/newsfirstlive-kannada/media/post_attachments/wp-content/uploads/2024/07/KARGIL_WAR_MODI.jpg)
ಕಾರ್ಗಿಲ್ ಯುದ್ಧ ನಡೆದು 25 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಇಂದು ದೇಶದೆಲ್ಲೆಡೆ ಕಾರ್ಗಿಲ್ ವಿಜಯ್ ದಿವಸ ಆಚರಿಸಲಾಗುತ್ತಿದೆ. ಯುದ್ಧದಲ್ಲಿ ಕೆಚ್ಚೆದೆಯಿಂದ ಹೋರಾಡಿ ಹುತಾತ್ಮರಾದ ಯೋಧರಿಗೆ ಗೌರವ ಸಲ್ಲಿಸುವ ಸಲುವಾಗಿ ಕಾರ್ಗಿಲ್ ವಿಜಯ ದಿನ ಆಚರಿಸುತ್ತಾರೆ. ಭಾರತದ ಗಡಿ ಮೀರಿ ಒಳಕ್ಕೆ ನುಗ್ಗಿದ್ದ ಪಾಕಿಸ್ತಾನದ ಸೇನೆ ಹಾಗೂ ಉಗ್ರಗಾಮಿಗಳಿಗೆ ಭಾರತೀಯ ಯೋಧರು ಹೊಡೆದೊಡಿಸಿದ ದಿನಕ್ಕೆ ಇಂದು ರಜತ ಮಹೋತ್ಸವ.
ಇದನ್ನೂ ಓದಿ: KRS ಡ್ಯಾಂನಿಂದ ಭಾರೀ ಪ್ರಮಾಣದಲ್ಲಿ ನೀರು ರಿಲೀಸ್.. ಅಪಾಯ ಮಟ್ಟ ಮೀರಿ ಹರಿಯುತ್ತಿರೋ ಕಾವೇರಿ ನದಿ​
/newsfirstlive-kannada/media/post_attachments/wp-content/uploads/2024/07/KARGIL_WAR.jpg)
ಭಾರತದಿಂದ ಪಾಕಿಸ್ತಾನ ಯಾವಾಗ ಬೇರ್ಪಟ್ಟಿತೋ ಅಂದಿನಿಂದ ಶತ್ರು ರಾಷ್ಟ್ರವಾಗಿಯೇ ಬೆಳೆಯುತ್ತ, ಕುತಂತ್ರ ಬುದ್ಧಿ ತೋರಿಸುತ್ತ ಬರುತ್ತಿತ್ತು. ಭಾರತದ ಅಭಿವೃದ್ಧಿ, ಪಾಕಿಸ್ತಾನ ಎಂದಿಗೂ ಸಹಿಸಿಕೊಳ್ಳುತ್ತಿರಲಿಲ್ಲ. ಈಗಲೂ ಇದನ್ನೇ ಮುಂದುವರೆಸುತ್ತಿದೆ. ಅದರಂತೆ 1999ರಲ್ಲಿ ಭಾರತದ ಕಾಶ್ಮೀರದ ಕಾರ್ಗಿಲ್ ಪ್ರದೇಶಕ್ಕೆ ಪಾಕಿಸ್ತಾನದ ಸೇನೆ ಹಾಗೂ ಭಯೋತ್ಪಾದಕರು ಒಳ ನುಸುಳಿದರು. ಹೀಗೆ ಭಾರತದ ಗಡಿಯೊಳಗೆ ಬಂದವರನ್ನು ಹೊಡೆದೊಡಿಸಲು ಸಲುವಾಗಿ ಭಾರತೀಯ ಸೇನೆ ಆಪರೇಷನ್ ವಿಜಯ್ ಎನ್ನುವ ಮಿಲಿಟರಿ ಕಾರ್ಯಾಚರಣೆ ಕೈಗೊಂಡಿತು. ಅದರಂತೆ ಸತತವಾಗಿ ತಿಂಗಳುಗಟ್ಟಲೇ ಹೋರಾಡಿದ ಬಳಿಕ ಭಾರತೀಯ ವೀರ ಯೋಧರು ಪಾಕಿಸ್ತಾನದ ಸೇನೆ ಹಾಗೂ ಉಗ್ರಗಾಮಿಗಳನ್ನು ಹೊಡೆದೊಡಿಸಿದರು.
ಯುದ್ಧ ಕೊನೆಯಾಗಿದ್ದು ಯಾವಾಗ..?
ಈ ಮೂಲಕ ಭಾರತ ತನ್ನೆಲ್ಲ ಪ್ರದೇಶಗಳನ್ನು ಮರಳಿ ಪಡೆದುಕೊಂಡಿತು. 1999ರ ಜುಲೈನಲ್ಲಿ ಟೈಗರ್ ಹಿಲ್ ಎನ್ನುವ ಪ್ರದೇಶವನ್ನು ವಶಕ್ಕೆ ಪಡೆಯುವ ಮೂಲಕ ಯುದ್ಧ ಕೊನೆಯಾಯಿತು. ಭಾರತ ವಿಜಯ ಪತಾಕೆ ಹಾರಿಸಿತು. ಭಾರತದ ಸಾರ್ವಭೌಮತೆ, ಸಮಗ್ರತೆ ರಕ್ಷಿಸಲು ಲೆಕ್ಕವಿಲ್ಲದಷ್ಟು ಯೋಧರು ಯುದ್ಧಭೂಮಿಯಲ್ಲಿ ಪ್ರಾಣತ್ಯಾಗ ಮಾಡಿದರು. ಅವರ ಅಮೂಲ್ಯ ಜೀವನ ಮುಡಿಪಾಗಿ ಇಟ್ಟಿದ್ದರಿಂದ ಇಂದು ನಾವು ದೇಶದೊಳಗೆ ಆರೋಗ್ಯಕರವಾಗಿ, ಸಾಮಾಜಿಕವಾಗಿ ಬದುಕಲು ಸಾಧ್ಯವಾಗಿದೆ.
ಇದನ್ನೂ ಓದಿ: ದರ್ಶನ್​ ಪತ್ನಿ ವಿಜಯಲಕ್ಷ್ಮಿ ‘ನವಚಂಡಿಕಾ ಯಾಗ’ ಹೇಗೆ ನಡೆಸ್ತಾರೆ.. ಇದರ ಮಹತ್ವದ ಬಗ್ಗೆ ಗೂರೂಜಿ ಹೇಳುವುದೇನು?
1999 ಜುಲೈ 14 ರಂದು ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆಪರೇಷನ್ ವಿಜಯ್ ಯಶಸ್ವಿಯಾಗಿದೆ ಎಂದು ಘೋಷಿಸಿದರು. ಇಂದು ಕಾರ್ಗಿಲ್ ವಿಜಯದ 25 ನೇ ವಾರ್ಷಿಕೋತ್ಸವದ ಗೌರವಾರ್ಥವಾಗಿ, ಇಂಡಿಯನ್ ಏರ್​ಪೋರ್ಸ್​ ಜು.12 ರಿಂದ ಜಲೈ25ರವರೆಗೆ ಏರ್ ಫೋರ್ಸ್ ಸ್ಟೇಷನ್ ಸರ್ಸಾವಾದಲ್ಲಿ ಕಾರ್ಗಿಲ್​ನ ರಜತ ಮಹೋತ್ವದ ಜಯಂತಿ ಆಚರಿಸುತ್ತಿದೆ. ಇದಕ್ಕೆ ಇಂದು ಕೊನೆ ದಿನವಾಗಿದೆ. ಯುದ್ಧದಲ್ಲಿ ಮಡಿದ ಭಾರತದ ವೀರಯೋಧರನ್ನು ನೆನಪು ಮಾಡಿಕೊಳ್ಳುವ ಸಲುವಾಗಿಯೇ ಈ ದಿನವನ್ನು ಕಾರ್ಗಿಲ್ ವಿಜಯ್ ದಿವಸ ಎಂದು ಆಚರಣೆ ಮಾಡಿಕೊಂಡು ಬರಲಾಗುತ್ತಿದೆ.
ಇದನ್ನೂ ಓದಿ:ವೈದ್ಯರ ನಿರ್ಲಕ್ಷ್ಯಕ್ಕೆ ಯುವಕ ಸಾವು.. ಆಸ್ಪತ್ರೆ ವಿರುದ್ಧ ಗಂಭೀರ ಆರೋಪ ಮಾಡಿದ ಪೋಷಕರು
/newsfirstlive-kannada/media/post_attachments/wp-content/uploads/2024/07/KARGIL_WAR_MODI_1.jpg)
ಪ್ರಧಾನಿ ಮೋದಿಯವರು ಲಡಾಖ್​​​​ನಲ್ಲಿನ ಡ್ರಾಸ್ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ್ದಾರೆ. 1999ರ ಕಾರ್ಗಿಲ್ ಯುದ್ಧದಲ್ಲಿ ಮಡಿದಂತಹ ವೀರ ಯೋಧರಿಗೆ ಗೌರವ ನಮನ ಸಲ್ಲಿಸಿದ್ದಾರೆ. ಇದೇ ವೇಳೆ ಮಾತನಾಡಿದ ಪ್ರಧಾನಿ ಮೋದಿಯವರು, ತನ್ನೆಲ್ಲ ಕೆಟ್ಟ ಪ್ರಯತ್ನಗಳಿಂದ ಪಾಕಿಸ್ತಾನ ಈ ಹಿಂದೆ ವಿಫಲವಾಗಿದೆ. ಆದರೂ ಇತಿಹಾಸದಿಂದ ಪಾಕಿಸ್ತಾನ ಏನನ್ನೂ ಕಲಿತಿಲ್ಲ. ತನ್ನ ಹಳೆ ಚಾಳಿಯನ್ನೇ ಮುಂದುವರೆಸಿದೆ. ಭಯೋತ್ಪಾದನೆ ಮತ್ತು ಇತರೆ ಕುತಂತ್ರ ಯುದ್ಧದ (ಪ್ರಾಕ್ಸಿ ವಾರ್) ಸಹಾಯದಿಂದ ತನ್ನನ್ನು ಪ್ರಸ್ತುತವಾಗಿರಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us