ಸೇನೆಗೆ ಫ್ರೀ ಹ್ಯಾಂಡ್​.. ಪ್ರಧಾನಿ ಮೋದಿ ನೇತೃತ್ವದ ಸಭೆಯಲ್ಲಿ ಕಠಿಣ ನಿರ್ಧಾರಗಳು; ಏನದು?

author-image
admin
Updated On
ಪುಲ್ವಾಮಾ ದಾಳಿ ನಂತರ ಇದೇ ಮೊದಲ ಬಾರಿಗೆ CCPA ಸಭೆ.. ಈ ಸಮಿತಿಯ ಮಹತ್ವ ಏನು?
Advertisment
  • ಪ್ರಧಾನಿ ನರೇಂದ್ರ ಮೋದಿ ನಿವಾಸದಲ್ಲಿ ಇಂದು ಉನ್ನತ‌ ಮಟ್ಟದ ಸಭೆ
  • ಸಮಯ, ಸ್ಥಳ.. ನಿಮ್ಮ ವಿವೇಚನೆಗೇ ಬಿಟ್ಟಿದ್ದು. ನೀವೇ ನಿರ್ಧಾರ ಮಾಡಿ
  • ಅಜಿತ್​ ದೋವಲ್, ಭೂಸೇನೆ, ನೌಕಾ, ವಾಯುಸೇನೆ ಮುಖ್ಯಸ್ಥರ ಚರ್ಚೆ

ನವದೆಹಲಿ: ಪಹಲ್ಗಾಮ್‌ ದಾಳಿಕೋರರನ್ನು ಮಟ್ಟ ಹಾಕಬೇಕು. ಉಗ್ರರ​ ವಿರುದ್ಧ ಪ್ರತೀಕಾರಕ್ಕೆ ಪ್ರಧಾನಿ ನರೇಂದ್ರ ಮೋದಿ ದಿಟ್ಟ ಹೆಜ್ಜೆ ಇಟ್ಟಿದ್ದಾರೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಇಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಲೋಕ ಕಲ್ಯಾಣ್ ಮಾರ್ಗ್‌ನ ನಿವಾಸದಲ್ಲಿ ಇಂದು ಉನ್ನತ‌ ಮಟ್ಟದ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್, ವಿದೇಶಾಂಗ ಸಚಿವ ಜೈಶಂಕರ್ ಮತ್ತು ಭೂಸೇನೆ, ನೌಕಾ ಸೇನೆ ಮತ್ತು ವಾಯುಸೇನೆ ಮುಖ್ಯಸ್ಥರು ಭಾಗಿಯಾಗಿದ್ದರು.

publive-image

ಸಭೆಯಲ್ಲಿ ಪ್ರಮುಖವಾಗಿ ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತ ಯಾವ ರೀತಿ ಕಾರ್ಯಾಚರಣೆ ಮಾಡಬೇಕು ಅನ್ನೋದರ ಬಗ್ಗೆ ಚರ್ಚಿಸಲಾಯಿತು.

ಸುಮಾರು 2 ಗಂಟೆಗಳ ಕಾಲ ನಡೆದ ಸಭೆಯಲ್ಲಿ ಪ್ರಧಾನಿ ಮೋದಿ ಮೂರು ಸೇನೆಗಳ ಮುಖ್ಯಸ್ಥರು, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್ ಸಲಹೆಗಳನ್ನ ನೀಡಿದರು. ಕೊನೆಗೆ ಪ್ರಧಾನಿ ಮೋದಿ ನೇತೃತ್ವದ ಸಭೆಯಲ್ಲಿ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: ಪಹಲ್ಗಾಮ್‌ನಲ್ಲಿ ಜೀವ ಉಳಿದಿದ್ದೇ ಪವಾಡ.. ಉಗ್ರರ ದಾಳಿಯ ಭಯಾನಕ ಮಾಹಿತಿ ಬಿಚ್ಚಿಟ್ಟ ಕನ್ನಡಿಗರು 

ನಮಗೆ ಸೇನೆ ಮೇಲೆ ಪೂರ್ಣ ಪ್ರಮಾಣದಲ್ಲಿ ನಂಬಿಕೆ ಇದೆ. ಉಗ್ರರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಲು ತಿಳಿಸಿದ್ದಾರೆ. ಆಪರೇಷನ್​ ಆಕ್ರಮಣ್‌ನಲ್ಲಿ ಮೂರು ಸೇನೆಗೆ ಭಾರತ ಸರ್ಕಾರದಿಂದ ಮುಕ್ತ ಅವಕಾಶ ನೀಡಲಾಗಿದೆ. ಸಮಯ, ಸ್ಥಳ.. ನಿಮ್ಮ ವಿವೇಚನೆಗೇ ಬಿಟ್ಟಿದ್ದು. ನೀವೇ ನಿರ್ಧಾರ ಮಾಡಿ ಎಂದು ಸೇನೆಗಳಿಗೆ ಮುಕ್ತ ಸ್ವಾತಂತ್ರ್ಯವನ್ನು ಭಾರತ ಸರ್ಕಾರ ನೀಡಿದೆ.

ಇಂದು ಏನೆಲ್ಲಾ ಆಯ್ತು?
1. ಮೂರು ಸೇನೆಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಿದ ಪ್ರಧಾನಿ ಮೋದಿ
2. ಆಪರೇಷನ್​ ಆಕ್ರಮಣ್ ನಡೆಸಲು ಸೇನೆಗೆ ಮುಕ್ತ ಅವಕಾಶ
3. ನಮಗೆ ಸೇನೆ ಮೇಲೆ ಪೂರ್ಣ ಪ್ರಮಾಣದಲ್ಲಿ ನಂಬಿಕೆ ಇದೆ
4. ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳಲು ಪ್ರಧಾನಿ ಮೋದಿ ಆದೇಶ
5. ಸಮಯ, ಸ್ಥಳ ನೀವೇ ನಿರ್ಧಾರ ಮಾಡಿ.. ಪ್ರಧಾನಿ ಸೂಚನೆ
6. ಪ್ರಧಾನಿ ನರೇಂದ್ರ ಮೋದಿ ನಿವಾಸಕ್ಕೆ ಆಗಮಿಸಿದ ಅಮಿತ್ ಶಾ
7. ಪ್ರಧಾನಿ ಮೋದಿ, ಅಮಿತ್ ಶಾ, ರಾಜನಾಥ್​ ರಹಸ್ಯ ಸಭೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment