/newsfirstlive-kannada/media/post_attachments/wp-content/uploads/2025/04/SANJAY-RAVATH.jpg)
ಮುಂದಿನ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ಮೋದಿ ಅವರು ನಿವೃತ್ತಿ ಆಗಲಿದ್ದಾರೆ ಎಂದು ಶಿವಸೇನೆಯ ಸಂಸದ ಸಂಜಯ್ ರಾವತ್ ಭವಿಷ್ಯ ನುಡಿದಿದ್ದಾರೆ.
ಆರ್ಎಸ್ಎಸ್ ಕಚೇರಿಗೆ ಮೋದಿ ಭೇಟಿ ನೀಡಿದ್ದನ್ನು ಲೇವಡಿ ಮಾಡಿರುವ ಅವರು, ತಮ್ಮ ನಿವೃತ್ತಿ ಅರ್ಜಿ ಬರೆಯಲು ಮೋದಿ ಆರ್‌ಎಸ್‌ಎಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದಾರೆ. ಸಂಘವು ನಾಯಕನನ್ನು ಬದಲಿಸಲು ಹೊರಟಿದೆ. ದೇಶದ ರಾಜಕೀಯ ನಾಯಕತ್ವ ಬದಲಿಸಲು ಆರ್‌ಎಸ್‌ಎಸ್ ನಿರ್ಧರಿಸಿದೆ. ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ತಮ್ಮ ನಿವೃತ್ತಿಯ ಅರ್ಜಿ ಬರೆಯಲೆಂದೇ ಮೋದಿ ಆರ್‌ಎಸ್‌ಎಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದರು ಎಂದಿದ್ದಾರೆ.
ಇದನ್ನೂ ಓದಿ: ನಟಿ ರನ್ಯಾ ರಾವ್ ಗೋಲ್ಡ್ ಕೇಸ್‌ಗೆ ಹೊಸ ಟ್ವಿಸ್ಟ್.. ಸರ್ಕಾರಕ್ಕೆ 230 ಪುಟಗಳ ತನಿಖಾ ವರದಿ ಸಲ್ಲಿಕೆ
ನಿಮಗೀಗ 75 ವರ್ಷ ಎಂದು ನೆನಪಿಸಲು ಮೋದಿಯನ್ನು ಆರ್‌ಎಸ್‌ಎಸ್ ಕರೆಸಿಕೊಂಡಿತ್ತು. ಮೋದಿಯವರ ಉತ್ತರಾಧಿಕಾರಿ ಯಾರು ಅಂತಾ ಆರ್‌ಎಸ್ಎಸ್ ನಿರ್ಧರಿಸುತ್ತದೆ. ಅದಕ್ಕಾಗಿಯೇ ಮೋದಿಯನ್ನು ಆರ್‌ಎಸ್‌ಎಸ್ ಕೇಂದ್ರ ಕಚೇರಿಗೆ ಕರೆಸಿ ಚರ್ಚೆ ನಡೆಸಲಾಗಿದೆ ಎಂದಿದ್ದಾರೆ.
ರಾವತ್ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಸಿಎಂ ದೇವೇಂದ್ರ ಫಡ್ನವೀಸ್, 2029ಕ್ಕೂ ಮೋದಿಯೇ ಪ್ರಧಾನಿಯಾಗುತ್ತಾರೆ ಎಂದಿದ್ದಾರೆ. ಮಾರ್ಚ್ 30 ರಂದು ಪ್ರಧಾನಿ ಮೋದಿ ನಾಗ್ಪುರ ಆರ್ಎಸ್ಎಸ್ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದರು.
ಇದನ್ನೂ ಓದಿ: ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ, ಡಿಕೆಶಿ ದಿಢೀರ್ ಮೀಟಿಂಗ್; ಏನಾಯ್ತು..?
Dear Devendraji,
Lord Ram and Lord Krishna
Two significant figures in Hindu mythology,appeard in the world and then departed after fulfilling their roles
@Dev_Fadnavis
“Our Father...": D Fadnavis Snaps At Sanjay Raut For PM Modi 'Retirement' Talk https://t.co/DO8mTMLHsq— Sanjay Raut (@rautsanjay61) March 31, 2025
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ