newsfirstkannada.com

ರಾಮನ ಹಾಡು ಹಾಡಿದ ಜರ್ಮನ್ ಯುವತಿಗೆ ಪ್ರಧಾನಿ ಮೋದಿ ಮೆಚ್ಚುಗೆ; ಈ ಹಾಡಿನಲ್ಲಿ ಅಂತದ್ದೇನಿದೆ?

Share :

Published January 18, 2024 at 4:59pm

    ಜರ್ಮನ್​ನ ಯುವತಿಯೊಬ್ಬರ ರೀಲ್ಸ್​ ಶೇರ್ ಮಾಡಿದ ಪ್ರಧಾನಿ

    ಪ್ರಧಾನಿ ಮೋದಿಯವರು ಒಮ್ಮೆ ಮನ್ ಕೀ ಬಾತ್​ನಲ್ಲಿ ಉಲ್ಲೇಖ

    ರಾಮನ ಬಗ್ಗೆ ಯುವತಿ ಹಾಡಿದ ಹಾಡು ಪ್ರಧಾನಿಯನ್ನ ಮೆಚ್ಚಿಸಿತೇ?

ಅಯೋಧ್ಯೆ ರಾಮಮಂದಿರ ಇನ್ನೇನು ನಾಲ್ಕು ದಿನಗಳಲ್ಲಿ ಗ್ರ್ಯಾಂಡ್ ಆಗಿ ಲೋಕಾರ್ಪಣೆಗೊಳ್ಳಲಿದೆ. ಈಗಾಗಲೇ ಮಂದಿರದ ಕಾರ್ಯಗಳು ವೇಗ ಪಡೆದುಕೊಂಡಿದ್ದು ಭಕ್ತರು ರಾಮನ ದರ್ಶನ ಪಡೆಯಲು ಉತ್ಸುಕರಾಗಿದ್ದಾರೆ. ಪ್ರಧಾನಿ ಮೋದಿ ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರ ಬೆನ್ನಲ್ಲೇ ರಾಮನ ಬಗ್ಗೆ ಹಾಡು ಹಾಡಿದ ಜರ್ಮನ್​ನ ಯುವತಿಯೊಬ್ಬರ ರೀಲ್ಸ್​ ಅನ್ನ ಪ್ರಧಾನಿಯವರು ಶೇರ್ ಮಾಡಿದ್ದಾರೆ.

ಪ್ರಧಾನಿ ಮೋದಿಯವರು ತಮ್ಮ ಎಕ್ಸ್​ ಅಕೌಂಟ್​ನಲ್ಲಿ ಜರ್ಮನ್​ ಸಿಂಗರ್ ಆಗಿರುವ ಕಸ್ಸಂದ್ರ ಮೇ ಸ್ಪಿಟ್ಮನ್ ಎನ್ನುವರ ರೀಲ್ಸ್ ಶೇರ್ ಮಾಡಿದ್ದಾರೆ. ಇಡೀ ವಿಶ್ವವೇ ಜನವರಿ 22ಕ್ಕೆ ಕಾತುರದಿಂದ ಕಾಯುತ್ತಿದೆ. ನಾನು ಒಮ್ಮೆ ಮನ್​ ​ಕೀ ಬಾತ್​ನಲ್ಲಿ ಈ ಸಿಂಗರ್ ಬಗ್ಗೆ ಉಲ್ಲೇಖ ಮಾಡಿದ್ದೆ. ಅವರು ಹಾಡಿರುವ ರಾಮನ ಹಾಡು ತುಂಬಾ ಹಿಂಪಾಗಿದೆ. ಹಾಡನ್ನು ಕೇಳಿದಾಗ ಮನಸಿಗೆ ಆಹ್ಲಾದಕರ ಅನುಭವ ಆಗುತ್ತೆ ಎಂದು ಬರೆದುಕೊಂಡಿದ್ದಾರೆ.

ಇನ್ನು ಪ್ರಧಾನಿ ಮೋದಿಯವರು 105ನೇ ಮನ್ ಕೀ ಬಾತ್ ಸಂಚಿಕೆಯಲ್ಲಿ ಈ ಸಿಂಗರ್ ಬಗ್ಗೆ ಉಲ್ಲೇಖ ಮಾಡಿದ್ದರು. ಸದ್ಯ ಇದೀಗ ರಾಮಮಂದಿರ ಉದ್ಘಾಟನೆ ಮುನ್ನವೇ ಮತ್ತೊಮ್ಮೆ ಕಸ್ಸಂದ್ರ ಮೇ ಸ್ಪಿಟ್ಮನ್ ಅವರ ಫೋಟೋ ಶೇರ್ ಮಾಡಿದ್ದಾರೆ. ಇದರಿಂದ ಈ ಸಿಂಗರ್ ಹಾಡಿರುವ ರಾಮನ ಹಾಡಿನ ಬಗ್ಗೆ ಗೂಗಲ್​ನಲ್ಲಿ ಹುಡುಕಾಟ ಹೆಚ್ಚಾಗಿದೆ ಎಂದು ಹೇಳಲಾಗಿದೆ.

ಕಸ್ಸಂದ್ರ ಮೇ ಸ್ಪಿಟ್ಮನ್ ಅವರಿಗೆ ಇನ್ನು 21 ವರ್ಷ ಎನ್ನಲಾಗಿದೆ. ರಾಮ ಆಯೆಂಗೇ, ರಾಮ ಆಯೆಂಗೇ ಟು ಅಂಗಾನಾ ಸಜವುಂಗಿ’ ಎನ್ನುವ ಹಾಡನ್ನು ಹಾಡಿದ್ದಾರೆ. ಅವರು ಕನ್ನಡ, ಹಿಂದಿ, ಉರ್ದು, ಅಸ್ಸಾಮಿ, ಮಲಯಾಳಂ, ತಮಿಳು, ಬಂಗಾಳಿ, ಸಂಸ್ಕೃತವನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ. ಆದರೆ ಕುತೂಹಲದ ವಿಷಯವೆಂದರೇ ಕಸ್ಸಂದ್ರ ಅವರು ಇನ್ನುವರೆಗೂ ಭಾರತಕ್ಕೆ ಬಂದಿಲ್ಲ. ಆದರೆ ಇಲ್ಲಿನ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಆಳವಾದ ಜ್ಞಾನ ಹೊಂದಿದ್ದಾರೆ ಎಂದು ಹೇಳಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರಾಮನ ಹಾಡು ಹಾಡಿದ ಜರ್ಮನ್ ಯುವತಿಗೆ ಪ್ರಧಾನಿ ಮೋದಿ ಮೆಚ್ಚುಗೆ; ಈ ಹಾಡಿನಲ್ಲಿ ಅಂತದ್ದೇನಿದೆ?

https://newsfirstlive.com/wp-content/uploads/2024/01/PM_MODI_SONG.jpg

Load More