newsfirstkannada.com

ಅಮ್ಮನ ಪಾದ ಮುಟ್ಟದೆ ಸ್ಪರ್ಧಿಸುತ್ತಿರೋ ಮೊದಲ ಚುನಾವಣೆ.. ಸಂದರ್ಶನದ ವೇಳೆ ಕಣ್ಣೀರು ಸುರಿಸಿದ ಪ್ರಧಾನಿ ಮೋದಿ

Share :

Published May 7, 2024 at 11:53am

Update May 7, 2024 at 11:57am

    ತಾಯಿಯನ್ನು ನೆನೆಸಿಕೊಂಡು ಕಣ್ಣೀರು ಸುರಿಸಿದ ಪ್ರಧಾನಿ ನರೇಂದ್ರ ಮೋದಿ

    ನಾನು ಅವಳಿಗೆ ನ್ಯಾಯ ನೀಡಲಿಲ್ಲ, ಆಕೆಯ ಕನಸುಗಳನ್ನು ಪೂರ್ತಿಗೊಳಿಸಿಲ್ಲ

    ನಾನು ಸಣ್ಣ ವಯಸ್ಸಿನಲ್ಲೇ ಮನೆ ಬಿಟ್ಟು ಹೋಗಿದ್ದೇನೆ ಎಂದ ಮೋದಿ

ಪ್ರಧಾನಿ ನರೇಂದ್ರ ಮೋದಿಯವರು ತಾಯಿಯನ್ನು ನೆನೆಸಿಕೊಂಡು ಕಣ್ಣೀರು ಸುರಿಸಿದ್ದಾರೆ. ನನ್ನ ತಾಯಿಯ ಆಶೀರ್ವಾದವಿಲ್ಲದೆ ಸ್ಪರ್ಧಿಸುತ್ತಿರುವ ಮೊದಲ ಚುನಾವಣೆ ಇದಾಗಿದೆ ಎಂದು ಹೇಳಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯೊಂದು ನಡೆಸಿದ ಸಂದರ್ಶನ ಕಾರ್ಯಕ್ರಮದಲ್ಲಿ ಮೋದಿ ಭಾಗವಹಿಸಿದ್ದರು. ಸಂದರ್ಶನದಲ್ಲಿ ಈ ಬಾರಿಯ ಲೋಕಸಭಾ ಚುನಾವಣೆ ಮತ್ತು ತಮ್ಮ ತಾಯಿಯ ಬಗ್ಗೆ ಮಾತನಾಡಿದ್ದಾರೆ.

‘‘ಇದು ಕೇವಲ ನನ್ನ ತಾಯಿಯ ಬಗ್ಗೆ ಮಾತ್ರವಲ್ಲ, ನನ್ನ ತಾಯಿ ನನಗೆ ಜನ್ಮ ನೀಡಿದ್ದಾಳೆ. ಆದರೆ ನಾನು ಅವಳಿಗೆ ನ್ಯಾಯ ನೀಡಲಿಲ್ಲ. ಪ್ರತಿಯೊಬ್ಬ ತಾಯಿಯು ತನ್ನ ಮಗುವಿನ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿರುತ್ತಾಳೆ. ಆದರೆ ನಾನು ಆಕೆಯ ಕನಸುಗಳನ್ನು ಪೂರ್ತಿಗೊಳಿಸಿಲ್ಲ. ನಾನು ಸಣ್ಣ ವಯಸ್ಸಿನಲ್ಲೇ ಮನೆ ಬಿಟ್ಟು ಹೋಗಿದ್ದೇನೆ’’ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್​ ಬಗ್ಗೆ ಪ್ರಧಾನಿ ಮೊದಲ ಮಾತು.. ಇದು JDS-Congres ಮೈತ್ರಿಯಲ್ಲಿದ್ದಾಗ ಮಾಡಿರೋ ವಿಡಿಯೋ ಎಂದ ಮೋದಿ

ತಾಯಿಯನ್ನು ಕಳೆದುಕೊಂಡು ಮೊದಲ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿರುವ ಬಗ್ಗೆ ಮಾತನಾಡಿದ ಮೋದಿ, ‘‘ತಾಯಿಯ ಪಾದವನ್ನು ಮುಟ್ಟಿಯೇ ನಾನು ಎಲ್ಲಾ ನಾಮಪತ್ರಗಳನ್ನು ಸಲ್ಲಿಸಿದ್ದೇನೆ. ಅವರು ನನಗೆ ಬೆಲ್ಲ ತಿನ್ನಿಸುತ್ತಿದ್ದರು. ಆದರೆ ತಾಯಿಯನ್ನು ಕಳೆದುಕೊಂಡು ಸ್ಪರ್ಧಿಸುತ್ತಿರುವ ಮೊದಲ ಚುನಾವಣೆಯಾಗಿದೆ. ತಾಯಿಯ ಪಾದವನ್ನು ಮುಟ್ಟದೆ ನಾಮಪತ್ರ ಸಲ್ಲಿಸಿದ್ದೇನೆ’’ ಎಂದಿದ್ದಾರೆ.

ಈ ಬಾರಿಯ ಲೋಕಸಭಾ ಚುನಾವಣೆಗೆ ಉತ್ತರ ಪ್ರದೇಶದ ವಾರಣಾಸಿಯಿಂದ ಮೋದಿ ಹ್ಯಾಟ್ರಿಕ್​ ಗೆಲುವಿಗಾಗಿ ಪೈಪೋಟಿ ನೀಡುತ್ತಿದ್ದಾರೆ. ಏಪ್ರಿಲ್ 19 ರಿಂದ ಪ್ರಾರಂಭವಾಗಿ ಜೂನ್ 1 ರವರೆಗೆ ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮ್ಮನ ಪಾದ ಮುಟ್ಟದೆ ಸ್ಪರ್ಧಿಸುತ್ತಿರೋ ಮೊದಲ ಚುನಾವಣೆ.. ಸಂದರ್ಶನದ ವೇಳೆ ಕಣ್ಣೀರು ಸುರಿಸಿದ ಪ್ರಧಾನಿ ಮೋದಿ

https://newsfirstlive.com/wp-content/uploads/2024/05/Modi-7.jpg

Load More