newsfirstkannada.com

ಲೋಕಸಭೆ ಚುನಾವಣೆ ಮುಗಿದ ಮೇಲೆ ನಮ್ಮ ದೇಶಕ್ಕೆ ಬನ್ನಿ; ರಷ್ಯಾ, ಉಕ್ರೇನ್​ನಿಂದ ಮೋದಿಗೆ ಪ್ರತ್ಯೇಕ ಆಹ್ವಾನ

Share :

Published March 21, 2024 at 8:58am

Update March 21, 2024 at 9:16am

    ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿಗೆ ದೂರವಾಣಿ ಕರೆ ಮಾಡಿದ ಮೋದಿ

    ರಷ್ಯಾ-ಉಕ್ರೇನ್ ಸಂಘರ್ಷದ ಕುರಿತು ಝೆಲೆನ್ಸ್ಕಿ ಜೊತೆ ಮೋದಿ ಚರ್ಚೆ

    ಯುದ್ಧವನ್ನು ಕೊನೆಗೊಳಿಸಲು ಸಲಹೆ ನೀಡಿದ ಪ್ರಧಾನಿ ನರೇಂದ್ರ ಮೋದಿ

ಭಾರತ-ಉಕ್ರೇನ್ ಬಾಂಧವ್ಯವನ್ನು ಬಲಪಡಿಸುವ ಕ್ರಮಗಳ ಕುರಿತು ಪ್ರಧಾನಿ ಮೋದಿ ಮತ್ತು ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಮಾತನಾಡಿದರು. ಝೆಲೆನ್ಸ್ಕಿ ಮತ್ತು ಮೋದಿ ವಿವಿಧ ಕ್ಷೇತ್ರಗಳಲ್ಲಿ ಭಾರತ-ಉಕ್ರೇನ್ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಕುರಿತು ಮೊಬೈಲ್​ನಲ್ಲಿ ಚರ್ಚಿಸಿದರು.

ನಡೆಯುತ್ತಿರುವ ರಷ್ಯಾ-ಉಕ್ರೇನ್ ಸಂಘರ್ಷದ ಕುರಿತು ಚರ್ಚಿಸುತ್ತಿರುವಾಗ, ಪ್ರಧಾನಮಂತ್ರಿಯವರು ಭಾರತದ ಜನಕೇಂದ್ರಿತ ವಿಧಾನವನ್ನು ಪುನರುಚ್ಚರಿಸಿದ್ದು, ಉಕ್ರೇನ್ ಜನರಿಗೆ ಭಾರತದ ನಿರಂತರ ಮಾನವೀಯ ಸಹಾಯವನ್ನು ಶ್ಲಾಘಿಸಿದ್ದು, ಉಭಯ ನಾಯಕರು ಸಂಪರ್ಕದಲ್ಲಿರಲು ಒಪ್ಪಿಕೊಂಡರು. ಝೆಲೆನ್ಸ್ಕಿ ಅವರೊಂದಿಗಿನ ಮಾತುಕತೆ ವೇಳೆ ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ‘ಸಂವಾದ ಮತ್ತು ರಾಜತಾಂತ್ರಿಕತೆ’ಗೆ ಪ್ರಧಾನಿ ಮೋದಿ ಕರೆ ನೀಡಿದರು.

ಅತ್ತ ರಷ್ಯಾ ಅಧ್ಯಕ್ಷರಿಗೂ ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿದ್ದು, ಚುನಾವಣೆಯಲ್ಲಿ ಜಯ ಸಾಧಿಸಿ ಅಧ್ಯಕ್ಷ ಸ್ಥಾನಕ್ಕೇರಿದ ಪುಟಿನ್​ ಅವರನ್ನು ಅಭಿನಂದಿಸಿದ್ದಾರೆ. ಬಳಿಕ ಉಕ್ರೇನ್​ -ರಷ್ಯಾ ಯುದ್ಧವನ್ನು ಕೊನೆಗೊಳಿಸುವಂತೆ ಸಲಹೆ ನೀಡಿದ್ದಾರೆ. ಲೋಕ ಸಭಾ ಚುನಾವಣೆ ಮುಗಿದ ಬಳಿ ಎರಡು ದೇಶಗಳ ಅಧ್ಯಕ್ಷರನ್ನು ಭಾರತಕ್ಕೆ ಮೋದಿ ಆಹ್ವಾನಿಸಿದ್ದಾರೆ.

ಲೋಕಸಭೆ ಚುನಾವಣೆ ಮುಗಿದ ಬಳಿಕ ನಮ್ಮ ದೇಶಕ್ಕೆ ಬನ್ನಿ ಎಂದು ಪ್ರಧಾನಿ ಮೋದಿಗೆ ಝೆಲೆನ್ಸ್ಕಿ ಮತ್ತು ಪುಟಿನ್ ಇಬ್ಬರು ಆಹ್ವಾನ ನೀಡಿದ್ದಾರೆ ಎಂದು ವರದಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಲೋಕಸಭೆ ಚುನಾವಣೆ ಮುಗಿದ ಮೇಲೆ ನಮ್ಮ ದೇಶಕ್ಕೆ ಬನ್ನಿ; ರಷ್ಯಾ, ಉಕ್ರೇನ್​ನಿಂದ ಮೋದಿಗೆ ಪ್ರತ್ಯೇಕ ಆಹ್ವಾನ

https://newsfirstlive.com/wp-content/uploads/2024/03/Modi-5.jpg

Load More