/newsfirstlive-kannada/media/post_attachments/wp-content/uploads/2025/05/Modi-speech-on-Pakistan.jpg)
ನವದೆಹಲಿ: ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಬಹಳ ಆಕ್ರೋಶ ಭರಿತವಾಗಿ ಮಾತನಾಡಿದ್ದಾರೆ. ಅಷ್ಟೇ ಅಲ್ಲ ಪ್ರತಿ ಮಾತಿನಲ್ಲೂ ವೈರಿಗಳಿಗೆ ಎಚ್ಚರಿಕೆ ಕೊಟ್ಟ ಪ್ರಧಾನಿ ಮೋದಿ, ಭಾರತದ ಸ್ಪಷ್ಟ ಸಂದೇಶವನ್ನು ಇಡೀ ವಿಶ್ವಕ್ಕೆ ಸಾರಿದ್ದಾರೆ.
ಪ್ರಧಾನಿ ಮೋದಿ ಅವರ ಮಾತುಗಳಲ್ಲಿ ಪಹಲ್ಗಾಮ್ ದಾಳಿಯ ಬಗ್ಗೆ ಆಕ್ರೋಶ ಇತ್ತು. ಸಿಂಧೂರ ಕಳೆದುಕೊಂಡ ಮಹಿಳೆಯರಿಗೆ ಸಮಾಧಾನ ಹೇಳಿದಂತಿತ್ತು. ಭಯೋತ್ಪಾದನೆ ಮಾಡಿದ್ರೆ ಏನಾಗುತ್ತೆ ಅಂತಾ ಪಾಕಿಸ್ತಾನಕ್ಕೆ ಕೊಟ್ಟ ಎಚ್ಚರಿಕೆ ಇತ್ತು. ವಿಶ್ವಕ್ಕೆ ಭಾರತದ ತಾಕತ್ತು ಏನು ಅನ್ನೋದನ್ನ ತೋರಿಸಿಕೊಟ್ಟ ಸಂದೇಶವಿತ್ತು. ಭಾರತೀಯ ಸೇನೆಯ ಶೌರ್ಯ ಮತ್ತು ಪರಾಕ್ರಮಕ್ಕೆ ಸಲ್ಲಿಸಿದ ಕೃತಜ್ಞತೆ ಕೂಡ ಇತ್ತು.
ಇದನ್ನೂ ಓದಿ: ರಕ್ತ ಮತ್ತು ನೀರು ಒಟ್ಟಿಗೆ ಹರಿಯಲ್ಲ.. ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಖಡಕ್ ಎಚ್ಚರಿಕೆ; ಹೈಲೈಟ್ಸ್ ಇಲ್ಲಿದೆ!
ಆಪರೇಷನ್ ಸಿಂಧೂರ್ ಇದು ಹೆಸರಲ್ಲ ಭಾರತೀಯರ ಅಖಂಡ ಪ್ರತಿಜ್ಞೆ ಎಂದು ಮೋದಿ ಸ್ಪಷ್ಟಪಡಿಸಿದರು. ಅಲ್ಲದೇ ಈ ಪ್ರತಿಜ್ಞೆಯ ಪರಿಣಾಮ ಏನು ಅನ್ನೋದನ್ನ ಈಗಾಗಲೇ ಪಾಕಿಸ್ತಾನ ನೋಡಿದೆ. ಪಾಕಿಸ್ತಾನದ ಭಾರತದ ಗಡಿಯಲ್ಲಿ ತನ್ನ ತಾಕತ್ತು ತೋರಿಸೋಕೆ ಬಂದಿದೆ. ಆದರೆ ಭಾರತ ಪಾಕಿಸ್ತಾನದ ಒಳಗೆ ನುಗ್ಗಿ ತನ್ನ ಪರಾಕ್ರಮ ಮೆರೆದಿದೆ.
ಭಯೋತ್ಪಾದನೆ ಜೊತೆ ಜೊತೆಗೆ ಮಾತುಕತೆ ಸಾಧ್ಯವೇ ಇಲ್ಲ. ರಕ್ತ ಮತ್ತು ನೀರು ಒಟ್ಟಿಗೆ ಹರಿಯೋಕೆ ಸಾಧ್ಯವೇ ಇಲ್ಲ. ಟೆರರ್-ಟಾಕ್ ಮತ್ತು ಟೆರರ್-ಟ್ರೇಡ್ ಒಟ್ಟಿಗೆ ಸಾಧ್ಯವಿಲ್ಲ.
ಭಾರತ ಶಾಂತಿ ಬಯಸುವ ರಾಷ್ಟ್ರ. ಶಾಂತಿ ಸಿಗಬೇಕಾದ್ರೂ ಅದಕ್ಕೆ ಶಕ್ತಿ ಬೇಕು. ಅಂತಹ ಶಕ್ತಿಯನ್ನು ಭಾರತ ತೋರಿಸಿದೆ. ಇದು ಹೊಸ ಯುಗದ ಭಾರತ. ನ್ಯೂಕ್ಲಿಯರ್ ಬಾಂಬ್ ಹೆಸರಿನಲ್ಲಿ ಭಾರತವನ್ನ ಬ್ಲಾಕ್‌ಮೇಲ್ ಮಾಡೋಕೆ ಸಾಧ್ಯವಿಲ್ಲ. ಇಂತಹ ಗೊಡ್ಡು ಬೆದರಿಕೆಗಳಿಗೆ ಭಾರತ ಬಗ್ಗುವುದೂ ಇಲ್ಲ ಎಂದು ಪ್ರಧಾನಿ ಮೋದಿ ಹೇಳಿದರು.
Address to the nation. https://t.co/iKjEJvlciR
— Narendra Modi (@narendramodi)
Address to the nation. https://t.co/iKjEJvlciR
— Narendra Modi (@narendramodi) May 12, 2025
">May 12, 2025
ತಾನು ಪೋಷಿಸುತ್ತಿರುವ ಭಯೋತ್ಪಾದಕದಿಂದ ಪಾಕಿಸ್ತಾನವೇ ಒಂದು ದಿನ ಬಲಿಯಾಗೋದ್ರಲ್ಲಿ ಯಾವುದೇ ಸಂಶಯವಿಲ್ಲ. ನಾವು ಭಯೋತ್ಪಾದನೆಯನ್ನೂ ಸಹಿಸಲ್ಲ. ಭಯೋತ್ಪಾದನೆಗೆ ಸಹಕಾರ ನೀಡೋ ಸರ್ಕಾರವನ್ನೂ ಸಹಿಸೋದಿಲ್ಲ. ವಿಶ್ವಕ್ಕೆ ನಾವು ಹೇಳದೇನಂದ್ರೆ ಪಾಕಿಸ್ತಾನದ ಜೊತೆ ಮಾತುಕತೆಯಾದ್ರೆ ಅದು ಭಯೋತ್ಪಾದನೆ ಬಗ್ಗೆ ಮಾತ್ರ. ಪಾಕಿಸ್ತಾನದ ಜೊತೆ ಮಾತುಕತೆಯಾದ್ರೆ ಅದು ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಮಾತ್ರ ಎಂದು ಪ್ರಧಾನಿ ಸ್ಪಷ್ಟ ಸಂದೇಶ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ