ಕೇಂದ್ರದಿಂದ ಸರ್ಕಾರಿ ನೌಕರರಿಗೆ ಗುಡ್​ನ್ಯೂಸ್​​; ದೀಪಾವಳಿಗೆ ಸಿಗಲಿದೆ ಭರ್ಜರಿ ಬೋನಸ್​​​

author-image
Ganesh Nachikethu
Updated On
ದೀಪಾವಳಿಗೆ ಭರ್ಜರಿ ಗಿಫ್ಟ್​; ಕೇಂದ್ರ ಸರ್ಕಾರಿ ನೌಕರರಿಗೆ ಸಿಗುತ್ತಾ ಸ್ಪೆಷಲ್​ ಬೋನಸ್​​?
Advertisment
  • ದೀಪಾವಳಿ ಹೊತ್ತಲ್ಲೇ ಕೇಂದ್ರ ಸರ್ಕಾರಿ ನೌಕರರಿಗೆ ಗುಡ್​​ನ್ಯೂಸ್​
  • ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ಭರ್ಜರಿ ಗಿಫ್ಟ್​​
  • ದೀಪಾವಳಿಗೆ ಸರ್ಕಾರಿ ನೌಕರರಿಗೆ ಸಿಗಲಿದೆ ಭರ್ಜರಿ ಬೋನಸ್

ಸರ್ಕಾರಿ ನೌಕರರು ಆಯಾ ಸರ್ಕಾರದಿಂದ ದೀಪಾವಳಿ ಹಬ್ಬದ ಪ್ರಯುಕ್ತ ಭರ್ಜರಿ ನ್ಯೂಸ್​ಗಾಗಿ ಕಾಯುತ್ತಿದ್ದಾರೆ. ಕೇಂದ್ರ ಸರ್ಕಾರವಾಗಲಿ, ರಾಜ್ಯ ಸರ್ಕಾರವಾಗಲಿ ನೌಕರರಿಗೆ ಬೋನಸ್ ಎಂದು ಕಾದು ನೋಡಬೇಕಿದೆ. ಹಣದುಬ್ಬರದಿಂದ ಬೆಲೆಗಳು ಬಹಳ ಏರಿಕೆಯಾಗಿದೆ. ಹಾಗಾಗಿ ಡಿಎ ಮೊತ್ತವನ್ನು ಸಹ ಹೆಚ್ಚಿಸಲಿ ಎಂದು ಸರ್ಕಾರಿ ನೌಕಕರು ಬೇಡಿಕೆ ಇಟ್ಟಿದ್ದಾರೆ. ಇದರ ಮಧ್ಯೆ ಕೇಂದ್ರ ಸರ್ಕಾರಿ ನೌಕರರಿಗೆ ಗುಡ್​​ನ್ಯೂಸ್​ ಒಂದಿದೆ.

ಯೆಸ್​​, ಈ ವಾರದಲ್ಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ 3% ತುಟ್ಟಿಭತ್ಯೆ (DA) ಹೆಚ್ಚಳ ಘೋಷಿಸೋ ಸಾಧ್ಯತೆ ಇದೆ. ಹೀಗಾದ್ರೆ ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಹಬ್ಬಕ್ಕೆ ಭರ್ಜರಿ ಬೋನಸ್ ಸಿಗಲಿದೆ.

ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಈ ಸಂಬಂಧ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿದು ಬಂದಿದೆ. ಈ ಕುರಿತು ಅಕ್ಟೋಬರ್ 31ನೇ ತಾರೀಕು ಅಧಿಕೃತ ಘೋಷಣೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ದೀಪಾವಳಿ ಹೊತ್ತಲ್ಲೇ ತುಟ್ಟಿ ಭತ್ಯೆ ಹೆಚ್ಚಳ ಮಾಡುತ್ತಿದ್ದು, ಇದು ಕೇಂದ್ರ ಸರ್ಕಾರಿ ನೌಕರರಿಗೆ ಸಿಹಿಸುದ್ದಿ ಆಗಿದೆ.

ಸದ್ಯಕ್ಕಿರೋ DA ಎಷ್ಟು?

ಪ್ರಸ್ತುತ DA 50% ರಷ್ಟಿದೆ. ಕೇಂದ್ರ ಸರ್ಕಾರ 3% ತುಟ್ಟಿಭತ್ಯೆ ಹೆಚ್ಚಳ ಮಾಡಿದ್ರೆ, ಇದು ಜುಲೈ 1, 2024 ರಿಂದ 53% ಕ್ಕೆ ಏರಬಹುದು. ಇದು 1 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಉಪಯೋಗವಾಗಲಿದೆ. ಕಳೆದ ವರ್ಷ ಕೂಡ ಕೇಂದ್ರ ಸರ್ಕಾರ ದೀಪಾವಳಿ ಹಬ್ಬಕ್ಕೆ ಮುನ್ನ ತುಟ್ಟಿಭತ್ಯೆ ಹೆಚ್ಚಳ ಮಾಡಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment