Advertisment

ಸ್ವಾತಂತ್ರ್ಯ ದಿನಾಚರಣೆ: ಹೊಸ ದಾಖಲೆ ಬರೆಯಲಿರೋ ಪ್ರಧಾನಿ ನರೇಂದ್ರ ಮೋದಿ ಭಾಷಣ

author-image
Gopal Kulkarni
Updated On
ಸ್ವಾತಂತ್ರ್ಯ ದಿನಾಚರಣೆ: ಹೊಸ ದಾಖಲೆ ಬರೆಯಲಿರೋ ಪ್ರಧಾನಿ ನರೇಂದ್ರ ಮೋದಿ ಭಾಷಣ
Advertisment
  • ಸ್ವಾತಂತ್ರ್ಯ ದಿನದಂದು ನರೇಂದ್ರ ಮೋದಿ ಬರೆಯಲಿದ್ದಾರೆ ಹೊಸ ಇತಿಹಾಸ
  • ಅತ್ಯಂತ ಹೆಚ್ಚು ಸ್ವಾತಂತ್ರ್ಯ ದಿನದ ಭಾಷಣ ಮಾಡಿದ ಪ್ರಧಾನಿ ಎಂಬ ಹೆಗ್ಗಳಿಕೆ
  • ಮಾಜಿ ಪ್ರಧಾನಿ ಇಂದಿರಾ ಗಾಂಧಿ ದಾಖಲೆ ಸರಿಗಟ್ಟಲಿರುವ ನರೇಂದ್ರ ಮೋದಿ

ನವದೆಹಲಿ: ಆಗಸ್ಟ್ 15 ರಂದು ಇಡೀ ದೇಶವೇ ಸ್ವಾತಂತ್ರ್ಯ ದಿನಾಚರಣೆಯ ದೊಡ್ಡ ಹಬ್ಬಕ್ಕೆ ಸಾಕ್ಷಿಯಾಗಲಿದೆ. ಗಗನ ಗಾಳಿಯಲಿ ತ್ರಿವರ್ಣ ಧ್ವಜವು ಎಲ್ಲೆಲ್ಲೂ ಹಾರಾಡಲಿದೆ. ಸ್ವಾತಂತ್ರ್ಯೋತ್ಸವದಂದು ಪ್ರಧಾನಿ ದೇಶದ ಕುರಿತು ಮಾತಾನಾಡುವುದು ಸ್ವತಂತ್ರ ಭಾರತದ ಪರಂಪರೆ. ಹೀಗಾಗಿ ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜವನ್ನು ಹಾರಿಸಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.

Advertisment

ಇದರಲ್ಲೇನು ವಿಶೇಷ ಎಂದರೆ ಪ್ರತಿವರ್ಷ ಪ್ರತಿ ಪ್ರಧಾನಿ ಈ ಕೆಲಸ ಮಾಡಿರುತ್ತಾರೆ ಎಂದು ನೀವು ಹೇಳಬಹುದು. ಅಲ್ಲಿಯೂ ಕೂಡ ಒಂದು ವಿಶೇಷತೆ ಇದೆ. ಸತತವಾಗಿ 11 ಬಾರಿ ಸ್ವಾತಂತ್ರ್ಯೋತ್ಸವದಂದು ಅತಿ ಹೆಚ್ಚು ಭಾಷಣ ಮಾಡಿದ ಪ್ರಧಾನಿಗಳ ಪಟ್ಟಿಯಲ್ಲಿ ಮೋದಿ ಈಗ ಇಂದಿರಾ ಗಾಂಧಿಯವರನ್ನು ಸರಿಗಟ್ಟಲಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ದಾಖಲೆಯನ್ನು ಮುರಿಯಲಿದ್ದಾರೆ.

ಇದನ್ನೂ ಓದಿ:ರಾಹುಲ್ ಗಾಂಧಿಗೆ ಶಾಕಿಂಗ್ ನ್ಯೂಸ್.. ವಿಪಕ್ಷ ನಾಯಕನ ಮೇಲೆ ಇ.ಡಿ ರೇಡ್ ಆಗುತ್ತಾ? ಏನಿದು ಹೊಸ ಟ್ವಿಸ್ಟ್‌?

publive-image

ಮೋದಿ ಮೂರನೇ ಅವಧಿಗೂ ಪಿಎಂ ಆಗಿ ಮುಂದುವರಿದಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಕೆಂಪುಕೋಟೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ವರ್ಷವೂ ಕೂಡ ಅದೇ ಮುಂದುವರಿಯಲಿದೆ. ಈ ಹಿಂದೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಸತತವಾಗಿ 10 ಬಾರಿ ಸ್ವಾತಂತ್ರ್ಯ ದಿನಾಚರಣೆಯ ಭಾಷಣವನ್ನು ಮಾಡಿದ್ದರು. ಅದಕ್ಕೂ ಮೊದಲು ಮಾಜಿ ಪ್ರಧಾನಿ ಇಂದಿರಾಗಾಂಧಿ 1966 ರಿಂದ1977ರವರೆಗೆ ನಿರಂತರವಾಗಿ 11 ಬಾರಿ ಸ್ವಾತಂತ್ರ್ಯೋತ್ಸವದ ಭಾಷಣ ಮಾಡಿದ್ದರು. ಅದಾದ ಬಳಿಕ 1980 ಹಾಗೂ 1984ರಲ್ಲಿಯೂ ಇಂದಿರಾ ಗಾಂಧಿ ಭಾಷಣ ಮಾಡಿದ್ದರು. ಆದ್ರೆ ಸತತವಾಗಿ 11 ವರ್ಷ ಅವರು ಸ್ವಾತಂತ್ರ್ಯ ದಿನಾಚರಣೆಯಂದು ಭಾಷಣ ಮಾಡಿದ ದಾಖಲೆ ಇದೆ. ಅದನ್ನು ಮೋದಿ ಈ ಬಾರಿಯ ಸ್ವಾತಂತ್ರ್ಯೋತ್ಸವದ ದಿನದಂದು ಸರಿಗಟ್ಟಲಿದ್ದಾರೆ.

Advertisment

ಇದನ್ನೂ ಓದಿ:ಸತತ 6ನೇ ಬಾರಿಯೂ ಮದ್ರಾಸ್ IITಗೆ ಅಗ್ರಸ್ಥಾನ.. ಟಾಪ್ 10ರಲ್ಲಿ ಬೆಂಗಳೂರು IIScಗೆ ಎಷ್ಟನೇ ಸ್ಥಾನ?

ಇನ್ನೂ ಅತಿ ಹೆಚ್ಚು ಗಂಟೆಗಳ ಕಾಲ ಸ್ವತಂತ್ರದ ದಿನದ ಭಾಷಣ ಮಾಡಿದ ಖ್ಯಾತಿ ನರೇಂದ್ರ ಮೋದಿಯವರ ಹೆಸರಿನಲ್ಲಿದೆ. ಅತ್ಯಂತ ಹೆಚ್ಚು ಗಂಟೆಗಳ ಕಾಲ ಮಾಡಿದ ಭಾಷಣ 2016ರಲ್ಲಿ 92 ನಿಮಿಷಗಳು. ಇದು ಮೋದಿಯವರು ಮಾಡಿದ ಅತ್ಯಂತ ದೀರ್ಘ ಭಾಷಣ, 2017ರಲ್ಲಿ ಮೋದಿ 55 ನಿಮಿಷಗಳ ಕಾಲ ಮಾಡಿದ ಭಾಷಣ ಅತ್ಯಂತ ಕಡಿಮೆ ಅವಧಿ ಹೊಂದಿದ ಭಾಷಣ. ಇನ್ನು 1997ರಲ್ಲಿ ಮಾಜಿ ಪ್ರಧಾನಿ ಐಕೆ ಗುಜ್ರಾಲ್ 71 ನಿಮಿಷಗಳ ಕಾಲ ಸ್ವಾತಂತ್ರ್ಯ ದಿನದಂದು ಭಾಷಣ ಮಾಡಿದ್ದರು. ಭಾರತದ ಮೊಟ್ಟ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಮೊದಲ ಸ್ವಾತಂತ್ರ್ಯ ದಿನಾಚರಣೆಯ ಭಾಷಣವನ್ನು 24 ನಿಮಿಷಕ್ಕೆ ಮುಗಿಸಿದ್ದರು. 1972 ರಲ್ಲಿ ಇಂದಿರಾ ಗಾಂಧಿ 54 ನಿಮಿಷಗಳ ಕಾಲ ಭಾಷಣ ಮಾಡಿದ್ದು ವಿಶೇಷ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment