ್ದೇ ಅರ್ಥದಲ್ಲಿ ಹಾಸ್ಯಭರಿತವಾಗಿ ವೈರಲ್ ಆಗಿವೆ. ಈ ವಿಚಾರವಾಗಿ ಇಲ್ಲಿಯವರೆಗೂ ಉಭಯ ನಾಯಕರು ಯಾವುದೇ ಹೇಳಿಕೆಯನ್ನು ನೀಡಿರಲಿಲ್ಲ ಈಗ ಮೊದಲ ಬಾರಿ ಪ್ರಧಾನಿ ನರೇಂದ್ರ ಮೋದಿ ಈ ಬಗ್ಗೆ ಮೌನ ಮುರಿದಿದ್ದಾರೆ.
ಇದನ್ನೂ ಓದಿ:ಹಿಂದಿ ರಾಷ್ಟ್ರ ಭಾಷೆಯಲ್ಲ.. ಆರ್ ಅಶ್ವಿನ್ ಪರ ಬ್ಯಾಟಿಂಗ್ ಮಾಡಿದ ಅಣ್ಣಾಮಲೈ
ನಿಖಿಲ್ ಕಾಮತ್ ಅವರ ಜೊತೆ ನಡೆಸಿರುವ ಮಾತುಕತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇಟಲಿಯಲ್ಲಿ ಅವರಿಗೆ ಇಷ್ಟವಾದ ಖಾದ್ಯ ಯಾವುದು ಎಂಬುದರಿಂದ ಹಿಡಿದು ಹಲವು ವಿಷಯಗಳ ಬಗ್ಗೆ ಮಾತನಾಡಿದರು. ಇಟಲಿಯಲ್ಲಿ ನಾನು ಹೆಚ್ಚು ಪಿಜ್ಜಾವನ್ನು ಇಷ್ಟಪಟ್ಟು ತಿನ್ನುತ್ತೇನೆ ಎಂದು ಮೋದಿ ಹೇಳಿದರು. ಇನ್ನು ಮೆಲೋನಿ ಹಾಗೂ ಮೋದಿ ಮೀಮ್ಸ್​ಗಳ ವಿಚಾರವಾಗಿ ಕಾಮತ್ ಪ್ರಶ್ನಿಸಿದಾಗ ಮೋದಿ ನಸುನಕ್ಕು. ವೋ ತೋ ಚಲ್ತಾ ರೆಹ್ತಾ ಹೈ( ಅವೆಲ್ಲಾ ನಡೆಯುತ್ತಲೇ ಇರುತ್ತವೆ), ನಾನು ಇಂತಹ ವಿಚಾರಗಳ ಬಗ್ಗೆ ಗಮನಕೊಟ್ಟು ಹೆಚ್ಚು ಸಮಯ ವ್ಯರ್ಥ ಮಾಡಲು ಹೋಗುವುದಿಲ್ಲ ಎಂದು ಹೇಳಿದ್ದಾರೆ.
/newsfirstlive-kannada/media/post_attachments/wp-content/uploads/2025/01/MELODY-1.jpg)
ಇದನ್ನೂ ಓದಿ:ಲೀವ್ ಇನ್ ಪಾರ್ಟನರ್​ ಜೀವ ತೆಗೆದ ಕಿರಾತಕ; ದೇಹ ಎಷ್ಟು ತುಂಡಾಗಿತ್ತು ಗೊತ್ತಾ?
ಇತ್ತೀಚೆಗೆ ಭಾರತೀಯ ಸೋಷಿಯಲ್ ಮೀಡಿಯಾಗಳು ಮೆಲೋಡಿ ಮೀಮ್ಸ್​ನಿಂದ ತುಂಬಿ ಹೋಗಿದ್ದವು. ಸ್ಪೇನ್​ನಲ್ಲಿ ನಡೆದ ಜಿ7 ಸಮಿತಿಯಲ್ಲಿ ಉಭಯ ನಾಯಕರು ತುಂಬಾ ಆಪ್ತವಾಗಿ ಇದ್ದರು. ಜಾರ್ಜಿಯಾ ಮೆಲೋನಿ ಪ್ರಧಾನಿ ಮೋದಿಯವರೊಂದಿಗೆ ಸೆಲ್ಫಿ ವಿಡಿಯೋ ತೆಗೆದುಕೊಳ್ಳುವ ಮೂಲಕ ಹೆಲೋ ಫ್ರಾಮ್ ಮೆಲೋಡಿ ಟೀಮ್ ಎಂದು ಕೂಡ ಹೇಳಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಆ ವಿಡಿಯೋ ಪೋಸ್ಟ್ ಮಾಡಿದಾಗಲೂ ಮೆಲೋಡಿ ಟೀಮ್ ಎಂದು ಕ್ಯಾಪ್ಷನ್ ಕೊಟ್ಟಿದ್ದರು. ಇದಕ್ಕೆ ಪ್ರಧಾನಿ ಮೋದಿ ಕೂಡ ಲಾಂಗ್ ಲೀವ್ ಇಂಡಿಯಾ ಇಟಲಿ ಫ್ರೆಂಡ್​ಶಿಪ್ ಎಂದು ಪ್ರತಿಕ್ರಿಯೆಯನ್ನು ನೀಡಿದ್ದರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us