newsfirstkannada.com

ದೇಶದ ಅತಿ ಉದ್ದದ ‘ಕೇಬಲ್ ಸೇತುವೆ’ ಇಂದು ಉದ್ಘಾಟನೆ; ಶ್ರೀಕೃಷ್ಣ, ಭಗವದ್ಗೀತೆ ಮತ್ತು ಕಾಲುದಾರಿ..!

Share :

Published February 25, 2024 at 8:48am

Update February 25, 2024 at 8:50am

    27.20 ಮೀಟರ್ ಅಗಲ, 4 ಪಥ.. ವಿಶಿಷ್ಟ ವಿನ್ಯಾಸ

    979 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಸೇತುವೆ ಇದು

    ಈ ಬೃಹತ್ ಸೇತುವೆಗೆ ಏನೆಂದು ಹೆಸರು ಇಡಲಾಗಿದೆ ಗೊತ್ತಾ?

ಪ್ರಧಾನಿ ನರೇಂದ್ರ ಮೋದಿ ಅವರು ಇವತ್ತು ಗುಜರಾತ್​ನ ದ್ವಾರಕದಲ್ಲಿ ದೇಶದ ಅತ್ಯಂತ ಉದ್ದದ ಕೇಬಲ್ ಸೇತುವೆಯನ್ನು ಉದ್ಘಾಟನೆ ಮಾಡಲಿದ್ದಾರೆ. ಈ ಕೇಬಲ್ ಸೇತುವೆಗೆ ‘ಸುದರ್ಶನ್ ಸೇತು’ ಹೆಸರು ಇಡಲಾಗಿದೆ.

ಇದು ಒಖಾ (Okha) ಮತ್ತು ಬೇಟ್ ದ್ವಾರಕ ಐಲ್ಯಾಂಡ್​ಗೆ (Beyt Dwarka island) ಸಂಪರ್ಕ ಕಲ್ಪಿಸಲಿದೆ. ಇದನ್ನು ಬರೋಬ್ಬರಿ 979 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು 2017, ಅಕ್ಟೋಬರ್​ನಲ್ಲಿ ಸೇತುವೆ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ಮಾಡಿದ್ದರು. ಇದು ಬರೋಬ್ಬರಿ 2.3 ಕೀಲೋ ಮೀಟರ್ ದೂರ ಇದೆ. ಸೇತುವೆಯಿಂದ ಹಳೆ ದ್ವಾರಕ ಮತ್ತು ನ್ಯೂದ್ವಾರಕ ನಡುವೆ ಹೊಸ ಬೆಸುಗೆಯನ್ನು ಬೆಸೆಯಲಿದೆ.

27.20 ಮೀಟರ್ ಅಗಲದ ಸೇತುವೆಯು ನಾಲ್ಕು ಪಥಗಳನ್ನು ಹೊಂದಿದ್ದು, 2.50 ಮೀಟರ್ ಅಗಲದ ಪಾದಚಾರಿ ರಸ್ತೆಕೂಡ ಇದೆ. ಈ ಸುದರ್ಶನ್ ಸೇತು ಒಂದು ವಿಶಿಷ್ಟ ವಿನ್ಯಾಸವನ್ನು ಹೊಂದಿದೆ. ಭಗದ್ಗೀತೆ ಶ್ಲೋಕಗಳಿಂದ ಅಲಂಕರಿಸಲ್ವಪಟ್ಟ ಕಾಲುದಾರಿಯ ಎರಡೂ ಬದಿಯಲ್ಲೂ ಶ್ರೀಕೃಷ್ಣನ ಫೋಟೋಗಳನ್ನು ಚಿತ್ರಿಸಲಾಗಿದೆ.

ಸಿಗ್ನೆಚರ್ ಬ್ರಿಡ್ಜ್​ ಎಂದು ಕರೆಯಲಾಗುತ್ತಿದ್ದ ಈ ಸೇತುವೆಗೆ ‘ಸುದರ್ಶನ್ ಸೇತು’, ಸುದರ್ಶನ್ ಬ್ರಿಡ್ಜ್ ಎಂದು ಮರುನಾಮಕರಣ ಮಾಡಲಾಗಿದೆ. ಬೇಟ್ ದ್ವಾರಕವು ಓಕಾ ಬಂದರು ಬಳಿಯಿರುವ ಸಣ್ಣ ಐಲ್ಯಾಂಡ್ ಆಗಿದೆ. ಇದು ದ್ವಾರಕದಿಂದ 30 ಕಿಲೋ ಮೀಟರ್ ದೂದಲ್ಲಿದೆ. ಇಲ್ಲಿ ಪ್ರಸಿದ್ಧ ಶ್ರೀಕೃಷ್ಣನ ದ್ವಾರಕೀಶ ದೇಗುಲ ಇದೆ.

ಇದೇ ವೇಳೆ ಪ್ರಧಾನಿ ಮೋದಿ ದ್ವಾರಕೀಶ ದೇಗುಲಕ್ಕೆ ಭೇಟಿ ನೀಡಲಿದ್ದಾರೆ. ಇಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಧ್ಯಾಹ್ನದ ವೇಳೆಗೆ ರಾಜ್​ಕೋಟ್​ನಲ್ಲಿ ನಿರ್ಮಾಣವಾಗಿರುವ ಮೊದಲ AIIMS ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ. 1,195 ಕೋಟಿ ರೂಪಾಯಿ ವೆಚ್ಚದಲ್ಲಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲಾಗಿದೆ. ಇದೇ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಆಂಧ್ರಪ್ರದೇಶ, ಪಂಜಾಬ್, ಉತ್ತರ ಪ್ರದೇಶ, ವೆಸ್ಟ್ ಬೆಂಗಾಲದಲ್ಲಿ ನಿರ್ಮಾಣವಾಗಿರುವ ಆಸ್ಪತ್ರೆಗಳನ್ನೂ ಉದ್ಘಾಟಿಸಲಿದ್ದಾರೆ. ಸಂಜೆ ಬಿಜೆಪಿಯ ಮೆಗಾ ಱಲಿಯಲ್ಲಿ ಭಾಗಿಯಾಗಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದೇಶದ ಅತಿ ಉದ್ದದ ‘ಕೇಬಲ್ ಸೇತುವೆ’ ಇಂದು ಉದ್ಘಾಟನೆ; ಶ್ರೀಕೃಷ್ಣ, ಭಗವದ್ಗೀತೆ ಮತ್ತು ಕಾಲುದಾರಿ..!

https://newsfirstlive.com/wp-content/uploads/2024/02/SUDARSHAN-SETU-1.jpg

Load More