/newsfirstlive-kannada/media/post_attachments/wp-content/uploads/2024/10/MODI_RAHUL.jpg)
ನವದೆಹಲಿ: ಸಂಭ್ರಮದ ದಸರಾ, ವಿಜಯದಶಮಿ ಆಚರಣೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ಮೋದಿ ಭಾಗವಹಿಸಿದ್ದರು. ಈ ವೇಳೆ ಪ್ರಧಾನಿ ಮೋದಿಯವರು ಶ್ರೀರಾಮ, ಲಕ್ಷ್ಮಣ ಹಾಗೂ ಹನುಮಾನ್ ವೇಶ ಧರಿಸಿದವರ ಹಣೆಗೆ ತಿಲಕ ಇಟ್ಟಿರುವುದು ವಿಶೇಷ ಎನಿಸಿದೆ.
/newsfirstlive-kannada/media/post_attachments/wp-content/uploads/2024/10/PM_MODI-2.jpg)
ದೆಹಲಿಯ ಕೆಂಪು ಕೋಟೆಯ ಮಾಧವ್ ದಾಸ್ ಪಾರ್ಕ್‌ನಲ್ಲಿ ಶ್ರೀಧಾರ್ಮಿಕ ಲೀಲಾ ಸಮಿತಿ ಆಯೋಜಿಸಿದ್ದ ದಸರಾ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ಭಾಗವಹಿಸಿದ್ದರು.
/newsfirstlive-kannada/media/post_attachments/wp-content/uploads/2024/10/PM_MODI_1.jpg)
ಆಚರಣೆ ವೇಳೆ ಮೋದಿ, ಮುರ್ಮು ಬಿಲ್ಲು, ಬಾಣ ಹಿಡಿದು ರಾವಣನಿಗೆ ಗುರಿಯಿಟ್ಟರು. ದಸರಾ ಆಚರಣೆಯ ಅಂಗವಾಗಿ ಗಣ್ಯರ ಸಮ್ಮುಖದಲ್ಲಿ ರಾವಣ, ಮೇಘನಾದ ಮತ್ತು ಕುಂಭಕರ್ಣನ ಪ್ರತಿಕೃತಿಗಳನ್ನು ಸುಡಲಾಯಿತು. ಇದೇ ವೇಳೆ ದೇಶದ ಸಮಸ್ತ ಜನರಿಗೆ ಪ್ರಧಾನಿ ಮೋದಿ ಅವರು ವಿಜಯದಶಮಿ ಶುಭಾಶಯಗಳನ್ನ ತಿಳಿಸಿದರು.
ಇದನ್ನೂ ಓದಿ: ಪಟಾಕಿ ಸೌಂಡಿನಲ್ಲೇ ಗುಂಡಿನ ದಾಳಿ.. ಆಸ್ಪತ್ರೆಗೆ ದಾಖಲಿಸಿದ್ರು ಉಳಿಯಲಿಲ್ಲ NCP ನಾಯಕ; ಯಾರು ಈ ಬಾಬಾ ಸಿದ್ದಿಕಿ?
/newsfirstlive-kannada/media/post_attachments/wp-content/uploads/2024/10/SONIA_GANDHI.jpg)
ಇನ್ನು ಶ್ರೀಧಾರ್ಮಿಕ ಲೀಲಾ ಸಮಿತಿ ದೆಹಲಿ ಕೆಂಪು ಕೋಟೆಯ ಪಾರ್ಕ್​​ನಲ್ಲಿ ಆಯೋಜಿಸಿದ್ದ ದಸರಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಭಾಗವಹಿಸಿದ್ದರು. ಈ ವೇಳೆ ಸೋನಿಯಾ ಗಾಂಧಿ ಅವರು ಸೀತಾದೇವಿಗೆ ಕುಂಕುಮವಿಟ್ಟರು. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಬಿಲ್ಲು ಬಾಣ ಹಿಡಿದರು. ಇವರ ಸಮ್ಮುಖದಲ್ಲೇ ರಾವಣನ ದಹನ ಮಾಡಲಾಯಿತು.
/newsfirstlive-kannada/media/post_attachments/wp-content/uploads/2024/10/AJAY_DEVAGAN.jpg)
ದೆಹಲಿಯಲ್ಲಿ ನಡೆದ ಅದ್ಧೂರಿ ದಸರಾ ಕಾರ್ಯಕ್ರಮದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳಾದ ಅಜಯ್ ದೇವಗಾನ್ ಹಾಗೂ ಕರೀನಾ ಕಪೂರ್ ಭಾಗವಹಿಸಿದ್ದರು. ಇಬ್ಬರು ಸೆಲೆಬ್ರಿಟಿಗಳು ಬಿಲ್ಲು ಬಾಣ ಹಿಡಿದು ರಾವಣ ದಹನ ಮಾಡಲು ಗುರಿ ಇಟ್ಟರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us