newsfirstkannada.com

ಅಯೋಧ್ಯೆಯಲ್ಲಿ ಹೆಚ್‌.ಡಿ ದೇವೇಗೌಡರಿಗೆ ಪ್ರಧಾನಿ ಮೋದಿ ವಿಶೇಷ ಗೌರವ; ಗಣ್ಯರಿಗೆ ‘ನಮೋ’ ನಮನ

Share :

Published January 22, 2024 at 4:05pm

    ಹೆಚ್‌ಡಿಡಿ ಅವರ ಬಳಿ ನಿಂತು ನಮಸ್ಕರಿಸಿದ ನರೇಂದ್ರ ಮೋದಿ

    ಮುಕೇಶ್ ಅಂಬಾನಿ, ಅಮಿತಾಬ್ ಬಚ್ಚನ್, ರಜನಿಕಾಂತ್‌

    ಪ್ರತಿಯೊಬ್ಬರಿಗೂ ನಮಸ್ಕರಿಸಿ ತುಂಬು ಹೃದಯದ ಧನ್ಯವಾದ

ಅಯೋಧ್ಯೆ: ರಾಮಜನ್ಮಭೂಮಿಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯ ಬಳಿಕ ಪ್ರಧಾನಿ ನರೇಂದ್ರ ಮೋದಿ ವಿಶೇಷ ಧನ್ಯವಾದ ತಿಳಿಸಿದ್ದಾರೆ. ಪ್ರಾಣ ಪ್ರತಿಷ್ಠಾಪನೆಯ ಪ್ರಕ್ರಿಯೆ ಮುಗಿದ ಬಳಿಕ ನರೇಂದ್ರ ಮೋದಿ ಭಾಷಣ ಮಾಡಿದರು. ರಾಮ ಬೆಂಕಿಯಲ್ಲ ಶಕ್ತಿ ಎಂದು ಹೆಮ್ಮೆಯಿಂದ ಮಾತನಾಡಿದ ನರೇಂದ್ರ ಮೋದಿ ಬಳಿಕ ರಾಮಮಂದಿರ ಉದ್ಘಾಟನೆಯ ಸಮಾರಂಭಕ್ಕೆ ಆಗಮಿಸಿದವರಿಗೆ ಧನ್ಯವಾದ ತಿಳಿಸಿದ್ದಾರೆ.

ರಾಮಮಂದಿರ ಉದ್ಘಾಟನೆಯ ವೇದಿಕೆಯಿಂದ ಬಂದ ಪ್ರಧಾನಿ ನರೇಂದ್ರ ಮೋದಿ ಅವರು ವಿಶೇಷ ಆಹ್ವಾನಿತರಾಗಿ ಆಗಮಿಸಿದ ಗಣ್ಯರ ಬಳಿಗೆ ಆಗಮಿಸಿದರು. ಸಾಲಾಗಿ ಪ್ರತಿಯೊಬ್ಬರಿಗೂ ನಮಸ್ಕಾರ ಮಾಡಿದ ಪ್ರಧಾನಿ ತುಂಬು ಹೃದಯದ ಧನ್ಯವಾದ ಅರ್ಪಿಸಿದರು.

ಅಯೋಧ್ಯೆಗೆ ಆಹ್ವಾನಿಸಿದ್ದ ವಿಶೇಷ ಗಣ್ಯರ ಸಾಲಿನಲ್ಲಿ ಮುಕೇಶ್ ಅಂಬಾನಿ, ನೀತು ಅಂಬಾನಿ, ಬಿಗ್‌ಬಿ ಅಮಿತಾಬ್ ಬಚ್ಚನ್, ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ನರೇಂದ್ರ ಮೋದಿ ನಮನ ಸಲ್ಲಿಸಿದರು.

ಇದನ್ನೂ ಓದಿ: ‘ರಾಮ ಬೆಂಕಿಯಲ್ಲ, ಶಕ್ತಿ.. ರಾಮಮಂದಿರ ರಾಷ್ಟ್ರ ನಿರ್ಮಾಣಕ್ಕೆ ಮೆಟ್ಟಿಲು’- ಅಯೋಧ್ಯೆಯಲ್ಲಿ ನರೇಂದ್ರ ಮೋದಿ

ಇದೇ ವೇಳೆ ಮಾಜಿ ಪ್ರಧಾನಿ ಹೆಚ್‌.ಡಿ. ದೇವೇಗೌಡ ಅವರತ್ತ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ವಿಶೇಷ ಗೌರವ ಸಲ್ಲಿಸಿದರು. ಹೆಚ್‌ಡಿಡಿ ಅವರ ಬಳಿ ನಿಂತ ನರೇಂದ್ರ ಮೋದಿ ವಿಶೇಷ ಧನ್ಯವಾದವನ್ನು ತಿಳಿಸಿದರು.

ಹೀಗೆ ಸಾಲಿನುದ್ದಕ್ಕೂ ನಿಂತಿದ್ದ ಗಣ್ಯರಿಗೆ ಪ್ರಧಾನಿ ನರೇಂದ್ರ ಮೋದಿ ಹೃದಯಪೂರ್ವಕವಾಗಿ ನಮಿಸಿದರು. ಇದಾದ ಮೇಲೆ ರಾಮಮಂದಿರ ಕಟ್ಟಲು ನೆರವಾದ ಕಾರ್ಮಿಕರಿಗೆ ಪುಷ್ಪವೃಷ್ಟಿ ಸುರಿಸುವ ಮೂಲಕ ಕೃತಜ್ಞತೆ ಸಮರ್ಪಿಸಿದ್ದು ವಿಶೇಷವಾಗಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯೋಧ್ಯೆಯಲ್ಲಿ ಹೆಚ್‌.ಡಿ ದೇವೇಗೌಡರಿಗೆ ಪ್ರಧಾನಿ ಮೋದಿ ವಿಶೇಷ ಗೌರವ; ಗಣ್ಯರಿಗೆ ‘ನಮೋ’ ನಮನ

https://newsfirstlive.com/wp-content/uploads/2024/01/PM-MOdi-Ayodhya-5.jpg

Load More