Advertisment

ಮಂಗಳೂರು: ಮೋದಿ ಕಾರ್ಯಕ್ರಮದಲ್ಲಿ ದಿಢೀರ್ ಬದಲಾವಣೆ; ಸಮಾವೇಶ ರದ್ದು ಮಾಡಿದ್ದೇಕೆ..?

author-image
Bheemappa
Updated On
ಮಂಗಳೂರು: ಮೋದಿ ಕಾರ್ಯಕ್ರಮದಲ್ಲಿ ದಿಢೀರ್ ಬದಲಾವಣೆ; ಸಮಾವೇಶ ರದ್ದು ಮಾಡಿದ್ದೇಕೆ..?
Advertisment
  • ನಗರದ ಲೇಡಿಹಿಲ್ ಬಳಿ ನಾರಾಯಣಗುರು ಸರ್ಕಲ್‌ನಿಂದ ರೋಡ್ ಶೋ
  • ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳನ್ನ ಸೇರಿಸಲು ಬಿಜೆಪಿ ತಯಾರಿ
  • ಆಯೋಜನೆಗೊಂಡಿದ್ದ ಬೃಹತ್ ಸಮಾವೇಶ ರದ್ದಾಗಿ ರೋಡ್ ಶೋ ಯಾಕೆ?

ರಾಜ್ಯದೆಲ್ಲೆಡೆ ಚುನಾವಣಾ ಕಾವು ಹೆಚ್ಚಾಗುತ್ತಿದ್ದಂತೆ ಪ್ರಧಾನಿ ಮೋದಿ ರಾಜ್ಯ ಪ್ರವಾಸ ಆರಂಭಿಸಿದ್ದಾರೆ. ಏ.14 ರಂದು ಮೋದಿ ಮಂಗಳೂರಿನಲ್ಲಿ ರೋಡ್ ಶೋ‌ ನಡೆಸಲಿದ್ದಾರೆ‌‌. ಕರಾವಳಿಯಲ್ಲಿ ಬಿಜೆಪಿ ಕೊನೆ ಗಳಿಗೆಯಲ್ಲಿ ಮೋದಿಯವರನ್ನ ಕರೆಸಿಕೊಳ್ಳುತ್ತಿದೆ. ಮಂಗಳೂರಿನಲ್ಲಿ ಆಯೋಜನೆಗೊಂಡಿದ್ದ ಬೃಹತ್ ಸಮಾವೇಶ ರದ್ದಾಗಿ ರೋಡ್ ಶೋ ಕಾರ್ಯಕ್ರಮ ಫೈನಲ್‌ ಆಗಿದೆ. ಮೋದಿ ಮಂಗಳೂರಿನಲ್ಲಿ ರೋಡ್ ಶೋ ನಡೆಸೋ ಹಿಂದಿರುವ ಸ್ಟಾಟರ್ಜಿ ಏನು?.

Advertisment

ದಕ್ಷಿಣ ಕನ್ನಡ 3 ದಶಕಗಳಿಂದಲೂ ಲೋಕಸಭಾ ಕ್ಷೇತ್ರ ಕೇಸರಿ ಪಾಳಯದ ಭದ್ರ ಕೊಟೆ. ಈ ಬಾರಿ ಕ್ಷೇತ್ರದಲ್ಲಿ ಬಿಜೆಪಿ ಭಾರೀ ಅಂತರದಿಂದ ಗೆಲುವು ಸಾಧಿಸುವ ಉತ್ಸಾಹದಲ್ಲಿದೆ. ಕ್ಷೇತ್ರ ಗೆಲ್ಲಲು ಸ್ಟಾರ್ ಪ್ರಚಾರಕರು ಬೇಡ ಅಂದುಕೊಂಡಿದ್ದ ಬಿಜೆಪಿ ಇದೀಗ ಸ್ಪಲ್ಪ ಶೇಕ್ ಆದಂತಿದೆ. ಇಷ್ಟು ವರ್ಷಗಳ ಕಾಲ ಆರಾಮಾಗಿ ಗೆಲ್ಲುತ್ತಿದ್ದ ಬಿಜೆಪಿಗೆ ಈ ಬಾರಿ ಕಾಂಗ್ರೆಸ್​ನಿಂದ ಪ್ರಬಲ ಪೈಪೋಟಿ ಸಿಗುವ ಮುನ್ಸೂಚನೆ ದೊರೆತಿದೆ.

[caption id="attachment_57682" align="alignnone" width="800"]publive-image ಬಿಜೆಪಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್​ನ ಪದ್ಮರಾಜ್ ರಾಮಯ್ಯ[/caption]

ಯುವ ನಾಯಕ ಪದ್ಮರಾಜ್ ರಾಮಯ್ಯರನ್ನ ಕಣಕ್ಕಿಳಿಸಿರುವ ಕಾಂಗ್ರೆಸ್

ಇದಕ್ಕೆ ಕಾರಣ ಕಾಂಗ್ರೆಸ್ ಈ ಬಾರಿ ಬಿಲ್ಲವ ಅಸ್ತ್ರ ಪ್ರಯೋಗಿಸಿದೆ. ಬಿಲ್ಲವ ಸಮುದಾಯದ ಮತದಾರರೇ ಅತೀ ಹೆಚ್ಚು ಹಾಗೂ ನಿರ್ಣಾಯಕ ಆಗಿರೋ ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಲ್ಲವ ಸಮುದಾಯದ ಯುವ ನಾಯಕ, ಹೊಸಮುಖ ಪದ್ಮರಾಜ್ ರಾಮಯ್ಯರನ್ನ ಕಣಕ್ಕಿಳಿಸಿದೆ. ಬಿಜೆಪಿ ಯುವ ನಾಯಕ ಬಂಟ ಸಮುದಾಯದ ಕ್ಯಾಪ್ಟನ್ ಬ್ರಿಜೇಶ್ ಚೌಟರನ್ನ ಕಣಕ್ಕಿಳಿಸಿದೆ. ಈ ಬಾರಿ ಬಿಲ್ಲವ ಮತದಾರರನ್ನು ಸೆಳೆಯಲು ಕಾಂಗ್ರೆಸ್ ರಣತಂತ್ರ ಹೆಣೆದಿದ್ದು ಬಿಲ್ಲವ ಟ್ರಂಪ್ ಕಾರ್ಡ್ ಬಳಸಿ ಬಿಲ್ಲವ ಮತ ಸೆಳೆಯಲು ಮುಂದಾಗಿದೆ. ಈ ಹಿನ್ನೆಲೆ ಬಿಜೆಪಿ ಅಲರ್ಟ್ ಆಗಿದೆ.

Advertisment

ಮಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್​ ಶೋ

ಬಿಜೆಪಿ ಭದ್ರಕೋಟೆ ದಕ್ಷಿಣ ಕನ್ನಡವನ್ನ ಉಳಿಸಿಕೊಳ್ಳಲು ಮೋದಿ ಅನಿವಾರ್ಯತೆ ಇದೆ ಅಂತ ಬಿಜೆಪಿ ತನ್ನ ಬತ್ತಳಿಕೆಯಲ್ಲಿನ ಮೋದಿ ಅನ್ನೋ ಬ್ರಹ್ಮಾಸ್ತ್ರ ಪ್ರಯೋಗಿಸಿದೆ. ಪ್ರಧಾನಿ ಮೋದಿಯನ್ನು ಮಂಗಳೂರಿಗೆ ಬರಮಾಡಿಕೊಳ್ಳುತ್ತಿದೆ. ಮೊದಲಿಗೆ ಸಾರ್ವಜನಿಕ ಸಭೆ ಅಂತ ಹೇಳಿದ್ದ ಪ್ರಧಾನಿ ಕಚೇರಿ ಇದೀಗ ರೋಡ್ ಶೋ‌ ಎಂದು ತಿಳಿಸಿದೆ.

ಈ ಬಾರಿ ರೋಡ್ ಶೋ ಅನ್ನು ಆಯೋಜನೆ ಮಾಡಲಾಗಿದೆ. ಪ್ರತಿಯೊಬ್ಬರನ್ನು ಗಣನೆಗೆ ತೆಗೆದುಕೊಳ್ಳುವಂತ ನಿಧಾನವಾದ ರೋಡ್ ಶೋ ಇರುತ್ತದೆ. ಕಡಿಮೆ ಅವಧಿಯಲ್ಲಿ ಹೆಚ್ಚು ಕಿಲೋ ಮೀಟರ್ ರೋಡ್ ಶೋ ಮಾಡುವ ಪ್ರಯತ್ನ ಮಾಡಲಾಗುತ್ತಿದೆ.

ಜಗದೀಶ ಹಿರೇಮನೆ, ರಾಜ್ಯ ಚುನಾವಣಾ ಸಂಚಾಲಕ

ಮಂಗಳೂರಿಗೆ ‘ನಮೋ’

  • ಏ.14 ರಂದು ಮಂಗಳೂರಿನ ಗೋಲ್ಡ್ ಫಿಂಚ್ ಮೈದಾನದಲ್ಲಿ ಮೋದಿ ಸಮಾವೇಶ
  • ಆದ್ರೆ ಸಡನ್ ಕಾರ್ಯಕ್ರಮ ಬದಲಾಗಿದ್ದು ಮೋದಿ ರೋಡ್ ಶೋ ಮಾತ್ರ ಸೀಮಿತ
  • ಆದರೆ ಈ ನಡುವೆ ಮೋದಿ ಬೃಹತ್ ರೋಡ್ ಶೋ ನಡೆಸಲು‌ ಬಿಜೆಪಿ ಮುಂದು
  • ನಗರದ ಲೇಡಿಹಿಲ್ ಬಳಿಯ ನಾರಾಯಣಗುರು ಸರ್ಕಲ್‌ನಿಂದ ರೋಡ್ ಶೋ
  • ನಾರಾಯಣಗುರು ಪ್ರತಿಮೆಗೆ ಮೋದಿ ಮಾಲಾರ್ಪಣೆ ಮಾಡಿ ರೋಡ್ ಶೋ
  • ಲಾಲ್ ಬಾಗ್​ನಿಂದ ಬಳ್ಳಾಲ್ ಭಾಗ್, ಎಂ.ಜಿ ರಸ್ತೆ, ಪಿವಿಎಸ್ ಸರ್ಕಲ್
  • ನವಭಾರತ್ ಸರ್ಕಲ್-ಹಂಪನಕಟ್ಟೆಗೆ ಸುಮಾರು 2.5 ಕಿ.ಮೀ ರೋಡ್ ಶೋ
  • ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳನ್ನ ಸೇರಿಸಲು ಬಿಜೆಪಿ ತಯಾರಿ
Advertisment

ಇದನ್ನೂ ಓದಿ:ಚುನಾವಣೆ ಹೊತ್ತಲ್ಲಿ ಉಪಮುಖ್ಯಮಂತ್ರಿ ಶಿವಕುಮಾರ್​ಗೆ ಬಿಗ್ ಶಾಕ್ ಕೊಟ್ಟ ಲೋಕಾಯುಕ್ತ..!

publive-image

ನಮ್ಮ ಜಿಲ್ಲೆಯ ಕಾರ್ಯಕರ್ತರು, ಬೆಂಬಲಿಗರು ಇದರಲ್ಲಿ ಭಾಗವಹಿಸುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು, ಬೆಂಬಲಿಗರು, ಕಾರ್ಯಕರ್ತರು ಭಾಗವಹಿಸುವಂತೆ ನಾವು ಮಾಡುತ್ತೇವೆ.

ಸತೀಶ್ ಕುಂಪಲ, ಬಿಜೆಪಿ ಜಿಲ್ಲಾಧ್ಯಕ್ಷರು

ಮೋದಿ ರೋಡ್ ಶೋ ಆರಂಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪ್ರತಿಮೆಗೆ ಮಾಲಾರ್ಪಣೆ ಮಾಡೋದ್ರಲ್ಲೂ ಬಿಲ್ಲವ ಫ್ಯಾಕ್ಟರ್ ಇದೆ. ಬಿಲ್ಲವ ಸಮುದಾಯದ ಆರಾಧ್ಯ ಗುರುಗಳಾದ ಬ್ರಹ್ಮಶ್ರೀ ನಾರಾಯಣ ಗುರುವಿಗೆ ಮೋದಿ ಗೌರವ ನೀಡೋ ಮೂಲಕ ಬಿಲ್ಲವ ಸಮುದಾಯವನ್ನು ಸೆಳೆಯುವ ಪ್ರಯತ್ನವೂ ಇದಾಗಿದೆ. ಒಟ್ಟಿನಲ್ಲಿ ಈ ಬಾರಿ ಕರಾವಳಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ‌ನಡುವೆ ಜಿದ್ದಾಜಿದ್ದಿನ ಹೋರಾಟಕ್ಕೆ ಈ ಲೋಕಸಭಾ ಚುನಾವಣೆ ವೇದಿಕೆಯಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment