newsfirstkannada.com

ಬಾಲರಾಮನ ಪ್ರಾಣ ಪ್ರತಿಷ್ಠಾಪನೆ; ರಾಮಸೇತು ನಿರ್ಮಿಸಿದ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ

Share :

Published January 21, 2024 at 12:43pm

    ಶ್ರೀಕೋದಂಡರಾಮ ಸ್ವಾಮಿ ದೇವಸ್ಥಾನದಲ್ಲಿ ಮೋದಿಯಿಂದ ಪೂಜೆ

    ದೇವಾಲಯದ ಸಂಕೀರ್ಣದ 22 ಪುಣ್ಯ ಬಾವಿಗಳಲ್ಲಿ ಪ್ರಧಾನಿ ಸ್ನಾನ

    ವಾನರ ಸೈನ್ಯದೊಂದಿಗೆ ರಾಮನು ಸೇತುವೆ ಕಟ್ಟಿದ ಜಾಗ ರಾಮಸೇತು

ಕನ್ಯಾಕುಮಾರಿ: ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯವರು ನಿರಂತರವಾಗಿ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಇನ್ನು ನಾಳೆ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಇರುವುದರಿಂದ ಪ್ರಧಾನಿ ಮೋದಿ ಅವರು ರಾಮಸೇತು ಇರುವ ಧನುಷ್ಕೋಡಿಯ ಅರಿಚಲ್ ಮುನೈ ಪಾಯಿಂಟ್‌ಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

ಪ್ರಧಾನಿ ಮೋದಿಯವರು ನಾಳೆ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಮುಖ್ಯ ಯಜಮಾನರಾಗಿ ಪಾಲ್ಗೊಳ್ಳಲಿದ್ದಾರೆ. ಅರಿಚಲ್ ಮುನೈ ಪಾಯಿಂಟ್‌ಗೆ ಭೇಟಿ ನೀಡಿದ ಮೋದಿ ಅಲ್ಲಿನ ಶ್ರೀ ಕೋದಂಡರಾಮ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಮಾಡಿದರು. ಇದಕ್ಕೂ ಮುನ್ನ ಅಗ್ನಿತೀರ್ಥ ಕಡಲ ತೀರದಲ್ಲಿ ಸ್ನಾನ ಮಾಡಿ, ರಾಮೇಶ್ವರಂನ ರಾಮನಾಥ ಸ್ವಾಮಿ ದೇಗುಲದಲ್ಲಿ ಪೂಜೆ ಸಲ್ಲಿಸಿದರು.

ದೇವಾಲಯದ ಸಂಕೀರ್ಣದಲ್ಲಿರುವ 22 ಪುಣ್ಯ ಬಾವಿಗಳಲ್ಲಿ ಪ್ರಧಾನಿ ಮೋದಿ ತೀರ್ಥಸ್ನಾನ ಮಾಡಿದರು. ಭಕ್ತರು ಈ ತೀರ್ಥಕ್ಷೇತ್ರಗಳಲ್ಲಿ ಸ್ನಾನ ಮಾಡುವುದು ಮಂಗಳಕರ ಮತ್ತು ಪುಣ್ಯವೆಂದು ನಂಬುತ್ತಾರೆ. ಅದರಂತೆ ಪ್ರಧಾನಿ ಕೂಡ ಮಾಡಿರುವುದು ವಿಶೇಷವಾಗಿ ಕಾಣಿಸಿಕೊಂಡಿತು. ರಾವಣನಿಂದ ಸೀತೆಯನ್ನು ರಕ್ಷಣೆ ಮಾಡಲು ವಾನರ ಸೈನ್ಯದೊಂದಿಗೆ ರಾಮನು ಸೇತುವೆ ಕಟ್ಟಿದನು ಎನ್ನಲಾಗುತ್ತದೆ. ಹೀಗಾಗಿ ಅಯೋಧ್ಯೆಯ ರಾಮಮಂದಿರದಲ್ಲಿ ರಾಮನ ವಿಗ್ರಹ ಪ್ರತಿಷ್ಠಾಪನೆಗೂ ಒಂದು ದಿನ ಮೊದಲು ರಾಮಸೇತುಗೆ ಪ್ರಧಾನಿ ಮೋದಿ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಲರಾಮನ ಪ್ರಾಣ ಪ್ರತಿಷ್ಠಾಪನೆ; ರಾಮಸೇತು ನಿರ್ಮಿಸಿದ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ

https://newsfirstlive.com/wp-content/uploads/2024/01/MODI_DHANUSHKODI_1.jpg

Load More