newsfirstkannada.com

2024 ‘ಲೋಕ’ ಸಮರ; BJPಯಿಂದ ಮೊದಲ ಪಟ್ಟಿ ರಿಲೀಸ್.. ಪ್ರಧಾನಿ ಮೋದಿ ಸ್ಪರ್ಧಿಸುವ ಕ್ಷೇತ್ರ ಯಾವುದು?

Share :

Published March 3, 2024 at 7:57am

    195 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಘೋಷಣೆ ಮಾಡಿದ ಬಿಜೆಪಿ

    2014, 2019ರಲ್ಲಿ ವಾರಣಾಸಿಯಿಂದ ಗೆಲುವು ಪಡೆದಿದ್ದ ಪ್ರಧಾನಿ ಮೋದಿ

    PM ಮೋದಿ ಈ ಬಾರಿ ಯಾವ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ?

ನವದೆಹಲಿ: 2024ರ ಲೋಕಸಭಾ ಚುನಾವಣೆಗೆ ಎಲ್ಲೆಡೆ ಸಿದ್ಧತೆ ನಡೆದಿದ್ದು ಎಲ್ಲ ಪಕ್ಷಗಳು ಅಭ್ಯರ್ಥಿಗಳ ಪಟ್ಟಿಯನ್ನು ರೆಡಿ ಮಾಡುತ್ತಿವೆ. ಇದರ ಮಧ್ಯೆ ಬಿಜೆಪಿ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟ್ಟು 195 ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿದ್ದು ಇದರಲ್ಲಿ 34 ಸಚಿವರ ಹೆಸರುಗಳು ಇವೆ. ಪ್ರಧಾನಿ ನರೇಂದ್ರ ಮೋದಿ ಕೂಡ ಮತ್ತೆ ವಾರಣಾಸಿಯಿಂದ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ಹೇಳಿದೆ.

ಉತ್ತರಪ್ರದೇಶದ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ಮೋದಿ ಹ್ಯಾಟ್ರಿಕ್ ಗೆಲುವು ಪಡೆಯಲು ಸಜ್ಜಾಗಿದ್ದಾರೆ. ಈ ಹಿಂದೆ 2014ರಲ್ಲಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಸ್ಪರ್ಧಿಸಿ ಅಮೋಘವಾದ ಗೆಲುವು ಪಡೆದಿದ್ದರು. ಮತ್ತೆ 2019ರಲ್ಲಿ ಸಮಾಜವಾದಿ ಪಕ್ಷದ ಶಾಲಿನಿ ಯಾದವ್ ವಿರುದ್ಧ ಗೆಲುವು ಪಡೆದಿದ್ದರು. ಈಗ ಮತ್ತೆ ವಾರಣಾಸಿಯಿಂದ ಹ್ಯಾಟ್ರಿಕ್​ ಗೆಲುವಿನ ನಿರೀಕ್ಷೆಯಲ್ಲಿ ಮೋದಿ ಇದ್ದಾರೆ. ಆದರೆ ಎದುರಾಳಿಯಾಗೆ ಸ್ಪರ್ಧಿಸುವವರು ಯಾರೆಂದು ಇನ್ನು ಗೊತ್ತಾಗಬೇಕಿದೆ.

ಬಿಜೆಪಿ ಪಕ್ಷದ ಪ್ರಧಾನ ಕಾರ್ಯದರ್ಶಿ ವಿನೋದ್ ತಾವಡೆಯವರು ಮೊದಲ ಪಟ್ಟಿಯನ್ನು ಘೋಷಣೆ ಮಾಡಿದರು. ಇದರಲ್ಲಿ 195 ಲೋಕಸಭಾ ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಅನೌನ್ಸ್​ ಮಾಡಲಾಗಿದೆ. ಇದರಲ್ಲಿ 16 ರಾಜ್ಯ ಹಾಗೂ 2 ಕೇಂದ್ರಾಡಳಿತ ಕ್ಷೇತ್ರದ ಹೆಸರುಗಳನ್ನು ಅಂತಿಮಗೊಳಿಸಲಾಗಿದೆ. ಪಟ್ಟಿಯಲ್ಲಿ 34 ಕೇಂದ್ರ ಸಚಿವರ ಹೆಸರಿದ್ದು 28 ಮಹಿಳೆಯರು ಇದ್ದಾರೆ. ಇನ್ನು 50ಕ್ಕಿಂತ ಕಡಿಮೆ ವಯಸ್ಸಿನ 47 ಅಭ್ಯರ್ಥಿಗಳ ಹೆರಿವೆ. 27 ಎಸ್​​ಸಿ, 18 ಎಸ್​​ಟಿ ಹಾಗೂ 57 ಒಬಿಸಿ ವರ್ಗದ ಅಭ್ಯರ್ಥಿಗಳ ಹೆಸರನ್ನು ಘೋಷಿಸಿಲಾಗಿದೆ ಎಂದು ತಿಳಿದು ಬಂದಿದೆ.

ಪ್ರಧಾನಿ ಮೋದಿ ಅವರ ಉಪಸ್ಥಿತಿಯಲ್ಲಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ ನಡ್ಡಾ ಅವರ ಅಧ್ಯಕ್ಷತೆಯಲ್ಲಿ ಫೆ.29 ರಂದು ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಈ ಹೆಸರುಗಳನ್ನು ಆಯ್ಕೆ ಮಾಡಲಾಗಿತ್ತು. ಅದರಂತೆ ದೇಶದ 195 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಹೆಸರನ್ನ ಅಂತಿಮಗೊಳಿಸಿ ನಿನ್ನೆ ಮೊದಲ ಪಟ್ಟಿಯನ್ನು ರಿಲೀಸ್ ಮಾಡಿದೆ ಎಂದು ಕರ್ನಾಟಕ ಬಿಜೆಪಿ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2024 ‘ಲೋಕ’ ಸಮರ; BJPಯಿಂದ ಮೊದಲ ಪಟ್ಟಿ ರಿಲೀಸ್.. ಪ್ರಧಾನಿ ಮೋದಿ ಸ್ಪರ್ಧಿಸುವ ಕ್ಷೇತ್ರ ಯಾವುದು?

https://newsfirstlive.com/wp-content/uploads/2023/12/pm-modi-42.jpg

Load More