24 ಮಂದಿಯ ಜೀವ ತೆಗೆದ ಉಗ್ರರು.. ಕಾಶ್ಮೀರದಲ್ಲಿ ಭೀಕರ ದೃಶ್ಯ; ಪ್ರಧಾನಿ ಮೋದಿ ಹೇಳಿದ್ದೇನು?

author-image
Bheemappa
Updated On
24 ಮಂದಿಯ ಜೀವ ತೆಗೆದ ಉಗ್ರರು.. ಕಾಶ್ಮೀರದಲ್ಲಿ ಭೀಕರ ದೃಶ್ಯ; ಪ್ರಧಾನಿ ಮೋದಿ ಹೇಳಿದ್ದೇನು?
Advertisment
  • ಈ ಕೃತ್ಯಕ್ಕೆ ಕಾರಣರಾದವರನ್ನು ಯಾವುದೇ ಕಾರಣಕ್ಕೂ ಬಿಡಲ್ಲ
  • ಘಟನೆಯಲ್ಲಿ ಜೀವ ಕಳೆದುಕೊಂಡವರಿಗೆ ಪ್ರಧಾನಿ ಸಂತಾಪ
  • 2 ಟೀಮ್​ ಮಾಡಿಕೊಂಡು ಭಯೋತ್ಪಾದಕರು ದಾಳಿ ಮಾಡಿದ್ರಾ?

ನವದೆಹಲಿ: ಜಮ್ಮುಕಾಶ್ಮೀರದ ಪಹಲ್ಗಾಮ್‌ನ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದಕರು ಗುಂಡಿನ ದಾಳಿಯಲ್ಲಿ 24 ಜನರು ಜೀವ ಕಳೆದುಕೊಂಡಿದ್ದಾರೆ. ಸದ್ಯ ಈ ಕೃತ್ಯವನ್ನು ಪ್ರಧಾನಿ ಮೋದಿಯವರು ಬಲವಾಗಿ ಖಂಡಿಸಿದ್ದಾರೆ. ಈ ಘೋರ ಕೃತ್ಯದ ಹಿಂದಿರುವವರನ್ನು ನ್ಯಾಯದ ಕಟಕಟೆಗೆ ತರಲಾಗುವುದು ಎಂದು ಪ್ರಧಾನಿ ತಿಳಿಸಿದ್ದಾರೆ.

ಈ ಬಗ್ಗೆ ಪ್ರಧಾನಿ ಮೋದಿಯವರು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಅನ್ನು ಶೇರ್ ಮಾಡಿದ್ದಾರೆ. ಪಹಲ್ಗಾಮ್‌ನಲ್ಲಿ ನಡೆದ ಘಟನೆಯನ್ನು ಬಲವಾಗಿ ಖಂಡಿಸುತ್ತೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಈ ಸಮಯದಲ್ಲಿ ಸಂತಾಪ ಸೂಚಿಸುತ್ತೇನೆ. ಘಟನೆಯಲ್ಲಿ ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಹನಿಮೂನ್‌ಗೆ ಹೋದವರ ಜೀವ ತೆಗೆದ ಉಗ್ರರು.. ಕಾಶ್ಮೀರದಲ್ಲಿ ಬೆಚ್ಚಿ ಬೀಳಿಸೋ ಭಯಾನಕ ದೃಶ್ಯಗಳು!

publive-image

ಗಾಯಗೊಂಡವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಶೀಘ್ರದಲ್ಲೇ ಒದಗಿಸಲಾಗುವುದು. ಈ ಘೋರ ಕೃತ್ಯದ ಹಿಂದಿರುವವರನ್ನು ನ್ಯಾಯದ ಕಟಕಟೆಗೆ ತರಲಾಗುವುದು. ಘಟನೆಗೆ ಕಾರಣರಾದವರನ್ನು ಸುಮ್ಮನೆ ಬಿಡಲ್ಲ. ಅವರ ದುಷ್ಟ ಕಾರ್ಯಸೂಚಿಗೆ ಎಂದಿಗೂ ಯಶಸ್ವಿ ಆಗಲ್ಲ. ಭಯೋತ್ಪಾದನೆಯ ವಿರುದ್ಧ ಹೋರಾಡುವ ನಮ್ಮ ಸಂಕಲ್ಪ ಅಚಲ ಮತ್ತು ಇನ್ನಷ್ಟು ಬಲಗೊಳ್ಳುತ್ತದೆ ಎಂದು ಮೋದಿ ಅವರು ಹೇಳಿದ್ದಾರೆ.

ಆರರಿಂದ ಏಳು ಭಯೋತ್ಪಾದಕರು ಎರಡು ತಂಡಗಳನ್ನು ಮಾಡಿಕೊಂಡು ಪ್ರವಾಸಿಗರ ಮೇಲೆ ಅಟ್ಯಾಕ್ ಮಾಡಿದ್ದಾರೆ. ವಿವಿಧ ಸ್ಥಳದಲ್ಲಿದ್ದ ಪ್ರವಾಸಿಗರ ಮೇಲೆ ಏಕಾಏಕಿ ದಾಳಿ ಮಾಡಿ ಟೂರಿಸ್ಟ್​ಗಳ ಜೀವ ತೆಗೆದಿದ್ದಾರೆ. ಈ ಘಟನೆಯನ್ನು ಇಡೀ ದೇಶವೇ ಬಲವಾಗಿ ಖಂಡಿಸುತ್ತಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment